ಪೇರಳೆ ಎಲೆ ಚಳಿಗಾಲದಲ್ಲಿ ಸಕ್ಕರೆ ಕಾಯಿಲೆ ಇದ್ದವರು ಒಮ್ಮೆ ಸೇವಿಸಿ!

0 41

ಸೀಬೆಕಾಯಿಯಲ್ಲಿ ಬಿಟಾ ಕೆರಾಟಿನ್, ಪೊಟಾಷ್ಯಿಯಂ ಹಾಗೂ ನಾರಿನಂಶ ಹೆಚ್ಚಾಗಿದ್ದು, ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿ. ಇನ್ನು ಇದಕ್ಕೆ ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣವಿರುವುದರಿಂದ ಹೃದಯದ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.ಪೇರಲೆ ಅಥವಾ ಸೀಬೆ ಹಣ್ಣಿನಿಂದ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳು ಸಿಗುವುದರ ಬಗ್ಗೆ ಗೊತ್ತಿರುವುದೇ. ಆದರೆ ಈ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ಪ್ರಯೋಜನಕಾರಿ. ಸೀಬೆ ಹಣ್ಣಿನ ಎಲೆಗಳು ಅತಿಸಾರ, ಕೊಲೆಸ್ಟ್ರಾಲ್ ನಿಯಂತ್ರಣ, ಮಧುಮೇಹ, ಮುಂತಾದವುಗಳಿಗೆ ಔಷಧಿಯಾಗಿ ಬಳಸಿಕೊಳ್ಳಬಹುದು.

ಪ್ರಕೃತಿದತ್ತವಾಗಿ ಸಿಗುವ ಹಣ್ಣುಗಳು ಹಲವಾರು ರೀತಿಯಿಂದ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂತಹ ಹಣ್ಣುಗಳಲ್ಲಿ ಪೇರಳೆ ಅಥವಾ ಸೀಬೆ ಹಣ್ಣು ಕೂಡ ಒಂದು. ಸಾಮಾನ್ಯವಾಗಿ ಸೀಬೆ ಹಣ್ಣುಗಳು ವರ್ಷದ ಎಲ್ಲಾ ಸಮಯದಲ್ಲೂ ತುಂಬಾ ಸುಲಭವಾಗಿ ಹಾಗೂ ಅಗ್ಗವಾಗಿ ಸಿಗುವಂತಹ ಹಣ್ಣು.

ಇದನ್ನು ಸೇವನೆ ಮಾಡಿದರೆ, ಅದರಿಂದ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಹಿಂದಿನ ಕಾಲದಿಂದಲೂ ಪೇರಳೆ ಜೊತೆ ಅದರ ಎಲೆಗಳನ್ನು ಜ್ವರ ಮತ್ತು ಉರಿಯೂತ ಕಡಿಮೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ. ಇದು ಮಧುಮೇಹ ನಿರ್ವಹಣೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಪೇರಳೆ ಹಣ್ಣಿನ ಎಲೆಗಳಲ್ಲಿ ಇರುವ ಕೆಲವೊಂದು ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿ ಆಗಿದೆ ಎಂದು ಅಧ್ಯಯನಗಳು ಹೇಳಿವೆ.

ಆಲ್ಫಾ-ಗ್ಲುಕೋಸಿಡೇಸ್ ಎನ್ನುವ ಕಿಣ್ವವು ಪಿಷ್ಠ ಮತ್ತು ಇತರ ಕಾರ್ಬೋಹೈಡ್ರೇಟ್ಸ್ ನ್ನು ವಿಘಟಿಸುವುದು. ಮಧುಮೇಹ ನಿಯಂತ್ರಿಸಲು ಬಳಸಲಾಗುವಂತಹ ವೋಗ್ಲಿಬೋಸ್ ಗೆ ಇದನ್ನು ಹೋಲಿಸಲಾಗಿದೆ. ಆದರೆ ಪೇರಳೆ ಎಲೆಗಳ ಸಾರವು ಸ್ವಲ್ಪ ಲಘು ಪರಿಣಾಮ ಬೀರುವುದು ಎಂದು ಹೇಳಿವೆ.

ಸೀಬೆ ಹಣ್ಣಿನ ಎಲೆಗಳಿಂದ ಮಾಡಿಕೊಂಡಿರುವ ಕಷಾಯವನ್ನು ಕುಡಿದರೆ ಅದರಿಂದ ಮಧುಮೇಹದರಿಂದ ಕಾಡುವಂತಹ ಇತರ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.

ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಾಪಾಡುವ ಜತೆಗೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದು. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.ಸೀಬೆ ಹಣ್ಣಿನ ಎಲೆಗಳ ಕಷಾಯವನ್ನು ಕುಡಿದರೆ, ಅದರಿಂದ ಯಾವುದೇ ಅಡ್ಡ ಪರಿಣಾಮವು ಆಗದು. ಮಧುಮೇಹಕ್ಕೆ ಔಷಧಿ ಸೇವನೆ ಮಾಡುವ ಜತೆಗೆ ಪೇರಳೆ ಎಲೆಗಳ ಕಷಾಯ ಸೇವನೆ ಮಾಡಿದರೆ, ಅದರಿಂದ ಯಾವುದೇ ಅಡ್ಡ ಪರಿಣಾಮವು ಆಗದು. ಪೇರಳೆ ಎಲೆಗಳಿಂದಾಗಿ ಯಾವುದೇ ರೀತಿಯ ವಿಷಕಾರಿ ಅಂಶಗಳು ದೇಹವನ್ನು ಸೇರದು.

ಇದರ ಕಷಾಯ ಮಾಡುವುದು ಹೇಗೆ ?

  • ಮೊದಲು ಸ್ವಲ್ಪ ಸೀಬೆ ಹಣ್ಣಿನ ಎಲೆಗಳನ್ನು ಚೆನ್ನಾಗಿ ತೊಳೆಯಿರಿ
  • ಎರಡು ಕಪ್ ಕುದಿಯು ನೀರಿಗೆ ಇದನ್ನು ಹಾಕಿ
  • ಕೆಲವು ನಿಮಿಷ ಕಾಲ ಕುದಿಸಿ
  • ಸೋಸಿಕೊಂಡು ತಣ್ಣಗಾಗಲು ಬಿಡಿ ಮತ್ತು ಇದರ ಬಳಿಕ ಕುಡಿಯಿರಿ

ಇದು ಮನೆಮದ್ದು ಆಗಿರುವ ಕಾರಣದಿಂದ ಪ್ರತಿಯೊಬ್ಬರಿಗೂ ಪರಿಣಾಮಕಾರಿ ಆಗದು. ಕೆಲವರ ದೇಹಗುಣ ಹಾಗೂ ಮಧುಮೇಹದ ತೀವ್ರತೆಗೆ ಅನುಗುಣವಾಗಿ ಇದು ಕೆಲಸ ಮಾಡಬಹುದು. ನೀವು ಇದನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದರೆ ಒಳ್ಳೆಯದು.

Leave A Reply

Your email address will not be published.