ಹಲ್ಲಿ ದೇಹದ ಈ ಭಾಗದ ಮೇಲೆ ಬೀಳಬಾರದು!

0 85

ಹಲ್ಲಿ ಬಿದ್ದರೆ ಆಪತ್ತು ಅನ್ನೋ ಭಯ ನಮ್ಮನ್ನು ಕಾಡುತ್ತಿರುತ್ತೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲ್ಲಿ ಬಿದ್ದರೆ ಶುಭ ಹಾಗೂ ಅಶುಭವು ಇದೆ. ಆದರೆ ಇದು ನಿರ್ಧಾರವಾಗುವುದು ಹಲ್ಲಿ ಬಿದ್ದ ಜಾಗ ಹಾಗೂ ಸಮಯ. ಕೆಲವೊಂದು ಸಮಯ ನಮಗೆ ಶುಭವಾಗಿದ್ರೆ, ಇನ್ನೂ ಕೆಲವು ಸಮಯಗಳು ನಮಗೆ ಅಶುಭವಾಗಲಿದೆ. ಅಷ್ಟಕ್ಕೂ ಹಲ್ಲಿ ಮೈ ಮೇಲೆ ಬೀಳುವ ನಂಬಿಕೆಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಉಲ್ಲೇಖವಾಗಿದೆ ಅಂತ ನೋಡೋಣ.

ಹಿಂದು ಸಂಪ್ರದಾಯದಲ್ಲಿ ಜ್ಯೋತಿಷ್ಯದ ಪ್ರಕಾರ ಪುರುಷ ಅಥವಾ ಮಹಿಳೆಯ ದೇಹದ ಯಾವ ಭಾಗದಲ್ಲಿ ಬಿದ್ದರೆ ಏನು ಅರ್ಥ ಎಂದು ಹೇಳಲಾಗಿದೆ. ಇದರ ನಂಬಿಕೆ ಹಾಗೂ ಅಪನಂಬಿಕೆ ಅವರವರಿಗೆ ಬಿಟ್ಟದ್ದು ಆದರೂ ನಮ್ಮ ಶಾಸ್ತ್ರದ ಪ್ರಕಾರ ಏನು ಹೇಳುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಜ್ಯೋತಿಶಷ್ಯಾಸ್ತ್ರದ ಪ್ರಕಾರ ಪುರುಷರ ಹಾಗೂ ಮಹಿಳೆಯರ ದೇಹ ಯಾವ ಭಾಗದಲ್ಲಿ ಬಿದ್ದರೆ ಏನರ್ಥ, ಯಾವುದು ಶುಭ, ಯಾವುದು ಅಶುಭ ಮುಂದೆ ನೋಡೋಣ:

  1. ಹಲ್ಲಿಯು ಪುರುಷರ ದೇಹದ ಯಾವ ಭಾಗದಲ್ಲಿ ಬಿದ್ದರೆ ಏನರ್ಥ
  • ತಲೆಯ ಮೇಲೆ ಬಿದ್ದರೆ ಏನೋ ಜಗಳ, ಕಲಹ ಅಥವ ಮನಸ್ಥಾಪ ಆಗುವ ಸಾಧ್ಯತೆ ಇದೆ ಎಂದರ್ಥ.
  • ತಲೆಯ ಮೇಲೆ ಬಿದ್ದರೆ ಸಾವಿನ ಭಯ ಕಾಡುತ್ತದೆ.
  • ನಾವು ಮಲಗಿದ್ದಾಗ ಕನಸು ಕಾಣುವ ವೇಳೆ ಹಲ್ಲಿ ಬಿದ್ದರೆ ಅಧಿಕಾರ ಅಥವಾ ನಮ್ಮ ಆಳ್ವಿಕೆಯನ್ನು ಕಳೆದುಕೊಳ್ಳುವುದನ್ನು ಸೂಚಿಸುತ್ತದೆ.
