ಹಿರೇಕಾಯಿ ಇಂತವರು ಬಳಸೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗತ್ತೆ!

0 227

ಆಲೂಗಡ್ಡೆ,ಕ್ಯಾರೆಟ್, ಟೊಮ್ಯಾಟೋ, ಹುರುಳಿಕಾಯಿ ಮಾತ್ರ ತರಕಾರಿ ಅಂತ ಭಾವಿಸಿರೋ ಅದೆಷ್ಟೋ ಜನರು ಕೆಲವು ತರಕಾರಿಗಳನ್ನ ಸೇವನೆ ಮಾಡೋದಕ್ಕೆ ಹೋಗೋದಿಲ್ಲ.. ಹೋಗೋದಿರಲಿ ಅವುಗಳ ಹೆಸರು ಕೇಳಿದ್ರು ಮಾರುದ್ದ ದೂರ ಓಡ್ತಾರೆ.. ಹೀಗೆ ಜನರು ದೂರ ಓಡೋ ತರಕಾರಿಗಳಲ್ಲಿ ಹೀರೆಕಾಯಿ ಸಹ ಒಂದು. ಒಂದ್ ಸೈಡ್ ನಿಂದ ನೋಡಿದ್ರೆ ಹಾಗಲಾಕಯಿ ಅನ್ನೋ ಹಾಗೆ ಹೊರ ನೋಟಕ್ಕೆ ಕಾಣೋ ಹೀರೆಕಾಯಿ, ರುಚಿ ರುಚಿಯಾದ ಅಡುಗೆಗೆ ಸಹಕಾರಿ.. ಹೀಗಾಗಿಯೇ ಅದೆಷ್ಟೋ ಜನ ಮನೆಯಲ್ಲಿ ಹಿರೇಕಾಯಿ ಪಲ್ಯ, ಹಿರೇಕಾಯಿ ಸಾಂಬರ್, ಹಿರೇಕಾಯಿ ಸಿಪ್ಪೆ ಚಟ್ನಿ, ಹಿರೇಕಾಯಿ ಬಜ್ಜಿ ಅಂತೆಲ್ಲ ಮಾಡಿ ತಿನ್ತಾರೆ..ಇದೆಷ್ಟೇ ಅಲ್ಲದೆ ಪ್ರತಿನಿತ್ಯ ತಪ್ಪದೆ ಹಿರೇಕಾಯಿ ಸೇವನೆ ಮಾಡೋದ್ರಿಂದ್ದ ಅದೆಷ್ಟು ಪ್ರಯೋಜನ ಇದೆ ಅಂತ ಒಮ್ಮೆ ಗೊತ್ತಾದ್ರೆ ಹೀರೆಕಾಯಿ ಸೇವನೆ ಬೇಡಪ್ಪಾ ಅಂತ ದೂರ ಓಡೋ ಜನ ಬಯಸಿ ಬಯಸಿ ಹಿರೇಕಾಯಿ ಸೇವನೆ ಮಾಡೋದಕ್ಕೆ ಮುಂದಾಗ್ತಾರೆ..

ಅರೋಗ್ಯಕ್ಕೆ ಸಹಕಾರಿ ಹಿರೇಕಾಯಿ

ರುಚಿ ರುಚಿಯಾದ ಅಡುಗೆಗೆ ನೆರವಾಗುವ ಆಹಾರದ ನಾರುಗಳು, ನೀರಿನಾಂಶ, ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ6 ನಂತಹ ಅಗತ್ಯ ಅಂಶಗಳಿಂದ ಸಮೃದ್ಧವಾಗಿದೆ. ಇದು ನೈಸರ್ಗಿಕವಾಗಿ ಕ್ಯಾಲೋರಿ ಅಂಶ, ಅನಾರೋಗ್ಯಕರ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅಂಶಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಉತ್ಕರ್ಷಣ ನಿರೋಧಕಗಳು ಮತ್ತು ಆಲ್ಕಲಾಯ್ಡ್ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಹೀಗಾಗಿ ದೇಹದಲ್ಲಿನ ಅನೇಕ ಸಮಸ್ಯೆಗಳ ನಿಯಂತ್ರಣಕ್ಕೆ ಹಿರೇಕಾಯಿ ಮನೆ ಮದ್ದು.

1)) ಮಧುಮೇಹ ನಿಯಂತ್ರಣ: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ನರಳದ ಜನರೇ ಇಲ್ಲ.. ಎಷ್ಟೇ ಜಾಗೃತರಾಗಿದ್ರೂ ನಾವು ಸೇವನೆ ಮಾಡೋ ಆಹಾರ ಹಾಗೂ ನಮ್ಮ ಜೀವನ ಕ್ರಮದಿಂದ ಸಕ್ಕರೆ ಕಾಯಿಲೆ ಅನ್ನೋದು ನಮ್ಮನ್ನ ಕಾಡತೊಡಗಿದೆ. ಹೀಗಾಗಿ ಅತ್ಯಂತ ಕಡಿಮೆ ಕ್ಯಾಲೋರಿಗಳನ್ನ ಹೊಂದಿರುವ ಹೀರೆಕಾಯಿ ಹಲವು ಉತ್ಕರ್ಷಣ ನಿರೋಧಕ ಗುಣಗಳನ್ನ ಹೊಂದಿದೆ..ಹೀಗಾಗಿ ಹೀರೆಕಾಯಿ ಸೇವನೆ ಮಾಉವುದರಿಂದ ಮಧುಮೇಹಿಗಳು ಮಧುಮೇಹವನ್ನ ನಿಯಂತ್ರಣ ಮಾಡಬಹುದು

