ಮುಂಜಾನೆ ಎದ್ದು ಓದಿ ಇದರ ಹಿಂದಿನ ರಹಸ್ಯ ನಿಮಗೆ ಗೊತ್ತೇನು!

0 717

ಬಹಳಷ್ಟು ಸಲ ವಿದ್ಯಾರ್ಥಿಗಳಿಗೆ ಬಹಳಷ್ಟು ಜನರು ಬೆಳಿಗ್ಗೆ ಬೇಗ ಎದ್ದು ಓದಿರಿ ಅಂತ ಸಲಹೆಯನ್ನ ಕೊಡ್ತಾರೆ. ಹಾಗಾದ್ರೆ ಬೆಳಿಗ್ಗೆ ಬೇಗ ಎದ್ದು ಓದೋದ್ರಿಂದ ಅಷ್ಟೊಂದು ಪ್ರಯೋಜನ ಆಗುತ್ತಾ? ಅನ್ನೋ ಪ್ರಶ್ನೆ ನಿಮ್ಮದಾದ್ರೆ ಅದಕ್ಕೆ ಉತ್ತರ ಇಲ್ಲಿದೆ.ಬೆಳಿಗ್ಗೆ ಬೇಗ ಎದ್ದು ಓದೋದ್ರಿಂದ ಏನೆಲ್ಲಾ ಲಾಭ ಇದೆ ಅಂತ ತಿಳಿಯೋಣ ಬನ್ನಿ.

ನಿರಂತರ ಅಧ್ಯಯನ ಅನ್ನೋದು ವಿದ್ಯಾರ್ಥಿಯ ಯಶಸ್ಸಿಗೆ ದಾರಿಯಾಗಿರುತ್ತೆ. ವಿದ್ಯಾರ್ಥಿಗಳು ಪ್ರತಿದಿನ ಓದಿನ ಕಡೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಆದ್ದರಿಂದಲೇ ವಿದ್ಯಾರ್ಥಿಗಳ ಓದಿಗೆ ಪ್ರಸಕ್ತವಾದ ಸಮಯ ಯಾವುದು ಅಂದ್ರೆ ಅದು ಮುಂಜಾನೆಯ ಸಮಯವಾಗಿರುತ್ತೆ.

ಬೆಳಗ್ಗೆ ನಮ್ಮ ಮನಸ್ಸು ಬಹಳ ಪ್ರಶಾಂತವಾಗಿರುತ್ತೆ. ಇದು ಅಡೆ ತಡೆಗಳನ್ನ ಕಡಿಮೆ ಮಾಡುತ್ತೆ. ಆದ ಕಾರಣ ಓದಿನ ಕಡೆಗೆ ಏಕಾಗ್ರತೆಯಿಂದ ಹೆಚ್ಚಿನ ಗಮನವನ್ನು ನೀಡೋದಕ್ಕೆ ಸಾಧ್ಯವಾಗುತ್ತೆ. ಇದು ಜ್ಞಾನವನ್ನು ವೃದ್ಧಿಸಿಕೊಳ್ಳೋದಕ್ಕೆ ನೆರವನ್ನು ನೀಡುತ್ತೆ.

ಮುಂಜಾನೆ ನಮ್ಮ ಮನಸ್ಸಿನ ಹಾಗೆಯೇ ನಮ್ಮ ಸುತ್ತ ಮುತ್ತಲ ವಾತಾವರಣ ಕೂಡಾ ಪ್ರಶಾಂತವಾಗಿರುತ್ತೆ. ಸುತ್ತಮುತ್ತಲಿನ ಪ್ರಪಂಚ ನಿಶ್ಯಬ್ದ ವಾಗಿರೋದ್ರಿಂದ ಯಾವುದೇ ತೊಂದರೆ ಇಲ್ದೇ ಅಧ್ಯಯನ ಮಾಡೋದಕ್ಕೆ ಸಾಧ್ಯವಾಗುತ್ತೆ. ಇದರಿಂದ ನಿಮ್ಮ ಏಕಾಗ್ರತೆ ಕೂಡಾ ಹೆಚ್ಚಾಗುತ್ತೆ ಮತ್ತು ಓದಿನ ಚಟುವಟಿಕೆ ಹಿತಕರವಾಗಿರುತ್ತೆ.

