ಸ್ವಸ್ತಿಕ್ ರಂಗೋಲಿ ತಪ್ಪಾಗಿ ಹಾಕಿದರೆ ಅನಾಹುತ ತಪ್ಪಿದ್ದಲ್ಲ ಸ್ವಸ್ತಿಕ್ ಚಿಹ್ನೆಯಲ್ಲಿದೆ ಅಸಮಾನ್ಯ ಶಕ್ತಿ

0 3,697

ಸ್ವಸ್ತಿಕ್ ಗೃಹಪ್ರವೇಶ ಇತರೆ ಶುಭಕಾರ್ಯ,  ವ್ಯಾಪಾರಸ್ಥರ ಕಾತಪುಸ್ತಕ, ಹೀಗೆ ಹಲವಾರು ಕಡೆ ಈ ಚಿಹ್ನೆ ಖಾಯಂ ಆಗಿ ಇದ್ದೆ ಇರುತ್ತದೆ. ಸನಾತನ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಶುಭ ಮತ್ತು ಪವಿತ್ರ ಚಿಹ್ನೆ ಎಂದು ಪರಿಗಣಿಸಲಾಗಿದೆ. ಸನಾತನ ಧರ್ಮದಲ್ಲಿ ಸ್ವಸ್ತಿಕ್  ಚಿಹ್ನೆಗೆ ಬಹಳ ಮಹತ್ವ ಕೊಡಲಾಗಿದೆ.ಈ ಚಿಹ್ನೆಯನ್ನು ಬಹಳ ಶುಭ ಎಂದು ಪರಿಗಣಿಸುತ್ತಾರೆ. ಶುಭ ಮಂಗಳಕರ ಕಾರ್ಯದಲ್ಲಿ ಈ ಚಿಹ್ನೆ ಬಳಸಲಾಗುತ್ತದೆ. ಈ ಚಿಹ್ನೆ ವಾಸ್ತುಶಾಸ್ತ್ರದಲ್ಲೂ  ಅಪಾರ ಮಹತ್ವ ಹೊಂದಿದೆ. ಪುರಾಣದಲ್ಲಿ ಕೂಡ ಈ ಚಿಹ್ನೆ ಬಳಸುತ್ತಾ ಸಂಪ್ರದಾಯವಾಗಿ ಅದನ್ನು ಬೆಳೆಸಿಕೊಂಡು ಬಂದಿದ್ದಾರೆ, ಸ್ವಸ್ತಿಕ್ ಎಂಬ ಸಂಕೇತ ತುಂಬಾ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಸ್ವಸ್ತಿಕ್ ಚಿಹ್ನೆಯನ್ನು ಕೆಲವರು ಗಣೇಶನ ರೂಪ ಎಂದು, ಇನ್ನೂ ಕೆಲವರು ಲಕ್ಷ್ಮಿಯ ರೂಪ ಎಂದು ಹೇಳುತ್ತಾರೆ, ಇನ್ನೂ ಕೆಲವರು ವಿಷ್ಣುವಿನ ರೂಪ ಎಂದು ಹೇಳುತ್ತಾರೆ.

