ನೆನಸಿಟ್ಟ ವಾಲ್ನಟ್ ಪ್ರತಿದಿನ ತಿನ್ನೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

0 66

ಡ್ರೈ ಫ್ರೂಟ್ಸ್ ಗಳು ಸ್ವಲ್ಪ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ ದೇಹದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇವುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಸಾಮಾನ್ಯವಾಗಿ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಈ ಡ್ರೈ ಫ್ರೂಟ್ಸ್ ಗಳನ್ನು ಸಣ್ಣ ಮಕ್ಕಳಿಂದ ಇಡಿದು ವಯಸ್ಸು ಅದವರವರೆಗೂ ಯಾರು ಬೇಕದರೂ ಇವುಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಸೇವನೆ ಮಾಡಬಹುದು. ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಇವುಗಳ ಬಳಕೆ ಹೆಚ್ಚಾಗಿ ಸಿಹಿ ಪದಾರ್ಥದಲ್ಲಿ ಕಂಡುಬರುತ್ತದೆ. ಪ್ರತಿದಿನ ನಿಯಮಿತವಾಗಿ ಇವುಗಳನ್ನು ಸೇವನೆ ಮಾಡಿದರೆ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು.ಮಧುಮೇಹ ನಿಯಂತ್ರಿಸಲು ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಡ್ರೈಫ್ರೂಟ್ಸ್ ಸಹಾಯ ಮಾಡುತ್ತದೆ. ಮಧುಮೇಹ ಸಮಸ್ಯೆ ಇರುವವರು ಯಾವ ಡ್ರೈಫ್ರೂಟ್ಸ್ ಸೇವನೆ ಮಾಡಬಹುದು ಎಂದರೆ ಬಾದಾಮಿ ಬೀಜಗಳು.

ಇನ್ನು ನೆನಸಿದ ವಾಲ್ನಟ್ ಬೀಜಗಳು ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ತನ್ನಲ್ಲಿ ಒಳಗೊಂಡಿದೆ. ಮಧುಮೇಹ ಹೃದಯ ಸಮಸ್ಯೆಗೆ ದೇಹದ ತೂಕ ಇಳಿಸುವಲ್ಲಿ ಇಂತಹ ಹಲವಾರು ಸಮಸ್ಯೆಗಳಿಗೆ ವಾಲ್ನಟ್ ಸೇವನೆಯಿಂದ ಮುಕ್ಕಾಲುಪಾಲು ಪರಿಹಾರ ಸಿಗುತ್ತದೆ. ವಾರದಲ್ಲಿ ಎರಡು ಬಾರಿ ವಾಲ್ನಟ್ ಸೇವನೆ ಮಾಡುವುದರಿಂದ ಮಧುಮೇಹ ಬರುವ ಸಾಧ್ಯತೆ ಕಡಿಮೆ. ಇದನ್ನು ನೀರಿನಲ್ಲಿ ನೆನಸಿ ತಿನ್ನಬೇಕು.

ರಾತ್ರಿ ನೀರಿನಲ್ಲಿ ನೆನೆಯಲು ಹಾಕಿ ಬೆಳಗ್ಗೆ ಇದನ್ನು ಸೇವನೆ ಮಾಡಿದರೆ ಅದು ತುಂಬಾ ಒಳ್ಳೆಯದು. 2-4 ವಾಲ್ನಟ್ ನ್ನು ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ತಗ್ಗುವುದು.

ಈ ರೂಪದಲ್ಲಿ ಸೇವನೆ ಮಾಡಿದರೆ ಆಗ ವಾಲ್ನಟ್ ಬೇಗನೆ ಜೀರ್ಣವಾಗುವುದು. ವಾಲ್ನಟ್ ನಲ್ಲಿ ಇರುವಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸುಲಭವಾಗಲಿದೆ.

ವಾಲ್ನಟ್ ನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪೊಟಾಶಿಯಂ, ಕಬ್ಬಿಣಾಂಶ, ತಾಮ್ರ ಮತ್ತು ಸತುವಿನ ಅಂಶವಿದೆ. ನೆನೆಸಿಟ್ಟ ವಾಲ್ನಟ್ ಸೇವನೆ ಮಾಡಿದರೆ ಅದು ಚಯಾಪಚಯ ವೃದ್ಧಿಸುವುದು ಮತ್ತು ತೂಕ ಇಳಿಸಲು ಇದು ಸಹಕಾರಿ.

ವಾಲ್ನಟ್ ನಲ್ಲಿ ಒಳ್ಳೆಯ ಕೊಬ್ಬು ಇದ್ದು, ಇದು ದೀರ್ಘಕಾಲ ತನಕ ಹೊಟ್ಟೆ ತುಂಬುವಂತೆ ಮಾಡುವುದು ಹಾಗೂ ಅತಿಯಾಗಿ ತಿನ್ನುವುದರಿಂದ ಇದು ತಡೆಯುವುದು.

ವಾಲ್ನಟ್ ನಲ್ಲಿ ಇರುವಂತಹ ಮೆಲಟೊನಿನ್ ಅಂಶವು ನಿದ್ರೆಗೆ ತುಂಬಾ ಸಹಕಾರಿ ಆಗಿರುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ನಟ್ ಸೇವನೆ ಮಾಡಿದರೆ ಅದರಿಂದ ಒಳ್ಳೆಯ ನಿದ್ರೆಗೆ ತುಂಬಾ ಸಹಕಾರಿ ಆಗಿರುವುದು.

Leave A Reply

Your email address will not be published.