  • ಮುಖದ ಮೇಲೆ ಬಿದ್ದರೆ ಹಣದ ಲಾಭವನ್ನು ಸೂಚಿಸುತ್ತದೆ.
  • ಎಡಗಡೆಯ ಕಣ್ಣಿನ ಮೇಲೆ ಬಿದ್ದರೆ ನಿಮಗೆ ಶುಭ ಸುದ್ಧಿ ಕಾದಿದೆ.
  • ಬಲಗಡೆಯ ಕಣ್ಣಿನ ಮೇಲೆ ಬಿದ್ದರೆ ಸೋಲು, ವಿಫಲ ಪ್ರಯತ್ನ, ಏನನ್ನೋ ಕಳೆದುಕೊಳ್ಳುವುದನ್ನು ಸೂಚಿಸುತ್ತದೆ.
  • ಹಣೆಯ ಮೇಲೆ ಹಲ್ಲಿ ಬಿದ್ದರೆ ಯಾವುದಲ್ಲೂ ಆಸಕ್ತಿ ಇಲ್ಲದಿರುವುದು ಹಾಗೂ ನಮ್ಮ ಪ್ರೀತಿಪಾತ್ರರಿಂದ ದೂರಾಗುವುದನ್ನು ಸೂಚಿಸುತ್ತದೆ.
  • ಬಲಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ನಿಮಗೆ ಯಾವುದೋ ದುರ್ವಾತೆ ಕಾದಿದೆ ಎಂದರ್ಥ.
  • ಎಡ ಕಿವಿಯ ಮೇಲೆ ಬಿದ್ದರೆ ಲಾಭ ಹಾಗೂ ಸಾಕಷ್ಟು ಹಣ ನಿಮ್ಮದಾಗುತ್ತದೆ.
  • ಕೈ ಮೇಲೆ ಬಿದ್ದರೆ ಆರ್ಥಿಕ ನಷ್ಟ ಅಥವಾ ವಿಫಲತೆಯನ್ನು ಸೂಚಿಸುತ್ತದೆ.
  • ಮೊಣಕೈ ಮೇಲೆ ಹಲ್ಲಿ ಬಿದ್ದರೆ ಸೌಂದರ್ಯತ್ವ ಅಥವಾ ಉತ್ತಮ ಬದಲಾವಣೆಯನ್ನು ಸೂಚಿಸುತ್ತದೆ.
  • ಬೆರಳುಗಳ ಮೇಲೆ ಹಲ್ಲಿ ಬಿದ್ದರೆ ನಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸೂಚನೆಯಾಗಿದೆ.
  • ನಮ್ಮ ಬಲಗೈ ಮೇಲೆ ಬಿದ್ದರೆ ಸಮಸ್ಯೆ ಎದುರಾಗಬಹುದು, ಪರಿಸ್ಥಿತಿ ಬಿಗಡಾಯಿಸಬಹುದು ಎಂದರ್ಥ.
  • ನಿಮ್ಮ ಎಡಗೈ ಮೇಲೆ ಹಲ್ಲಿ ಬಿದ್ದರೆ ನಿಮಗೆ ನಾಚಿಕೆ ಅಗುವಂಥ ಸಂದರ್ಭ ಎದುರಾಗುತ್ತದೆ.
  • ತೊಡೆಯ ಮೇಲೆ ಬಿದ್ದರೆ ಬಟ್ಟೆ ಕಳೆದುಹೋಗುವ ಅಥವಾ ಹಾಳಾಗುವ ಸೂಚನೆ.
  • ಮೀಸೆಯ ಮೇಲೆ ಬಿದ್ದರೆ ಕೆಲವು ಕಷ್ಟಕರ ಸಂದರ್ಭ ಹಾಗೂ ಪರಿಸ್ಥಿತಿಗಳು ಎದುರಾಗುತ್ತದೆ ಎಂದರ್ಥ.
