ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ / ಯಾರು ಮಾಡಬೇಕು? ಎಷ್ಟು ಬಾರಿ ಮಾಡಬೇಕು? ಉಪವಾಸ ನಿಯಮವೇನು?

0 120

ಹುಣ್ಣಿಮೆಯಲ್ಲಿ ಮಾಡುವಂತಹ ಸತ್ಯ ನಾರಾಯಣ ಸ್ವಾಮಿ ಪೂಜೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಈ ಭಾರಿ ಬಂದಿರುವ ಶ್ರಾವಣ ಹುಣ್ಣಿಮೆ ಆಗಸ್ಟ್ 11ನೇ ತಾರೀಕು ಗುರುವಾರ ಬೆಳಗಿನ ಜಾವಾ 10:39 ನಿಮಿಷಕ್ಕೆ ಪ್ರಾರಂಭವಾಗಿ ಆಗಸ್ಟ್ 12 ನೇ ತಾರೀಕು ಶುಕ್ರವಾರ ಬೆಳಗಿನ ಜಾವಾ 7:06 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಹಾಗಾಗಿ ಗುರುವಾರದ ದಿನ ಹುಣ್ಣಿಮೆಯನ್ನು ಆಚರಣೆ ಮಾಡಬಹುದು. ಸತ್ಯನಾರಾಯಣ ಪೂಜೆಯನ್ನು ಹುಣ್ಣಿಮೆ ಅಲ್ಲದೆ ಎಲ್ಲಾ ತರಹದ ಶುಭ ಕಾರ್ಯಗಳು ಕೂಡ ಈ ಸತ್ಯ ನಾರಾಯಣ ಪೂಜೆಯನ್ನು ಮಾಡುತ್ತಾರೆ.

ಸತ್ಯ ನಾರಾಯಣ ಏನು ಎಂದರೆ ವಿಷ್ಣುವಿನ ಒಂದು ರೂಪ. ಇದರ ಜೊತೆಯಲ್ಲಿ ನವಗ್ರಹಗಳಿಗೆ ಕೂಡ ಅಧಿಪತಿ ನವಗ್ರಹ ನಿಯಂತ್ರಣ ಮಾಡುವ ಸತ್ಯ ನಾರಾಯಣ ಸ್ವಾಮಿಗೆ ಪೂಜೆ ಮಾಡುವುದರಿಂದ ಯಾವುದೇ ರೀತಿಯ ಗ್ರಹ ಗತಿ ದೋಷಗಳು ಇದ್ದರು ಕೂಡ ನಿವಾರಣೆ ಮಾಡಿಕೊಳ್ಳಬಹುದು.ಸತ್ಯ ನಾರಾಯಣ ಪೂಜೆ ಮಾಡುವ ವಿಧಾನದ ಬಗ್ಗೆ ನಿಮಗೆ ಪುಸ್ತಕ ಇದೆ ಮತ್ತು ಆನ್ಲೈನ್ ನಲ್ಲಿ ಕೂಡ ಸಿಗುತ್ತದೆ.ಸತ್ಯ ನಾರಾಯಣ ಪೂಜೆಗೆ ಸಂಬಂಧ ಪಟ್ಟ ಕಥೆಗಳು ಕೂಡ ಇದೆ.5 ಅಧ್ಯಾಯಗಳು ಇರುತ್ತವೆ.5 ಅಧ್ಯಾಯಗಳನ್ನು ಓದಿ ಪೂಜೆಯನ್ನು ಮಾಡಬೇಕು.ಈ ಪೂಜೆಯನ್ನು ಮಾಡುವುದಕ್ಕೆ ಸತ್ಯ ನಾರಾಯಣ ಫೋಟೋ ತೆಗೆದುಕೊಳ್ಳಬಹದು.ಒಂದು ವೇಳೆ ಫೋಟೋ ಇಲ್ಲವಾದರೆ ವಿಷ್ಣು ಫೋಟೋ ಇಟ್ಟು ಪೂಜೆ ಮಾಡಬಹುದು.ಮೊದಲು ರಂಗೋಲಿ ಹಾಕಿ ಪೀಠವನ್ನು ಇಟ್ಟು ಹಳದಿ ಬಟ್ಟೆಯನ್ನು ಹಾಕಬೇಕು.

ನಂತರ ಪೀಠದ ಮೇಲೆ ಕಳಸವನ್ನು ಇಡುವುದಾದರೆ ಒಂದು ಪ್ಲೇಟ್ ಅಕ್ಕಿ ತೆಗೆದುಕೊಳ್ಳಬೇಕು.ಅಕ್ಕಿ ಮೇಲೆ ಸ್ವಸ್ತಿಕ್ ಚಿತ್ರ ಬರೆದು ಎರಡು ವಿಳೇದೆಲೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಅಕ್ಷತೆ ಹಾಕಬೇಕು. ನಂತರ ಕಳಸವನ್ನು ಪ್ರತಿಷ್ಠಾಪನೆ ಮಾಡಿಕೊಳ್ಳಬೇಕು. ಕಳಸದ ಒಳಗೆ ಅರಿಶಿಣ ಶ್ರೀಗಂಧ ಕುಂಕುಮ 5 ರೂಪಾಯಿ ಕಾಯಿನ್ ಅನ್ನು ಹಾಕಿ 5 ವಿಳೇದೆಲೆ ಜೊತೆಯಲ್ಲಿ ಮಾವಿನ ಎಲೆಯನ್ನು ಇಟ್ಟು ಕಾಯಿಯನ್ನು ಇಡಬೇಕು.ನಂತರ ಗೆಜ್ಜೆ ವಸ್ತ್ರವನ್ನು ಹೂವನ್ನು ಕಳಸಕ್ಕೆ ಮತ್ತು ಫೋಟೋಗೆ ಹಾಕಬೇಕು.

