ಈ ಕನಸುಗಳು ಬಿದ್ದರೆ ಲಕ್ಷ್ಮಿ ನಿಮ್ಮನ್ನು ಹುಡ್ಕೊಂಡ್ ಬರ್ತಾಳೆ

0 6,507

ನಾವು ಮಲಗಿದಾಗ ಕಾಣುವ ಕನಸೆಲ್ಲ ನನಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕನಸುಗಳು ಮಾತ್ರ ನನಸಾಗಲು ಸಾಧ್ಯ. ಇನ್ನು ಕೆಲವು ಕನಸಾಗಿಯೇ ಉಳಿದು ಬಿಡುತ್ತವೆ. ನಾವು ಕಾಣುವ ಕನಸುಗಳಿಗೂ ಕೂಡ ಒಂದೊಂದು ಅರ್ಥವಿರುತ್ತದೆ. ಆದರೆ ಈ ರೀತಿಯ ಕನಸುಗಳನ್ನ ನೀವು ಕಂಡ ರೆ ನಿಜವಾಗಿಯೂ ನೀವು ಸಾಕಷ್ಟು ಹಣ ವನ್ನುಗಳಿಸುತ್ತೀರಿ ಎಂದು ಅರ್ಥ. ಈ ರೀತಿಯ ಕನಸುಗಳು ಸಾಮಾನ್ಯವಾಗಿ ಕಾಣುವುದು ತುಂಬಾ ವಿರಳ ಆದರೂ ಕೂಡ ಕೆಲವು ವರಿಗೆ ಈ ರೀತಿಯ ಕನಸುಗಳು ಬಿದ್ದಿರಬಹುದು. ಆ ಕನಸುಗಳು ಯಾವು ವು ಅಂತ ನೋಡೋಣ.

ಕನಸಿನಲ್ಲಿ ಮಕ್ಕಳು ಕಾಣಿಸಿಕೊಂಡರೆ ನಿಮ್ಮ ಕನಸಿನಲ್ಲಿ ಕೇವಲ ಮಗು ಬಂದರೆ. ಸಣ್ಣ ಮುಗ್ಧ ಮಗುವೊಂದು ನಿಮ್ಮ ಕನಸಿನ ಲ್ಲಿ ಬಂದು ಮೋಜು ಮಾಡುತ್ತ ಕಿಡಿಗೇಡಿತನ ಮಾಡುತ್ತಿರಬೇಕು. ಈ ರೀತಿಯ ಚೇಷ್ಟೆ ಮಾಡುವ ಮಗುವಿನ ಕನಸು ಬಿದ್ದರೆ ಶೀಘ್ರ ದಲ್ಲೇ ಹಣವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಅರ್ಥ.
ವ್ಯವಹಾರದಲ್ಲಿರಬಹುದು ಅಥವಾ ವ್ಯಾಪಾರದಲ್ಲಿರಬಹುದು. ನಿಮಗೆ ಬರಬೇಕಾದ ಹಣ ಬಂದು ನಿಮ್ಮ ಕೈ ಸೇರುತ್ತದೆ ಅಥವಾ ನೀವು ಎಲ್ಲಿಯಾದರೂ ಈ ಹಿಂದೆ ಹೂಡಿಕೆ ಮಾಡಿದರೆ ಆ ಹಣ ವು ನಿಮ್ಮ ಕೈ ಸೇರ ಬಹುದಾಗಿದೆ.

