ಚಂದ್ರ ಗ್ರಹಣ 2024 : 100 ವರ್ಷಗಳ ಬಳಿಕ ಹೋಳಿ ಚಂದ್ರಗ್ರಹಣ ಗ್ರಹಗಳ ಅಶುಭ ಯೋಗ ಈ ರಾಶಿ ಬಾರಿ ತೊಂದರೆ!

0 704

ಚಂದ್ರ ಗ್ರಹಣ 2024 ; 100 ವರ್ಷಗಳ ಬಳಿಕ ಹೋಳಿ ಚಂದ್ರಗ್ರಹಣ ಗ್ರಹಗಳ ಅಶುಭ ಯೋಗ ಈ ರಾಶಿಗಳಿಗೆ ಭಾರಿ ತೊಂದರೆ ವೀಕ್ಷಕರೆ ಪ್ರತಿ ವರ್ಷ ಪಾಲ್ಗುಣ ಪೌರ್ಣಮಿಯ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಈ ಈ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹಬ್ಬದಂತೆ ಸಂಭವಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು ಒಂದು ನೂರು ವರ್ಷಗಳ ಬಳಿಕ ಹೋಳಿ ವೇಳೆ ಚಂದ್ರ ಗ್ರಹಣ ಸಂಭವಿಸುತ್ತಿದ್ದು ಆಶುಭ ಯುಗಳ ಪರಿಣಾಮವಾಗಿ ಕೆಲವೊಂದು ರಾಶಿಗಳು ಎಚ್ಚರಿಕೆಯಿಂದ ಇರಬೇಕು. ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸುತ್ತಿದ್ದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಮಾರ್ಚ್ 25 ರಂದು ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಗಲಿರುವ ಚಂದ್ರ ಗ್ರಹಣವು ಮಧ್ಯಾಹ್ನ 3:02ಕ್ಕೆ ಕೊನೆಗೊಳ್ಳಲಿದೆ.

ಇಲ್ಲಿ ಒಂದೆಡೆ ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹುವಿನ ಶುಭ ಸಮಯದಿಂದ ಗ್ರಹಣ ಯೋಗ ರೂಪುಗೊಳ್ಳುತ್ತಿದೆ. ಇನ್ನೊಂದಡೆ ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯಿಂದ ಅಶುಭ ಯೋಗ ರೂಪುಗೊಳ್ಳುತ್ತಿದೆ. ಈ ಅಶುಭ ಯುಗಳ ಪರಿಣಾಮವಾಗಿ ಕೆಲವು ರಾಶಿಗಳು ತುಂಬಾ ಎಚ್ಚರಿಕೆಯಿಂದ ಇರಬೇಕು. ಹಾಗಾದರೆ ಬನ್ನಿ ಇಲ್ಲಿ ಗ್ರಹಣದ ಕಾರಣವಾಗಿ ವಿರೋಧ ಫಲಗಳನ್ನು ಹೊಂದುತ್ತಲ್ಲಿರುವ ಆ ರಾಶಿಗಳು ಯಾವುದು ಎನ್ನುವುದನ್ನು ತಿಳಿಯೋಣ.

ಈ ಚಂದ್ರಗ್ರಹಣದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಬರಲಿದೆ. ಈ ಸಂದರ್ಭದಲ್ಲಿ ವ್ಯಕ್ತಿ ಬದುಕಿನಲ್ಲೂ ನಾನಾ ರೀತಿಯ ಸಮಸ್ಯೆಗಳು ಬರಲಿವೆ. ಹಾಗಾಗಿ ಇಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.

ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಒತ್ತಡವನ್ನು ಹೆಚ್ಚಿಸಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ನಿಮ್ಮ ಪರಿಶ್ರಮಕ್ಕೆ ಮನ್ನಣೆ ಸಿಗದೇ ಇರುವುದು ನಿಮಗೆ ಮಾನಸಿಕವಾಗಿ ಒತ್ತಡವನ್ನು ಹೇರಬಹುದು. ಹಾಗಾಗಿ ಮಾತುಗಳಲ್ಲಿ ಸಂಯಮ ಕಾಯ್ದುಕೊಳ್ಳುವುದು ಒಳ್ಳೆಯದು.

ಕನ್ಯಾ ರಾಶಿ ಇರುವ ಜನರು ವಿಶೇಷವಾಗಿ ಎಚ್ಚರಿಕೆಯನ್ನು ವಹಿಸಬೇಕು. ವೃತ್ತಿ ಜೀವನದಲ್ಲಿ ವೈಯಕ್ತಿಕ ಜೀವನದಲ್ಲಿ ನಕಾರಾತ್ಮಕ ಆಲೋಚನೆಗಳಿಗೆ ಮನ್ನಣೆಯನ್ನು ನೀಡಬೇಡಿ. ಅನಾವಶ್ಯಕವಾದ ವಿವಾದಗಳಿಂದ ದೂರ ಉಳಿಯುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು.

ಕುಂಭ ರಾಶಿಯವರಿಗೆ ನಿಮ್ಮ ಮಾತೆ ನಿಮಗೆ ಮೂಲವಾಗಿ ಕಾಡುವ ಸಾಧ್ಯತೆ ಇರುವುದರಿಂದ ನಿಜವಾದಷ್ಟು ನಿಮ್ಮ ನಾಲಿಗೆಗಳಿಗೆ ಕಡಿವಾಣ ಹಾಕಿ. ವ್ಯಾಪಾರದಲ್ಲಿ ದೊಡ್ಡ ನಷ್ಟ ಸಾಧ್ಯತೆ ಇರುವುದರಿಂದ ವಿಶೇಷ ಕಾಳಜಿ ವಹಿಸಿ.

ಮಿಥುನ ರಾಶಿಯವರಿಗೆ ಮಕ್ಕಳಿಂದಲೇ ನಿಮ್ಮ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ಈ ಸಮಯದಲ್ಲಿ ನೀವು ತಾಳ್ಮೆಯನ್ನು ಅಭ್ಯಾಸ ಮಾಡುವುದು ಒಳ್ಳೆಯದು. ವ್ಯಾಪಾರ ವ್ಯವಹಾರದಲ್ಲಿಯೂ ಕೈಸಿಟ್ಟುಕೊಳ್ಳುವ ಸಂಭವ ಇರುವುದರಿಂದ ಸ್ವಲ್ಪ ಎಚ್ಚರಿಕೆ ವಹಿಸಿರಿ.

Leave A Reply

Your email address will not be published.