  • ಕಾಲಿನ ಮೇಲೆ ಹಲ್ಲಿ ಬಿದ್ದರೆ ಕಷ್ಟದ ಅಥವಾ ಸಮಸ್ಯಾತ್ಮಕ ಪರಿಸ್ಥಿತಿಗಳು ಮುಂದೆ ಎದುರಾಗಲಿದೆ ಎಂದರ್ಥ.
  • ಕಾಲಿನ ಹಿಂಭಾಗ ಹಲ್ಲಿ ಬಿದ್ದರೆ ಪ್ರವಾಸಕ್ಕೆ ಅಥವಾ ಪ್ರಯಾಣಕ್ಕೆ ಸಿದ್ಧರಾಗಿ ಎಂದರ್ಥ.
  • ಪಾದದ ಮೇಲೆ ಹಲ್ಲಿ ಬಿದ್ದರೆ ಇದು ಅನಾರೋಗ್ಯದ ಮುನ್ಸೂಚನೆ.
  1. ಮಹಿಳೆಯರ ದೇಹದ ಯಾವ ಭಾಗದಲ್ಲಿ ಹಲ್ಲಿ ಬಿದ್ದರೆ ಏನರ್ಥ?
  • ತಲೆಯ ಮೇಲೆ ಹಲ್ಲಿ ಬಿದ್ದರೆ ಸಾವಿನ ಭಯ ಕಾಡುತ್ತದೆ.
  • ಹೆಂಗಸರ ತಲೆ ಕೂದಲ ಮೇಲೆ ಹಲ್ಲಿ ಬಿದ್ದರೆ ಅನಾರೋಗ್ಯದ ಮುನ್ಸೂಚನೆ.
  • ಎಡಕಣ್ಣಿನ ಮೇಲೆ ಬಿದ್ದರೆ ನಿಮ್ಮ ಪತಿ ಅಥವಾ ಪ್ರೇಮಿಯಿಂದ ಹೆಚ್ಚು ಪ್ರೀತಿ ನಿಮ್ಮದಾಗುತ್ತದೆ.
  • ಬಲ ಕಣ್ಣಿನ ಮೇಲೆ ಹಲ್ಲಿ ಬಿದ್ದರೆ ಮಾನಸಿಕ ಒತ್ತಡ ನಿಮ್ಮದಾಗಬಹುದು.
  • ಬಲಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ಶುಭ ಸಂಕೇತವಾಗಿದ್ದು, ನೀವು ಗಂಡು ಮಗುವಿನ ತಾಯಿ ಆಗುತ್ತೀರಿ ಎಂದರ್ಥ.
  • ಬಲ ಕಿವಿಯ ಮೇಲ್ಭಾಗ ಹಲ್ಲಿ ಬಿದ್ದರೆ ಹಣದ ಲಾಭ ನಿಮಗಿದೆ ಎಂದರ್ಥ.
  • ತುಟಿಯ ಮೇಲೆ ಹಲ್ಲಿ ಬಿದ್ದರೆ ಜಗಳಕ್ಕೆ ಸಿದ್ಧರಾಗಿ ಎಂದರ್ಥ.
  • ತುಟಿಯ ಕೆಳಗೆ ಹಲ್ಲಿ ಬಿದ್ದರೆ ನಿಮಗೆ ಹೊಸ ವಸ್ತು ಸಿಗುತ್ತದೆ ಎಂದರ್ಥ.
  • ನಿಮ್ಮ ಎರಡು ತುಟಿಗಳ ಮೇಲೆ ಹಲ್ಲಿಬಿದ್ದರೆ ಜಗಳ ಅಥವಾ ಕಲಹ ಎದುರಾಗಬಹುದು ಎಂದರ್ಥ.
  • ದೇಹದ ಹಿಂಭಾಗ ಹಲ್ಲಿ ಬಿದ್ದರೆ ಸಾವಿನ ಸುದ್ದಿ ನಿಮ್ಮದಾಗಬಹುದು ಎಂದರ್ಥ.