ಸ್ನಾನ ಮಾಡುವಂತಹ ಕನಸು ಯಾವುದಾದರೂ ವ್ಯಕ್ತಿಯ ಕನಸಿನಲ್ಲಿ ಅಥವಾ ನಿಮ್ಮದೇ ಕನಸಿನ ಲ್ಲಿ ಬೇರೆ ಯಾವುದೋ ವ್ಯಕ್ತಿ ನಾನು ಮಾಡುವಂತೆ ಅಥವಾ ನೀವೇ ಸ್ನಾನ ಮಾಡುತ್ತಿರುವಂತೆ ಕನಸು ಬಿದ್ದರೆ ಲಕ್ಷ್ಮಿ ದೇವಿಯು ನಿಮ್ಮನ್ನು ಹುಡುಕಿಕೊಂಡು ಬರುತ್ತಾಳೆ ಎಂದು ಅರ್ಥ. ಈ ರೀತಿಯ ಕನಸು ಕಾಣುವುದರಿಂದ ನೀವು ಸಾಕಷ್ಟು ಹಣ ವನ್ನು ಕೂಡ ಗಳಿಸ ಬಹುದಾಗಿದೆ. ಒಂದು ವೇಳೆ ನಿಮ್ಮ ಕನಸಿನ ಲ್ಲಿ ಗಂಗೆಯ ಲ್ಲಿ ಸ್ನಾನ ಮಾಡುತ್ತಿರುವ ಕನಸು ಬಿದ್ದರೆ ನೀವು ಆದಷ್ಟು ಬೇಗ ಇಷ್ಟು ದಿನ ಸ್ಥಗಿತಗೊಂಡಿದ್ದ ಕೆಲಸ ವನ್ನು ಮಾಡಿ ಮುಗಿಸುತ್ತೀರಿ.

ಬಾಯಲ್ಲಿನ ಹಲ್ಲು ಮುರಿದಂತೆ ಕನಸು ಬೀಳುವುದು ನಿಮ್ಮ ಕನಸಿನ ಲ್ಲಿ ಬೇರಾರ ದೋ ಹಲ್ಲು ತುಂಡಾಗುವಂತೆ ಕನಸು ಬಿದ್ದರೆ ಅಥವಾ ಬೇರಾರೋ ನಿಮ್ಮ ಕನಸಿನ ಲ್ಲಿ ಪದೇ ಪದೇ ಹಲ್ಲ ನ್ನು ಉಜ್ಜುತ್ತಿದ್ದ ರೆ ಅದು ವೆ. ನೀವು ಆದ ಷ್ಟು ಬೇಗ ದೊಡ್ಡ ಮೊತ್ತದ ಹಣ ವನ್ನು ಪಡೆಯುತ್ತೀರಿ ಎಂದರ್ಥ.

ಇಂತಹ ಕನಸುಗಳ ನ್ನು ಕಾಣುವುದರಿಂದ ನಿಮ್ಮ ಜೀವನದಲ್ಲಿ ನೀವು ಆರ್ಥಿಕ ಅಭಿವೃದ್ಧಿ ಯನ್ನು ಕಾಣುತ್ತೀರಿ ಮತ್ತು ಉದ್ಯೋಗ ವ್ಯವಹಾರ ದಲ್ಲೂ ಕೂಡ ಲಾಭವನ್ನು ಗಳಿಸುತ್ತೀರಿ ಎಂದು ಈ ಕನಸು ಹೇಳುತ್ತದೆ. ಇನ್ನು ಕನಸಿನಲ್ಲಿ ರಕ್ತಪಾತ ರಾತ್ರಿ ನೀವು ಮಲಗಿದಾಗ ನಿದ್ದೆಯಲ್ಲಿ ರಕ್ತಪಾತದ ಕನಸು ಬಿದ್ದರೆ ನೀವು ಖಂಡಿತ ವಾಗಿಯೂ ಹಣ ಪಡೆಯುತ್ತೀರಿ. ಈ ಮೊದಲು ಯಾರಿಗಾದರೂ ನೀವು ಸಾಲ ನೀಡಿದ್ದು ಅವರು ಸಾಲ ವನ್ನು ಮರುಪಾವತಿಸ ದೆ. ನಿಮಗೆ ಆಟವಾಡಿಸುತ್ತಿದ್ದರೆ ಈ ಕನಸು ಬಿದ್ದ ನಂತರ ಸಾಲವು ಮರುಪಾವತಿಯಾಗುತ್ತದೆ. ಅಥವಾ ನೀವು ಎಲ್ಲೋ ಪಾವತಿಸಿರುವ ಹಣ ವು ನಿಮ್ಮ ಕೈ ಸೇರುವ ಸಾಧ್ಯತೆಯ ನ್ನ ಇದು ಸೂಚಿಸುತ್ತದೆ.