ಬೆಳಗ್ಗೆ ಬೇಗ ಎದ್ದು ಓದಿನ ಮೂಲಕ ನಿಮ್ಮ ದಿನವನ್ನು ಪ್ರಾರಂಭ ಮಾಡಿದಾಗ, ನಿಮ್ಮಲ್ಲಿ ಒಂದು ಹೊಸ ಉತ್ಸಾಹ ಮೂಡುತ್ತೆ, ಅದರ ಜೊತೆಗೆ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸುತ್ತೆ, ಸಾಧನೆಯ ಹುರುಪು ಮೂಡುತ್ತೆ.

ಮುಂಜಾನೆ ಮಾಹಿತಿಯನ್ನ ಸ್ವೀಕರಿಸೋ ಮೆದುಳಿನ ಸಾಮರ್ಥ್ಯ ಗರಿಷ್ಠ ಮಟ್ಟದಲ್ಲಿ ಇರೋದ್ರಿಂದ, ಈ ಸಮಯದಲ್ಲಿ ಓದಿದ ವಿಷಯಗಳನ್ನ ಹೆಚ್ಚು ಸಮಹ ನೆನಪಿನಲ್ಲಿ ಇಟ್ಟುಕೊಳ್ಳೋದಕ್ಕೆ ಸಾಧ್ಯ. ಸುದೀರ್ಘವಾದ ಅಧ್ಯಯನ ಹಾಗೂ ವಿಷಯಗಳ ಪುನರ್ ಮನನ ಮಾಡೋದಕ್ಕೂ ಇದು ನೆರವಾಗುತ್ತೆ.

ಮುಂಜಾನೆ ಓದೋದ್ರಿಂದ ಒತ್ತಡ ಕಡಿಮೆಯಾಗುತ್ತೆ, ಓದಿನಲ್ಲಿ ವಿಳಂಬ ಆಗ್ತಿದೆ ಅಥವಾ ಓದಿನ ಚಟುವಟಿಕೆಯನ್ನು ಪೂರ್ತಿ ಮಾಡೋಕೆ ಆಗ್ತಿಲ್ಲ ಅನ್ನೋ ಆತಂಕ ದೂರವಾಗುತ್ತೆ. ಇದು ಮಾನಸಿಕವಾಗಿ ಬಲವನ್ನು ನೀಡುತ್ತೆ.

ಪರಿಣಾಮಕಾರಿಯಾದ ಸಮಯದ ನಿರ್ವಹಣೆಗೆ ಮುಂಜಾನೆಯ ಓದು ಬಹಳಷ್ಟು ಸಹಕಾರಿ. ಓದಿನ ವಿಚಾರದಲ್ಲಿ ಯಾವುದೇ ಚಟುವಟಿಕೆಗಳು ಅಪೂರ್ಣ ಆಗದೇ ಇರೋ ತರ ನೋಡಿಕೊಳ್ಳೋದಕ್ಕೆ ಇದು ನೆರವಾಗುತ್ತೆ. ಅಲ್ಲದೇ ಬೆಳಗಿನ ಓದಿನಿಂದ ನಿಮ್ಮ ಅಧ್ಯಯನಕ್ಕೆ ಇನ್ನೂ ಹೆಚ್ಚಿನ ಸಮಯ ಸಿಕ್ಕಂತಾಗುತ್ತೆ.

ಮುಂಜಾನೆ ಓದುವುದನ್ನು ಒಂದು ಅಭ್ಯಾಸ ಮಾಡಿಕೊಂಡ್ರೆ ಇದು ನಿಮ್ಮ ಶೈಕ್ಷಣಿಕ ಜೀವನದಲ್ಲೊಂದು ಶಿಸ್ತನ್ನು ತಂದುಕೊಡುತ್ತೆ, ಆರಂಭದಲ್ಲಿ ಇದು ಕಷ್ಟ ಅನಿಸಿದ್ರು ಕ್ರಮೇಣ ಇದು ನಿಮ್ಮ ಜೀವನದ ಒಂದು ಭಾಗವಾಗಿ ಬಿಡುತ್ತೆ.

ಮುಂಜಾನೆಯ ಓದಿನ ಕ್ರಮ, ಸ್ಪೂರ್ತಿಯನ್ನು ನೀಡುತ್ತಾ ಇಡೀ ದಿನ ಪ್ರಫುಲ್ಲವಾಗಿರುತ್ತೆ.

Leave A Reply

Your email address will not be published.