ಮಕ್ಕಳು ಈ ತಿಂಗಳಲ್ಲಿ ಜನಿಸಿದರೆ ಅದೃಷ್ಟ!

0 39,752

ಮಕ್ಕಳು ಈ ತಿಂಗಳಲ್ಲಿ ಜನಿಸಿದರೆ ಅದ್ರಷ್ಟ, ಯಾಕೆ? ಮತ್ತು ಲಾಭ ಏನು? ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಮತ್ತು ಯಾವ ತಿಂಗಳಲ್ಲಿ ಜನಿಸಿದರೆ ಅಪಾಯ? ಪರಿಹಾರ ಏನು? ಎನ್ನುವುದರ ಬಗ್ಗೆ ಇ ಲೇಖನದಲ್ಲಿ ತಿಳಿಸಿ ಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.

ಒಂದು ಮಗು ಅಮಾವಾಸ್ಯೆ ದಿನದಂದು ಜನಿಸಿದ ಮಗುವಿಗೆ ಬುದ್ಧಿಶಕ್ತಿ,ಮಾನಸಿಕ ಸಾಮರ್ಥ್ಯಗಳು ಕಡಿಮೆ ಯಾಗುತ್ತದೆ ಎನ್ನುವುದು ಸಾಮಾನ್ಯ ಕಲ್ಪನೆ. ಅಮಾವಾಸ್ಯೆ ದಿನದಂದು ಜನಿಸಿದ ಮಗುವಿನ ಆರೋಗ್ಯ ದುರ್ಬಲ ಆಗಿರ್ಬಹುದು ಮತ್ತು ಹೆಚ್ಚಿನ ಸಮಯದ ವರೆಗೆ ಮಾನಸಿಕ ತೊಂದರೆಗಳಾಗಬಹುದು. ಆದ್ದರಿಂದ ಜನರು ಸಾಮಾನ್ಯವಾಗಿ ತಮ್ಮ ಮಗುವಿನ ಜನನಕ್ಕಾಗಿ ಅಮಾವಾಸ್ಯೆಯ ತಿಥಿಯನ್ನು ತಪ್ಪಿಸುತ್ತಾರೆ. ಗ್ರಹಣ ಸಮಯದಲ್ಲಿ ಜನಿಸಿದ ಮಗು ತನ್ನ ಭವಿಷ್ಯದಲ್ಲಿ ಮಾನಸಿಕ ಅಡಚಣೆ ಮತ್ತು ತೊಂದರೆಗಳನ್ನು ಎದುರಿಸಬಹುದು.

ಶುಕ್ಲ ಪಕ್ಷ ದಲ್ಲಿ ಮಕ್ಕಳು ಜನಿಸಿದರೆ ಉತ್ತಮ ಏಕೆಂದರೆ ಶುಕ್ಲ ಪಕ್ಷದಲ್ಲಿ ಚಂದ್ರನು ಬಲವನ್ನು  ಪಡೆಯುತ್ತಾನೆ. ಲಾಭದಾಯಕ ಚಂದ್ರನು ಕುಂಡಲಿಯಲ್ಲಿ ಹಲವಾರು ರಾಜ ಯೋಗವನ್ನು ಸ್ರಷ್ಟಿಸುತ್ತಾನೆ. ಯೋಗ ಮತ್ತು ಅದ್ರಷ್ಟದೊಂದಿಗೆ ಆಶೀರ್ವಾಧಿಸುತ್ತಾನೆ. ದೀಪಾವಳಿಯಂದು ಅನೇಕ ದಂಪತಿಗಳು ತಮ್ಮ ಮಗುವಿನ ಜನನ ವಾಗಲಿ ಎಂದು ಬಯಸುತ್ತಾರೆ. ಏಕೆಂದರೆ ದೀಪಾವಳಿಯಂದು ಮಗು ಜನಿಸಿದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತದೆ ಎನ್ನುವ ನಂಬಿಕೆ ಇದೆ. ದೀಪಾವಳಿ ಅಮಾವಾಸ್ಯೆಯನ್ನು ಮಗುವಿನ ಜನನಕ್ಕೆ ಮಂಗಳ ಕರ ಎಂದು ಪರಿಗಣಿಸಲಾಗಿದೆ. ಮಹಾ ಶಿವರಾತ್ರಿಯು ಭಗವಾನ್ ಶಿವನ ಪ್ರಮುಖ ದಿನವಾಗಿದೆ. ಹಾಗಾಗಿ ಇ ದಿನದಂದು ಮಗು ಜನಿಸಿದರೆ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಪಿತೃಪಕ್ಷ ದಲ್ಲಿ ಮಗುವಿನ ಜನನವಾದರೆ ಮಂಗಳಕರ ಎಂದು ಪೂರ್ವಜರು ಹೇಳಿದ್ದಾರೆ.