ಸ್ವಸ್ತಿಕ್ ಮೂಲವೇ ಓಂಕಾರ ಇದು ಹೇಗೆ ಸ್ವಸ್ತಿಕ್ ಮತ್ತು ಓಂಕಾರವು ಏನು ಸಂಬಂಧ ಎಂದರೆ ಓಂಕಾರದ ಆಕಾರ ರೂಪವೇ ಸ್ವಸ್ತಿಕ್ ಚಿಹ್ನೆ. ಓಂಕಾರವನ್ನ  ಚಿಹ್ನೆ ರೂಪದಲ್ಲಿ ಬರೆದರೆ ಸ್ವಸ್ತಿಕ್ ಆಗುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ಯಾವುದು ಮೂಲಾಧಾರ ಎಂಬ ಚರ್ಚೆ ಈಗಲೂ ನಡೆಯುತ್ತಾ ಇದೆ. ಅದಕ್ಕೆ ಲಿಪಿ ಎಂಬುದು ಇಲ್ಲ ಇದನ್ನು ಕೆಲವರು ದೇವ ಭಾಷೆ ಎಂದು ಹೇಳುತ್ತಾರೆ. ಬ್ರಹ್ಮ ಲಿಪಿಯಲ್ಲಿ ಒಂದು ಅಕ್ಷರವಿದೆ ಓಂ ಅಕ್ಷರ ಸ್ವಸ್ತಿಕ್ ಅರ್ಧ ಭಾಗದಂತೆ ಇದೆ. ಶುಭ ಕಾರ್ಯದಲ್ಲಿ ಈ ಚಿಹ್ನೆ ಬಳಸುತ್ತಾರೆ. ಈ ಚಿಹ್ನೆ ಬಳಸುವಾಗ ತಪ್ಪು ಆಗುತ್ತದೆ ಕೆಲವರಿಗೆ ತಿಳಿಯುವುದೇ ಇಲ್ಲ. ಮೇಲಿನಿಂದ ಶುರುವಾಗಿ ಕೆಳಗೆ ಬರುವಂತೆ ಆರಂಭವಾಗುವ ರೀತಿ ಬರೆಯಬೇಕು, ವಿನಃ ಬೇರೆ ರೀತಿಯಲ್ಲಿ ಬರೆಯಬಾರದು ಇದು ಶುಭ ಮತ್ತು ಶಕ್ತಿಯುತ ಚಿಹ್ನೆ ಎಂದು ಹೇಳುತ್ತಾರೆ. ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕ್ ಚಿಹ್ನೆ ಹಾಕಬೇಕು, ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ವಾಸ್ತು ದೋಷ   ನಿವಾರಣೆಯಾಗುತ್ತದೆ.

ಈ ಸ್ವಸ್ತಿಕ್ಕನ್ನು ಕೆಂಪು ಮತ್ತು ಸಿಂಧೂರ ಬಣ್ಣದಲ್ಲೇ ಇರಬೇಕು. ಸ್ವಸ್ತಿಕ್ ಕೆಂಪು ಬಣ್ಣದಲ್ಲಿ ಹಾಕಿದರೆ ಶುಭಕರ ಅಂಗಳದಲ್ಲಿ ಹಾಕುವ ಮೂಲಕ ಶುಭ ಫಲಿತಾಂಶವನ್ನು ಪಡೆಯಬಹುದು. ಹಿರಿಯರ ಕೃಪೆ ಇದರಿಂದ ನಿಮ್ಮ ಮೇಲೆ ಇರುತ್ತದೆ, ಯಾವುದೇ ಕೆಟ್ಟ ಶಕ್ತಿಯ ಪರಿಣಾಮ ಉಂಟಾಗುವುದಿಲ್ಲ . ಸ್ವಸ್ತಿಕ್ ಚಿಹ್ನೆ ಮನೆಯ ದೇವರ ಕೋಣೆಯಲ್ಲಿ ಹೆಚ್ಚಾಗಿ ಕಾಣಬಹುದು ದೇವರ ಕೋಣೆಯಲ್ಲಿ ಹಾಕುವ ಸ್ವಸ್ತಿಕ್ ಚಿಹ್ನೆ ಮೇಲೆ ದೇವರನ್ನು ಪ್ರತಿಷ್ಠಾಪಿಸುವುದು ಉತ್ತಮ. ಇದರಿಂದ ಯಾವುದೇ ಆರ್ಥಿಕ ಕಟ್ಟು ಬರುವುದಿಲ್ಲ. ವಿಶೇಷವಾಗಿ ದೀಪಾವಳಿಯ ಸಂದರ್ಭದಲ್ಲಿ ಈ ಚಿಹ್ನೆ ಹಾಕಿ ಹೊಸಲಿಗೆ ಪೂಜೆ ಮಾಡಬೇಕು.

Leave A Reply

Your email address will not be published.