ತುಳಸಿ ವಿವಾಹ ಯಾವಾಗ?ಗುರುವಾರವೋ ಶುಕ್ರವಾರವೋ? ಮಹತ್ವವೇನು?

0 30,067

ಈ ವರ್ಷ ನವೆಂಬರ್‌ 24ನೇ ತಾರೀಕು ತುಳಸಿ ಪೂಜೆ ಇರುತ್ತದೆ. ತುಳಸಿಯ ಗಿಡವನ್ನು ಬೃಂದಾವನದಲ್ಲಿಯೇ ಇರಬೇಕು. ಬೃಂದಾವನಕ್ಕೆ ಬಿಳಿ ಬಣ್ಣವನ್ನು ಮಾತ್ರ ಹಚ್ಚಬೇಕು. ಅದರಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇರಿಸಬೇಕು. ಆನಂತರ ಅದನ್ನು ಸೊಗಸಾಗಿ ಕಾಣುವಂತೆ ಅಲಂಕರಿಸಬೇಕು ಬೃಂದಾವನದ ಮೇಲೆ ಮತ್ತು ಅದರ ಸುತ್ತಮುತ್ತ ಕೆಮ್ಮಣ್ಣಿನಿಂದ ಶುಭ ಕಿನ್ಹೆಗಳನ್ನು ರಂಗವಲ್ಲಿಯ ಸಹಿತ ಬರೆಯಬೇಕು.

ತುಳಸಿ ಪೂಜೆಯನ್ನು ಅಂದೆ ಮಾಡಬೇಕಾಗುತ್ತದೆ. ಈ ವರ್ಷದಲ್ಲಿ ನವಂಬರ್ ತಿಂಗಳ 24ನೆಯ ದಿನಾಂಕದಂದು ಉತ್ಥಾನ ದ್ವಾದಶಿ ಇರುತ್ತದೆ. ಅದೇ ದಿನ ಮಹಾ ಪ್ರದೋಷವಿರುವ ಕಾರಣ ವಿಶೇಷವಾದಂತಹ ಫಲಗಳು ದೊರೆಯುತ್ತವೆ ಬೃಂದಾವನದ ಬಳಿ ಎರಡು ಹಣತೆಯ ದೀಪಗಳನ್ನು ಇಡಬೇಕು. ಅವುಗಳಿಗೆ ಹೂಗಳನ್ನು ಸುತ್ತಿರಬೇಕು ಪೂಜೆ ಮಾಡುವ ಗೃಹಿಣಿಯು ಹಸಿರು ಬಟ್ಟೆಯನ್ನು ಧರಿಸಿ ಮಲ್ಲಿಗೆ ಹೂವನ್ನು ಮುಡಿಯಬೇಕು ಪೂಜೆ ಆರಂಭಿಸುವ ಮುನ್ನ ಮನೆಯಲ್ಲಿನ ಪೂಜಾ ಗೃಹದಲ್ಲಿರುವ ದೀಪವನ್ನು ಹೊತ್ತಿಸಬೇಕು ಕುಲದೇವರಿಗೆ ಮತ್ತು ಕುಟುಂಬದ ಹಿರಿಯರಿಗೆ ನಮಸ್ಕರಿಸಿ ತುಳಸಿ ಪೂಜೆಯನ್ನು ಆರಂಭಿಸುವುದು ಕ್ಷೇಮಕರ.

ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ಶಾಲಿಗ್ರಾಮ ದೇವರನ್ನು ಮದುವೆ ಮಾಡಿದರೆ ಭಕ್ತರಿಗೆ ಅವರ ಹಿಂದಿನ ಜನ್ಮದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ತುಳಸಿಯನ್ನು ವಿಷ್ಣುಪ್ರಿಯಾ ಎಂದೂ ಕರೆಯುತ್ತಾರೆ.

ಕಾರ್ತಿಕ ಮಾಸದ ನವಮಿ, ದಶಮಿ ಮತ್ತು ಏಕಾದಶಿಯಂದು ಉಪವಾಸ ಮತ್ತು ಪೂಜೆಯ ಮೂಲಕ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಮರುದಿನ ಬ್ರಾಹ್ಮಣರಿಗೆ ತುಳಸಿ ಗಿಡವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ವಿವಾಹ ಮಾಡುವವರಿಗೆ ದಾಂಪತ್ಯ ಸುಖ ಸಿಗುತ್ತದೆ.

Leave A Reply

Your email address will not be published.