ಜನವರಿ : ಜನವರಿಯಲ್ಲಿ ಜನಿಸಿದವರು ತುಂಬ ಅದ್ರಷ್ಟವಂತರು, ಮತ್ತು ನಾಯಕ್ತ್ವ ಗುಣವನ್ನು ಹೊಂದಿದ್ದಾರೆ. 

ಆಗಸ್ಟ್ : ಆಗಸ್ಟ್ನಲ್ಲಿ ಜನಿಸಿದವರು ತುಂಬ ಬುದ್ದಿವಂತರು ಮತ್ತು ಅದ್ರಷ್ಟ ವಂತರಾಗಿರುತ್ತಾರೆ. ಹಲವು ಪ್ರತಿಭಗಳನ್ನು ಹೊಂದಿರುತ್ತಾರೆ. ಮತ್ತು ಉತ್ತಮ ಜೀವನ ಸಂಗತಿಯನ್ನು ಪಡೆಯುತ್ತಾರೆ. 

ಅಕ್ಟೋಬರ್ : ಅಕ್ಟೋಬರ್ ನಲ್ಲಿ ಜನಿಸಿದವರು ಹೆಚ್ಚಿನ ಆಕರ್ಷಣೆಯನ್ನು ಹೊಂದಿರುತ್ತಾರೆ. ಮಾತನಾಡುವ ಕಲೆಯಲ್ಲಿ ಮತ್ತು ಜನರನ್ನು ತಮ್ಮ ಕಡೆ ಮಾಡಿಕೊಳ್ಳುವ ಕಲೆಯಲ್ಲಿ ಪರಿಣಿತರು. ಸಂಭಂದಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮಹತ್ವಕಾಂಕ್ಷೆ ಉಳ್ಳವರು ಮತ್ತು ದೊಡ್ಡ ಕನಸನ್ನು ಇಟ್ಟುಕೊಂಡಿರುತ್ತಾರೆ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಖ್ಯಾತಿಯ ಉತ್ತುಂಗವನ್ನು ತಲುಪುತ್ತಾರೆ. 

ಇದೆಲ್ಲವನ್ನು ಮೀರಿದ ಮತ್ತೊಂದು ವಿಷಯವಿದೆ ಅದೇನೆಂದರೆ ನಾವು ಏನೇ ಕನಸ್ಸು ಕಂಡರೆ ಅಥವಾ ಆಗುತ್ತದೆ ಎಂದು ಅಂದುಕೊಂಡರೆ ಆ ಕೆಲಸ ಆಗುವುದಿಲ್ಲ. ನಮ್ಮ ಮನಸ್ಸಿನಲ್ಲಿ ನಮ್ಮ ಮೇಲೆ ನಂಬಿಕೆ ಇದ್ದರೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.ಶುಭದಿನ. “ಪ್ರಯತ್ನಂ ಸರ್ವ ಸಿದ್ದಿ ಸಾಧನಂ

Leave A Reply

Your email address will not be published.