ಕಾರ್ತಿಕ ಮಾಸ ಕೊನೆಯ ಸೋಮವಾರ ಪವಿತ್ರವಾದ ದಿನ ಮತ್ತೆ ಬರುವುದಿಲ್ಲ ಈ ಮಂತ್ರವನ್ನು ಮನಸಿನಲ್ಲಿ ಅಂದುಕೊಂಡರೆ ಸಾಕು!
ಕಾರ್ತಿಕ ಮಾಸ ಸೋಮವಾರ ಅತ್ಯಂತ ಪವಿತ್ರವಾದ ದಿನ ಮಂಗಳಕರವಾದ ದಿನ ಎಂದು ಶಿವನನ್ನು ಬಹಳ ಶ್ರೇದ್ದೆಯಿಂದ ಪೂಜಿಸಲಾಗುತ್ತದೆ. ಹಿಂದೆ ರಾಕ್ಷಸನಾದ ತರಕನು ತನ್ನ ಮೂರು ಜನ ತಮ್ಮಂದಿರೊಂದಿಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ.ತಪ್ಪಾಸಿಗೆ ಮೆಚ್ಚಿದ ಬ್ರಹ್ಮ ಆ ಮೂರು ಜನ ಅಸುರ ಸಹೋದರರಿಗೆ ಅಂತರೀಕ್ಷಾದಲ್ಲಿ ತೆಲಡುವ ಮೂರು ನಗರಗಳನ್ನು ವರವಾಗಿ ನೀಡುತ್ತಾನೆ. ಹಾಗಾಗಿ ಈ ರಾಕ್ಷಸ ಸಹೋದರರಿಗೆ ತ್ರಿಪುರಸುರರು ಎಂದು ಹೆಸರು ಬರುವುದು.
ವರ ಸಿಕ್ಕಮೇಲೆ ಆ ರಾಕ್ಷಸರು ಇತಿಮಿತಿ ಇಲ್ಲದೆ ತಮ್ಮ ರಾಕ್ಷಸತನದಿಂದ ಮೆರೆಯುತ್ತಾರೆ. ಹಾಗೆಯೇ ಆ ಮೂರು ನಗರಗಳನ್ನು ಯಾರು ಕೇವಲ ಒಂದೇ ಬಾಣದಿಂದ ಸುಟ್ಟು ಬೂದಿ ಮಾಡುತ್ತಾರೋ ಅವರಿಂದ ಈ ಮೂರು ರಾಕ್ಷಸರಿಗೆ ಮರಣ ಎಂದು ಹೇಳುತ್ತಾನೆ ಬ್ರಹ್ಮ. ತ್ರಿಪುರಸುರರು ಸ್ವರ್ಗ ಲೋಕವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಇರುವ ದೇವತೆಗಳನ್ನು ಹೊರ ಹಾಕುತ್ತಾರೆ. ಆಗ ಆ ದೇವತೆಗಳು ದಾರಿ ಕಾಣದೆ ಪರಮೇಶ್ವರನನ್ನು ಮೊರೆ ಹೋಗುತ್ತಾರೆ.
ಶಿವ ತ್ರಿಪುರಸುರರು ಪಡೆದಿರುವ ವರದ ಮಾಹಿತಿಯನ್ನು ತಿಳಿದುಕೊಂಡು ನಂತರ ಎಲ್ಲಾ ದೇವತೆಗಳು ಸೇರಿ ತಮ್ಮ ಶಕ್ತಿಯನ್ನು ನೀಡುವುದರಿಂದ ಒಂದು ಬಾಣವನ್ನು ತಯಾರಿಸಿಕೊಳ್ಳುತ್ತಾನೆ.ಆ ಬಾಣದಿಂದ ಶಿವನು ಆ ಮೂರು ಜನ ರಾಕ್ಷಸರ ನಗರಗಳನ್ನು ಸುಟ್ಟು ಭಸ್ಮ ಮಾಡುತ್ತಾನೆ ಹಾಗು ತ್ರಿಪುರಸುರರನ್ನು ಸಹ ಸುಟ್ಟು ಹಾಕುತ್ತಾನೆ. ಹಾಗಾಗಿ ಶಿವನಿಗೆ ತ್ರಿಪುರಂತಕ ಎನ್ನುವ ಹೆಸರು ಬಂತು.
ಇನ್ನು ಕಡೆಯ ಸೋಮವಾರ ಶಿವನನ್ನು ಪೂಜೆಸಿ ಪಂಚಕ್ಷರಿ ಮಂತ್ರವನ್ನು ಜಪ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.
ಮೃತ್ಯುಂಜಯ ರುದ್ರಾಯ ನೀಲಕಂಠಾಯ ಶಂಭವೇ
ಅಮೃತೆಶಯ ಶರ್ವಾಯ ಮಹಾದೇವಯತೆ ನಮಃ..!!
ಈ ಮಂತ್ರವನ್ನು ಸಾಧ್ಯವಾದಷ್ಟು ಜಪ ಮಾಡಿ.ಹೀಗೆ ಜಪ ಮಾಡುವುದರಿಂದ ಕಾರ್ತಿಕ ಮಾಸದ ಸೋಮವಾರದ ಫಲ ಸಿದ್ದಿಸುತ್ತದೆ.