ಮಧುಮೆಹಿಗಳಿಗೆ ಬೆಲ್ಲದ ಬಗ್ಗೆ ಗೊತ್ತಿರದ ಮಾಹಿತಿ ಇದು!

0 145

ಮಧುಮೇಹ ದೀರ್ಘಕಾಲದ ಆರೋಗ್ಯ ಸಮಸ್ಯೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಕಾಣಿಸಿಕೊಳ್ಳುವುದು. ಇದರಲ್ಲಿ ಟೈಪ್-1 ಮತ್ತು ಟೈಪ್-2 ಮಧುಮೇಹ ಎನ್ನುವ ಎರಡು ವಿಧಗಳನ್ನು ಕಾಣಬಹುದು. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳು ನಾಶವಾದಾಗ ಟೈಪ್-1 ಮಧುಮೇಹ ಕಾಣಿಸಿಕೊಳ್ಳುವುದು. ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಅನ್ನು ನಮ್ಮ ದೇಹಕ್ಕೆ ಬಳಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ಟೈಪ್-2 ಮಧುಮೇಹ ಎಂದು ಪರಿಗಣಿಸುವರು. ಟೈಪ್-1 ಮಧುಮೇಹಕ್ಕಿಂತ ಟೈಪ್-2 ಮಧುಮೇಹವು ಹೆಚ್ಚು ಜನರಿಗೆ ಕಾಡುವುದು. ಈ ಆರೋಗ್ಯ ಸಮಸ್ಯೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳದಿದ್ದರೆ ಹೃದ್ರೋಗ, ಅಂಗವೈಫಲ್ಯತೆ, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುವುದು.

​ನೈಸರ್ಗಿಕ ಸಿಹಿ ಮತ್ತು ಮಧುಮೇಹ:

ಮಧುಮೇಹ ಇರುವವರಿಗೆ ಸಿಹಿಯನ್ನು ಸವಿಯುವ ಆಸೆ ಉಂಟಾಗುವುದು. ಆ ಸಂದರ್ಭದಲ್ಲಿ ಆದಷ್ಟು ನೈಸರ್ಗಿಕ ಸಿಹಿಗಳಾದ ಬೆಲ್ಲ, ಜೇನುತುಪ್ಪಗಳನ್ನು ಸವಿಯಬಹುದು. ಅದು ಸಹ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಸಂಸ್ಕರಿಸಿದ ಸಕ್ಕರೆ ಮತ್ತು ಸಕ್ಕರೆಯಿಂದ ತಯಾರಿಸಿದ ಆಹಾರವನ್ನು ಸೇವಿಸಬಾರದು. ಸಕ್ಕರೆ ಮತ್ತು ಸಂಸ್ಕರಿಸಿದ ಸಕ್ಕರೆ ಮತ್ತು ಬೆಲ್ಲವನ್ನು ತುಲನೆ ಮಾಡಿದರೆ ಬೆಲ್ಲವನ್ನು ಸ್ವೀಕರಿಸಬಹುದು. ಅದರಲ್ಲಿ ಯಾವುದೇ ರಾಸಾಯನಿಕಗಳು ಮತ್ತು ಸಂರಕ್ಷಕಗಳು ಇರುವುದಿಲ್ಲ. ರಾಸಾಯನಿಕ ಪದಾರ್ಥಗಳು ಇಲ್ಲದ ಹಾಗೂ ಕಡಿಮೆ ಇರುವಂತಹ ಅಹಾರ ಪದಾರ್ಥಗಳು ಹೆಚ್ಚು ಆರೋಗ್ಯಕರವಾಗಿರುತ್ತವೆ.

​ನೈಸರ್ಗಿಕ ಸಿಹಿ ಮಧುಮೇಹಿಗಳಿಗೆ ಸುರಕ್ಷಿತವಾಗಿರುವುದೇ?

ಮಧುಮೇಹಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಆದಷ್ಟು ಸಿಹಿ ಆಹಾರವನ್ನು ಸೇವಿಸದಿರಲು ಸಲಹೆ ನೀಡಲಾಗುವುದು. ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ ಇರುವ ಆಹಾರದಲ್ಲಿ ನೈಸರ್ಗಿಕ ಸಿಹಿಯು ಸಮೃದ್ಧವಾಗಿ ಇರುತ್ತದೆ. ಹಾಗಾಗಿ ಮಧುಮೇಹಿಗಳು ತಮ್ಮ ಆಹಾರದಲ್ಲಿ ಆಯ್ಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗದಂತೆ ನೋಡಿಕೊಳ್ಳುವುದರ ಮೂಲಕ ನೈಸರ್ಗಿಕ ಸಿಹಿಯನ್ನು ಮಿತವಾಗಿ ಸವಿಯಬಹುದು ಎಂದು ಸಲಹೆ ನೀಡಲಾಗುವುದು.

ಮಧುಮೇಹಿಗಳಿಗೆ ಬೆಲ್ಲ

ಬೆಲ್ಲವು ಸಕ್ಕರೆಗಿಂತ ಹೆಚ್ಚು ಆರೋಗ್ಯಕರವಾದದ್ದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಮಧುಮೇಹಿಗಳಿಗೆ ಸಕ್ಕರೆ ಮತ್ತು ಬೆಲ್ಲ ಎರಡು ಒಂದೇ. ಮಧುಮೇಹಿಗಳು ಬೆಲ್ಲವನ್ನು ಸೇವಿಸುತ್ತಿದ್ದರೆ ಅದನ್ನು ಮಿತವಾದ ಪ್ರಮಾಣದಲ್ಲಿ ಸೇವಿಸಬೇಕು. ಬೆಲ್ಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶವಿರುತ್ತದೆ. ಹಾಗಾಗಿ ಅತಿಯಾಗಿ ಬೆಲ್ಲವನ್ನು ಸವಿಯುತ್ತಿದ್ದರೆ ಅದನ್ನು ಮಿತಗೊಳಿಸಬೇಕು. ಬೆಲ್ಲದಲ್ಲಿ 84.4ರಷ್ಟು ಹೆಚ್ಚಿನ ಗ್ಲೈಸೆಮಿಕ್ ಇರುವುದರಿಂದ ಅದು ಮಧುಮೇಹಿಗಳಿಗೆ ಒಳ್ಳೆಯದಲ್ಲ.

​ಅಂತಿಮ ನಿರ್ಣಯ

ಕೃತಕ ಸಿಹಿ ಮತ್ತು ನೈಸರ್ಗಿಕ ಸಿಹಿಯಲ್ಲಿ ಯಾವುದು ಆರೋಗ್ಯಕರವಾದುದ್ದು? ಎನ್ನುವುದನ್ನು ಆರಿಸುವಾಗ ಖಂಡಿತವಾಗಿಯೂ ನೈಸರ್ಗಿಕವಾದ ಸಿಹಿಯು ಆರೋಗ್ಯಕರವಾದುದ್ದು. ಆದರೆ ಮಧುಮೇಹಿಗಳು ಸಿಹಿಯನ್ನು ಹೊಂದಿರುವ ಆಹಾರ ಸೇವಿಸುವಾಗ ಹೆಚ್ಚು ಕಾಳಜಿಯಿಂದ ಇರಬೇಕು. ಆದಷ್ಟು ಸಿಹಿ ತಿಂಡಿಯನ್ನು ನಿರಾಕರಿಸುವುದು ಅತ್ಯುತ್ತ. ಹಾಗೊಮ್ಮೆ ಸಿಹಿ ತಿನ್ನಬೇಕು ಎನ್ನುವ ಕಡು ಬಯಕೆ ಆದರೆ ಬೆಲ್ಲದಿಂದ ತಯಾರಿಸಿದ ಸಿಹಿಯನ್ನು ಕಡಿಮೆ ಪ್ರಮಾಣದಲ್ಲಿ ಸವಿಯಬಹುದು. ಆರೋಗ್ಯಕರವಾಗಿರುವ ವ್ಯಕ್ತಿಗಳು ಸಹ ಕೃತಕ ಸಿಹಿ ಹಾಗೂ ಸಕ್ಕರೆ ಹೊಂದಿರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸವಿಯಬೇಕು. ಇಲ್ಲವಾದರೆ ಅತಿಯಾದ ಬೊಜ್ಜು, ರಕ್ತದೊತ್ತಡ, ಮಧುಮೇಹ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಉಂಟಾಗುವುದು.

Leave A Reply

Your email address will not be published.