ಪ್ರಸಾದಕ್ಕೆ ಪ್ರತಿ ಹುಣ್ಣಿಮೆಯಲ್ಲಿ ಸಿಹಿ ಸಜ್ಜಿಗೆ ತುಂಬಾನೇ ಸತ್ಯ ನಾರಾಯಣಗೆ ತುಂಬಾನೇ ಪ್ರಿಯವಾದದ್ದು.ಹಾಗಾಗಿ ಸಿಹಿ ಸಜ್ಜಿಗೆ ಮಾಡಿಕೊಳ್ಳಬೇಕು. ಜೊತೆಗೆ ತಾಂಬೂಲ ಎಲೆ ಅಡಿಕೆ ಬಾಳೆಹಣ್ಣು ಮತ್ತು ತೀರ್ಥಕ್ಕೆ ತುಳಸಿ ನೀರನ್ನು ಹಾಕಿ ಇಟ್ಟುಕೊಳ್ಳಬೇಕು.ಮೊದಲು ಗಣೇಶ ಪೂಜೆ ಮಾಡಿದ ನಂತರ ಸತ್ಯ ನಾರಾಯಣ ಪೂಜೆ ಮಾಡಬೇಕಾಗುತ್ತದೆ. ಮುಖ್ಯವಾಗಿ ತುಪ್ಪದಿಂದ ದೀಪರಾಧನೆ ಮಾಡಿದರೆ ಒಳ್ಳೆಯದು.ಈ ರೀತಿಯಾಗಿ ಸರಳವಾಗಿ ಪೂಜೆಯ ಸಿದ್ಧತೆಯನ್ನು ಮಾಡಿಕೊಳ್ಳಬಹುದು.ಪೂಜೆಗೆ ಹಳದಿ ಮತ್ತು ಕೆಂಪು ಹೂವಿನಿಂದ ಅಲಂಕಾರ ಮಾಡಬೇಕು.ಮುಖ್ಯವಾಗಿ ತುಳಸಿ ಮಾಲೆ ತುಂಬಾನೇ ಮುಖ್ಯವಾದದ್ದು.

ಪ್ರತಿಯೊಬ್ಬರೂ ಈ ಪೂಜೆಯನ್ನು ಮಾಡಬಹುದು ಮತ್ತು ಫೋಟೋವನ್ನು ಇಟ್ಟುಕೊಳ್ಳಬಹುದು.ಸತ್ಯ ನಾರಾಯಣ ಫೋಟೋ ತೆಗೆದುಕೊಂಡು ಬಂದು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ವಿಶೇಷವಾಗಿ ಪ್ರತಿ ಹುಣ್ಣಿಮೆಯ ದಿನದಂದು ಸಿಹಿ ಸಜ್ಜಿಗೆ ಮಾಡಿ ನೈವೇದ್ಯ ಮಾಡಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಕಷ್ಟಗಳು ಬೇಗ ಪರಿಹಾರವಾಗುತ್ತದೆ.ಕೊನೆಗೆ ಊದುಬತ್ತಿ ಬೆಳಗಿ ದೀಪರಾಧನೆಯನ್ನು ಮಾಡಿ.ನಂತರ ಸತ್ಯ ನಾರಾಯಣ ಒಂದೊಂದು ಕಥೆ ಓದಿ ಮಂಗಳಾರತಿ ಮಾಡಬೇಕು ಮತ್ತು ನಮಸ್ಕಾರ ಮಾಡಬೇಕು.ಈ ಪೂಜೆಯನ್ನು ಮಾಡುವಾಗ ತುಂಬಾ ಮಡಿಯಿಂದ ಮಾಡಬೇಕು.ಆದಷ್ಟು ಉಪವಾಸದಿಂದ ಪೂಜೆಯನ್ನು ಮಾಡಬೇಕು. ಅನ್ನವನ್ನು ಸೇವನೆ ಮಾಡಬಾರದು. ರಾತ್ರಿ ಸಮಯದಲ್ಲಿ ಊಟವನ್ನು ಮಾಡಬೇಕು.ಈ ಪೂಜೆ ಮಾಡುವಾಗ ಯಾವುದೇ ರೀತಿಯ ಜಗಳ ಆಡುವುದು ಮತ್ತು ನನ್ ವೆಜ್ ಮಾಡುವುದಾಗಲಿ ಮಾಡಬಾರದು.ಆದಷ್ಟು ಎಲ್ಲವನ್ನು ಅರ್ಥ ಮಾಡಿಕೊಂಡು ಪೂಜೆಯನ್ನು ಪ್ರಾರಂಭ ಮಾಡಿದರೆ ನಿಮ್ಮ ಕಷ್ಟಗಳು ಕೂಡ ಪರಿಹಾರ ಆಗುತ್ತದೆ.

Leave A Reply

Your email address will not be published.