2)ದೃಷ್ಟಿ ದೋಷ ನಿವಾರಣೆ: ರಿಡ್ಜ್ ಸೋರೆಕಾಯಿಯಲ್ಲಿನ ವಿಟಮಿನ್ ಎ ಅಂಶ ಗಮನಾರ್ಹ ಹಾಗೂ ಪ್ರಮಾಣವು ದೃಷ್ಟಿ ಸುಧಾರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ. ಮ್ಯಾಕ್ಯುಲರ್ ಡಿಜೆನರೇಶನ್, ಭಾಗಶಃ ಕುರುಡುತನ ಮತ್ತು ಇತರ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹ ಹೀರೆಕಾಯಿ ಸಹಾಯ ಮಾಡುತ್ತದೆ. ಜೊತೆಗೆ ಹೀರೆಕಾಯಿ ಒಂದು ಆಂಟಿ – ಆಕ್ಸಿಡೆಂಟ್ ಕೂಡ ಆಗಿದ್ದು, ಇದರಲ್ಲಿರುವ ಬೀಟಾ – ಕ್ಯಾರೋಟಿನ್ ಅಂಶ ಕಣ್ಣಿನ ನರಗಳನ್ನು ಮತ್ತು ಕಣ್ಣಿಗೆ ಸಂಪರ್ಕ ಮಾಡುವ ರಕ್ತ ನಾಳಗಳನ್ನು ಯಾವುದೇ ವಿಷಕಾರಿ ಅಂಶಗಳಿಂದ ಪ್ರಭಾವಿತ ಆಗದಂತೆ ನೋಡಿಕೊಂಡು ಫ್ರೀ ರಾಡಿಕಲ್ ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತದೆ

3)ತೂಕ ನಷ್ಟಕ್ಕೆ ಸಹಕಾರಿ: ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಎಂಬುದು ಪ್ರತಿಯೊಬ್ಬರ ಕನಸು.. ಹೀಗಾಗಿ ತೂಕ ಇಳಿಕೆ ಮಾಡಲು ಜಿಮ್, ವ್ಯಾಯಾಮ ಅಂತೆಲ್ಲಾ ಮಾಡೋ ಜನರು ಡಯೆಟ್ ಕೂಡ ಮಾಡಿ, ಕೆಲವು ನಿರ್ದಿಷ್ಟ ಆಹಾರಗಳನ್ನ ಮಾತ್ರ ಸೇವನೆ ಮಾಡ್ತಾರೆ.. ಹೀಗೆ ಡಯೆಟ್ ಮಾಡಿ ತೂಕ ಇಳಿಕೆ ಮಾಡಿಕೊಳ್ಳಬೇಕು ಅಂದುಕೊಳ್ಳೋ ಜನರು ಹೀರೆಕಾಯಿ ಸೇವನೆ ಮಾಡಿದ್ರೆ ಅಗತ್ಯ. ಹೀರೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದ್ದು ತೂಕ ಇಳಿಕೆಗೆ ಸಹಕಾರಿ. ಇದು ಕಡಿಮೆ ಕ್ಯಾಲೊರಿ ಮತ್ತು ನೀರಿನ ಅಂಶವನ್ನು ಹೊಂದಿದೆ ಇದು ತೂಕ ನಷ್ಟಕ್ಕೆ ಸೂಕ್ತ ಆಯ್ಕೆಯಾಗಿದೆ.

4)ಮಲಬದ್ಧತೆ ನಿವಾರಣೆ: ಹಿರೇಕಾಯಿಯಲ್ಲಿ ಸೆಲ್ಯುಲೋಸ್ ಎಂಬ ನೈಸರ್ಗಿಕ ನಾರಿನ ಅಂಶ ಇದ್ದು ಇದು ಆಹಾರವನ್ನ ಸರಿಯಾಗಿ ಜೀರ್ಣ ಮಾಡುವಂತೆ ಮಾಡುತ್ತದೆ.. ಜೊತೆಗೆ ಹೀರೆಕಾಯಿ ಸೇವನೆ ಮಾಡುವುದು ದೇಹದಲ್ಲಿ ನಿರ್ಜಲಿಕರಣದ ಸಮಸ್ಯೆಯನ್ನ ತಪ್ಪಿಸುತ್ತದೆ.. ನಾವ ಸೇವಿಸುವ ಆಹಾರವನ್ನ ಸೂಕ್ತ ಪ್ರಮಾಣದಲ್ಲಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣವನ್ನ ಹೀರೆಕಾಯಿ ಸೇವನೆ ನಮ್ಮ ದೇಹಕ್ಕೆ ಒದಗಿಸುತ್ತದೆ

5)ಕಬ್ಬಿಣದ ಕೊರತೆ ನೀಗಿಸಲು ಸಹಕಾರಿ: ಪ್ರತಿನಿತ್ಯ ಹೀರೆಕಾಯಿ ಸೇವನೆ ಮಾಡುವುದರಿಂದ ಹೀರೆಕಾಯಿಯಲ್ಲಿನ ಕಬ್ಬಿಣದ ಅಂಶ ನಮ್ಮ ದೇಹ ಸೇರಲಿದೆ.. ಹೀಗಾಗಿ ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಬಳಲುವರು ಹೀರೆಕಾಯಿಯನ್ನ ತಪ್ಪದೆ ಬಳಸುವುದು ಸೂಕ್ತ

6)ರಕ್ತದ ವೃಧ್ಧಿ:  ಹೀರೆಕಾಯಿಯಲ್ಲಿ ವಿಟಮಿನ್ ’ ಬಿ6 ’ ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.

Leave A Reply

Your email address will not be published.