ಹನುಮ ಜಯಂತಿ ಆಚರಣೆಯಲ್ಲಿ ಈ ತಪ್ಪುಗಾಳದಲ್ಲಿ ಪೂಜೆಯ ಫಲ ಲಭಿಸದು!ಹನುಮಾನ್ ಚಾಲೀಸಾ ಪಠಿಸುವ ಸರಿಯಾದ ವಿಧಾನ
ಚೈತ್ರ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಹನುಮ ಜಯಂತಿಯನ್ನು ಆಚರಣೆ ಮಾಡುತ್ತೇವೆ.ಆದಷ್ಟು ಮಂಗಳವಾರ ಮತ್ತು ಶನಿವಾರದ ದಿನ ಕಪ್ಪು ಮತ್ತು ಬಿಳಿ ಬಟ್ಟೆ ಧರಿಸಬಾರದು. ಕೆಂಪು ಮತ್ತು ಹಳದಿ ಬಟ್ಟೆಯನ್ನು ಹಾಕಿಕೊಂಡು ಹೋಗಬೇಕು.
ಹನುಮನ್ ಜಯಂತಿ ಆಚರಣೆ ಮಾಡುವವರು ಉಪ್ಪನ್ನು ಸೇವನೆ ಮಾಡಬಾರದು.ಆದಷ್ಟು ಸಿಹಿ ಅಂಶವನ್ನು ಸೇವನೆ ಮಾಡಬೇಕು. ಉಪ್ಪು ಇರುವ ಪ್ರಸಾದವನ್ನು ಸೇವನೆ ಮಾಡಬಾರದು ಹಾಗು ಮಧ್ಯಾಹ್ನ ಸಮಯದಲ್ಲಿ ಮಲಗುವುದಕ್ಕೆ ಬರುವುದಿಲ್ಲ.
ಹನುಮಾನ್ ಜಯಂತಿ ದಿನ ತಪ್ಪದೆ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕಾಗುತ್ತದೆ ಹಾಗು ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾತನಾಡುವುದಕ್ಕೆ ಹೋಗಬೇಡಿ. ಹನುಮಾನ್ ಜಯಂತಿ ದಿನ ದೇವಸ್ಥಾನಕ್ಕೆ ಹೋದಾಗ ನಿಮ್ಮ ಕೈಲಿ ಆದಷ್ಟು ದುಡ್ಡು ಕೊಟ್ಟರೆ ಒಳ್ಳೆಯದು.
ಇನ್ನು ಆಂಜನೇಯ ಸ್ವಾಮಿಯನ್ನು ಸುಲಭವಾಗಿ ಒಲಿಸಿಕೊಲ್ಲುವ ಸುಲಭವಾದ ಮಂತ್ರ ಎಂದರೆ ಅದು ತುಳಸಿದಾಸರು ರಚಿಸಿರುವ ಹನುಮಾನ್ ಚಾಲೀಸಾ. ಇದನ್ನು ಓದುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ.
ಯಾವುದೇ ಕಾರಣಕ್ಕೂ ಹನುಮಾನ್ ಚಾಲೀಸವನ್ನು ಮಧ್ಯ ಭಾಗದಿಂದ ಓದಬಾರದು. ಬೇರೆಯವರು ಓದುವಾಗ ಅರ್ಧದಲ್ಲಿ ಸೇರಿಕೊಳ್ಳುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.
ಹನುಮಾನ್ ಚಾಲೀಸವನ್ನು ನೀವು ಪ್ರತಿದಿನ ಪಠಣೆ ಮಾಡುವವರಾಗಿದ್ದರೆ ನೀವು ಅನೈತಿಕ ಸಂಬಂಧ ಹೊಂದಿರಬಾರದು. ಸಂಗಾತಿಯನ್ನು ಬಿಟ್ಟು ಇತರರ ಜೊತೆ ಸಂಬಂಧ ಹೊಂದಿದ್ದರೆ ನಿಮಗೆ ಚಾಲೀಸ ಪಠಣೆಯ ಫಲ ಸಿಗುವುದಿಲ್ಲ.
ಹನುಮಾನ್ ಚಾಲೀಸ್ ಪಠಣೆ ಮಾಡುವಾಗ ನಮ್ಮ ಮನಸ್ಸು ಸ್ವಚ್ಛವಾಗಿರಬೇಕು. ಯಾವುದೇ ಕಾರಣಕ್ಕೂ ತಲೆಯಲ್ಲಿ ಕೆಟ್ಟ ಆಲೋಚನೆಗಳು ಬರಬಾರದು. ಆಗ ಮಾತ್ರ ನಿಮ್ಮ ಇಷ್ಟಾರ್ಥ ಈಡೇರುತ್ತದೆ.
ಹನುಮಾನ್ ಚಾಲೀಸ್ ಪಠಣೆ ಮಾಡುವಾಗ ಆಹಾರದ ಬಗ್ಗೆ ಗಮನ ಇಟ್ಟುಕೊಳ್ಳಬೇಕು. ಮದ್ಯಪಾನ ಮಾಡುವುದು ಸೇರಿದಂತೆ ತಾಮಸಿಕ ಆಹಾರಗಳನ್ನು ಸೇವನೆ ಮಾಡಬಾರದು.
ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ನೀವು ಬಡವರಿಗೆ ಹಾಗೂ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಬಡವರಿಗೆ ಸಹಾಯ ಮಾಡುವುದು ಉತ್ತಮ.
ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಬೇರೆಯವರಿಗೆ ಕೆಟ್ಟದ್ದಾಗಲಿ ಎಂದು ಆಲೋಚನೆ ಮಾಡಬಾರದು. ಬೇರೆಯವರಿಗೆ ಸಹಾಯ ಮಾಡಬೇಕು. ಈ ಸಮಯದಲ್ಲಿ ದಾನ-ಧರ್ಮ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.