ಗೊರಕೆ ಹೊಡೆಯುವ ಕನಸು ಒಮ್ಮೆ ನಮಗೆ ಗೊರಕೆ ಹೊಡೆಯುವವರನ್ನ ನೋಡಿದಾಗ ಕೋಪ ಬರಬಹುದು ಅಥವಾ ಕಿರಿಕಿರಿಯಾಗಬಹುದು ಆದರೆ ಗೊರಕೆ ಹೊಡೆಯುವಂತಹ ಕನಸು ಬಿದ್ದರೆ ಏನಾಗುತ್ತದೆ ಗೊತ್ತ? ಒಂದು ವೇಳೆ ನಿಮಗೆ ಗೊರಕೆ ಹೊಡೆಯುತ್ತಿರುವಂತೆ ಕನಸು ಬಿದ್ದರೆ ಭವಿಷ್ಯ ದಲ್ಲಿ ಷೇರುಗಳಿಂದ ಅಥವಾ ಲಾಟರಿಗಳಿಂದ ಸಾಕಷ್ಟು ಹಣ ವನ್ನು ಪಡೆಯುವ ಸಾಧ್ಯತೆಯಿದೆ. ಅಷ್ಟು ಮಾತ್ರವಲ್ಲ, ಈ ರೀತಿಯ ಕನಸುಗಳು ನೀವು ಇದ್ದಕ್ಕಿದ್ದಂತೆ ಹಣ ವನ್ನು ಪಡೆಯುವ ಮುನ್ಸೂಚನೆ ಯನ್ನು ನೀಡುತ್ತದೆ. ಕೆಲಸ ಹುಡುಕುತ್ತಿರುವಂತೆ ಕನಸು ಪ್ರತಿಯೊಬ್ಬರಿಗೂ ಕೆಲಸ ಅತ್ಯಗತ್ಯ. ಉದ್ಯೋಗ ವಿದ್ದರೆ ಮಾತ್ರ ಸಮಾಜದಲ್ಲೊಂದು ಸ್ಥಾನ ಮಾನ ಮನ್ನಣೆ. ನೀವು ಮಲಗಿದ್ದಾಗ ಕೆಲಸಕ್ಕೆ ಹೋಗುವಂತಹ ಕನಸು ಬಿದ್ದರೆ ಅಥವಾ ಕೆಲಸ ವನ್ನು ಹುಡುಕಿಕೊಂಡು ಸಂದರ್ಶನಕ್ಕೆ ಹೋಗುವಂತಹ ಕನಸು ಬಿದ್ದರೆ ನೀವು ಶೀಘ್ರ ದಲ್ಲಿ ಸಾಕಷ್ಟು ಹಣ ವನ್ನು ಗಳಿಸುವಿರಿ. ಈ ರೀತಿಯ ಕನಸು ಬೇಸರ ವನ್ನುಂಟು ಮಾಡಿದರು ಕೂಡ. ಇದು ಉತ್ತಮ ಸಂದೇಶ ವನ್ನು ನೀಡುತ್ತದೆ.

ಕೃಷಿ ನೀರಾವರಿಯ ಕನಸು.ನಿಮಗೆ ಕೃಷಿಯ ಕುರಿತಂತೆ ಕನಸು ಬಿದ್ದರೆ ಅಥವಾ ಹೊಲ ಗದ್ದೆ ಗಳಿಗೆ ನೀರನ್ನು ಸಿಂಪಡಿ ಸುವಂತಹ ಕನಸು ಬಿದ್ದರೆ ಸಾಕಷ್ಟು ಸಂಪತ್ತು ನಿಮ್ಮದಾಗ ಲಿದೆ. ವ್ಯಾಪಾರ, ವ್ಯವಹಾರ ಗಳಲ್ಲಿ ಲಾಭ ವನ್ನೇ ಗಳಿಸುವಿರಿ. ಉದ್ಯೋಗದಲ್ಲಿ ರುವವರು ಬಡ್ತಿ ಹೊಂದುವ ಸಾಧ್ಯತೆಗಳಿವೆ ಮತ್ತು ಬೇರೆ ಉದ್ಯೋಗ ಹೊಂದಿರುವ ವರು ಮೇಲಧಿಕಾರಿ ಗಳಿಂದ ಪ್ರಶಂಸೆ ಯನ್ನು ಪಡೆಯುವ ಮುನ್ಸೂಚನೆ ಯನ್ನು ಇದು ಸೂಚಿಸುತ್ತದೆ.

Leave A Reply

Your email address will not be published.