  • ಕೈಗಳ ಮೇಲೆ ಹಲ್ಲಿ ಬಿದ್ದರೆ ಆರ್ಥಿಕ ಲಾಭ ಇದೆ ಎಂದು.
  • ನಿಮ್ಮ ಉಗುರುಗಳ ಮೇಲ ಹಲ್ಲಿ ಬಿದ್ದರೆ ಜಗಳ ಅಥವಾ ವಾದ-ವಿವಾದದ ಸೂಚನೆ.
  • ನಿಮ್ಮ ಎಡಗೈ ಮೇಲೆ ಹಲ್ಲಿ ಬಿದ್ದರೆ ನಿಮಗೆ ಮಾನಸಿಕ ಒತ್ತಡ ಎದುರಾಗುತ್ತದೆ ಎಂಬುದರ ಮುನ್ಸೂಚನೆ.
  • ನಿಮ್ಮ ಬೆರಳುಗಳ ಮೇಲೆ ಹಲ್ಲಿ ಬಿದ್ದರೆ ನಿಮಗೆ ಆಭರಣಗಳು ಸಿಗುತ್ತದೆ ಎಂದರ್ಥ.
  • ಬಲ ಮುಂಗೈ ಮೇಲೆ ಹಲ್ಲಿ ಬಿದ್ದರೆ ರೋಮಾನ್ಸ್‌, ಪ್ರೀತಿ,ಪ್ರೇಮ ಪ್ರಣಯದ ಸಂದರ್ಭ ಮುಂದೆ ಇದೆ ಎಂಬ ಸೂಚನೆಯಾಗಿದೆ.
  • ಭುಜಗಳ ಮೇಲೆ ಹಲ್ಲಿ ಬಿದ್ದರೆ ನಿಮಗೆ ಆಭರಣ/ಒಡವೆಗಳು ಮುಂದೆ ಸಿಗಲಿದೆ ಎಂದರ್ಥ.
  • ತೊಡೆಯ ಮೇಲೆ ಹಲ್ಲಿ ಬಿದ್ದರೆ ನೀವು ರೋಮಾನ್ಸ್‌, ಪ್ರೀತಿ,ಪ್ರೇಮ ಪ್ರಣಯವನ್ನು ಬಯಸುತ್ತಿದ್ದೀರಿ ಎಂದರ್ಥ.
  • ಮೊಣಕಾಲಿನ ಮೇಲೆ ಹಲ್ಲಿ ಬಿದ್ದರೆ ಪ್ರೀತಿ, ಒಲವು ಮತ್ತು ಆತ್ಮೀಯತೆಯ ಸಂಕೇತ.
  • ಪಾದದ ಮೇಲೆ ಹಲ್ಲಿ ಬಿದ್ದರೆ ಸಮಸ್ಯೆ ಅಥವಾ ಗೊಂದಲದ ಸಂಕೇತ.
  • ಕಾಲಿನ ಹಿಂಭಾಗ ಬಿದ್ದರೆ ನೆಂಟರು, ಸಂಬಂಧಿಕರು ಅಥವಾ ಸ್ನೇಹಿತರು ಮನೆಗೆ ಬರುವ ಸೂಚನೆ.
  • ಬಲಗಾಲಿನ ಮೇಲೆ ಹಲ್ಲಿ ಬಿದ್ದರೆ ನಿಮಗೆ ಸೋಲು ಅಥವಾ ನಷ್ಟವಾಗುವ ಸಾಧ್ಯತೆ ಇದೆ.
  • ಕಾಲಿನ ಬೆರಳ ಮೇಲೆ ಹಲ್ಲಿ ಬಿದ್ದರೆ ಗಂಡು ಮಗು ಜನಿಸುತ್ತದೆ ಎಂದರ್ಥ.
Leave A Reply

Your email address will not be published.