ಬಾಯಲ್ಲಿ ಕೆಟ್ಟ ವಾಸನೆ ಹೋಗಲು ಹೀಗೆ ಮಾಡಿ!

0 278

ಹಲ್ಲುಗಳನ್ನು ಸರಿಯಾಗಿ ಉಚ್ಚದಿದ್ದರೆ ಬಾಯಲ್ಲಿ ಕೆಟ್ಟ ವಾಸನೆ ಬರಲಾರಂಭಿಸುತ್ತದೆ.ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಬೆಡ್ ಕಾಫಿ ಕುಡಿಯಲು ಹೋಗಬೇಡಿ. ಮೊದಲು ಸ್ವಚ್ಛವಾಗಿ ಹಲ್ಲು ಮತ್ತು ನಾಲಿಗೆಯನ್ನು ಉಜ್ಜಿಕೊಂಡು ಬಾಯಿ ತೊಳೆದುಕೊಂಡು ಆನಂತರ ಹಲ್ಲುಜ್ಜಿ.

ನೀವು ಹಲ್ಲುಜ್ಜುವ ಟೂಥ್ ಪೇಸ್ಟ್ ನಲ್ಲಿ ಪ್ಲೋರೈಡ್ ಅಂಶ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಜೊತೆಗೆ ರಾತ್ರಿ ಮಲಗುವ ಮುಂಚೆ ಕೂಡ ಪ್ರತಿ ದಿನ ಇದೇ ರೀತಿ ಹಲ್ಲುಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದರಿಂದ ಬಾಯಿಯ ದುರ್ವಾಸನೆ ದೂರವಾಗುವುದದರ ಜೊತೆಗೆ, ನಿಮ್ಮ ಬಾಯಿ ರೋಗಮುಕ್ತವಾಗುತ್ತದೆ.

ಅಲ್ಲದೆ ಸಕ್ಕರೆ ಮತ್ತು ಪಿಷ್ಟದ ಆಹಾರಗಳು ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಇದರಿಂದಲೂ ಬಾಯಲ್ಲಿ  ದುರ್ವಾಸನೆ ಬರುತ್ತದೆ.

ಬಾಯಲ್ಲಿ ಬರುವ ದುರ್ವಾಸನೆಯಿಂದಾಗಿ ಕೆಲವೊಮ್ಮೆ ಇದರಿಂದ ಇತರರ ಮುಂದೆ ಮುಜುಗರಕ್ಕೆ ಒಳಗಾಗುತ್ತೇವೆ. ಇದನ್ನು ಹೋಗಲಾಡಿಸಲು ಮನೆಯಲ್ಲಿಯೇ ಸಿಗುವ ಮನೆಮದ್ದುಗಳಿಂದ ಇದನ್ನು ಪರಿಹರಿಸಬಹುದು.

ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಕೂಡ ಅದು ಚಳಿಗಾಲ ಆಗಿರಲಿ ಅಥವಾ ಮಳೆಗಾಲ ಆಗಿರಲಿ ಇಲ್ಲ ಬೇಸಿಗೆಕಾಲ ಆಗಿರಲಿ, ನೀರು ಕುಡಿಯುವ ಅಭ್ಯಾಸದಿಂದ ಮಾತ್ರ ದೂರ ಉಳಿಯಬಾರದು.

ರಾತ್ರಿ ಮಲಗಿಕೊಳ್ಳುವ ಮುಂಚೆ ಒಮ್ಮೆ ನಿಮ್ಮ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಲು ಮೌತ್ ವಾಶ್ ಉಪಯೋಗಿಸಿ. ಇದರಿಂದ ನಿಮ್ಮ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರದ ಪಳೆಯುಳಿಕೆಗಳು ದೂರವಾಗುತ್ತವೆ.

ಒಂದು ವೇಳೆ ಆಲ್ಕೋಹಾಲ್ ಅಂಶವನ್ನು ಒಳಗೊಂಡ ಮೌತ್ವಾಷ್ ನಿಮಗೆ ಬಳಸಲು ಆಗದೇ ಇದ್ದರೆ, ಫ್ಲೋರೈಡ್ ಅಂಶವನ್ನು ಒಳಗೊಂಡ ಮತ್ತು ನಿಮ್ಮ ಬಾಯಿಯ ದುರ್ವಾಸನೆಯನ್ನು ಸುವಾಸನೆಯಾಗಿ ಬದಲಿಸುವ ಮೌತ್ವಾಷ್ ಬಳಕೆ ಮಾಡಬಹುದು.

ಬಬಲ್ ಗಮ್ ತಿಂದರೆ ಹಲ್ಲುಗಳು ಗಟ್ಟಿಯಾಗುತ್ತವೆ ಎಂದು ಹೇಳುತ್ತಾರೆ. ಆದರೆ ನೀವು ತಿನ್ನುವ ಬಬಲ್ ಗಮ್ ಸಕ್ಕರೆ ರಹಿತವಾಗಿರಬೇಕು ಅಷ್ಟೇ.

ಇದನ್ನು ಜಗಿಯುವುದರಿಂದ ಬಾಯಿಯಲ್ಲಿ ಎಂಜಲಿನ ಪ್ರಮಾಣ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಇದರಿಂದ ಹಲ್ಲುಗಳು ಮತ್ತು ನಾಲಿಗೆ ಸ್ವಚ್ಛವಾಗುತ್ತವೆ. ಬಾಯಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುವ ಸಾಧ್ಯತೆ ಇರುವುದಿಲ್ಲ.

ಬಾಯಿಯ ದುರ್ವಾಸನೆ ಹೋಗಲಾಡಿಸಲು ಮನೆಮದ್ದು

ಲವಂಗ

ದಿನದಲ್ಲಿ ಕಡಿಮೆ ಅಂತರದಲ್ಲಿ ಲವಂಗವನ್ನು ಅಗಿಯಿರಿ. ಲವಂಗವು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಮೂಲಕ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಹಲ್ಲಿನ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದು ಬಾಯಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಸೇಬುಗಳು ಮತ್ತು ಕ್ಯಾರೆಟ್

ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನುವುದರಿಂದ ಬಾಯಿಯ ದುರ್ವಾಸನೆ ಉಂಟಾಗುತ್ತದೆ.ಅದೇ ರೀತಿಯಲ್ಲಿ ಸೇಬು ಮತ್ತು ಕ್ಯಾರೆಟ್ ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ಹರ್ಬಲ್ ಪೌಡರ್

ಈ ಮನೆಯಲ್ಲಿ ತಯಾರಿಸಿದ ಹರ್ಬಲ್ ಪೌಡರ್‌ನಿಂದ ಹಲ್ಲುಜ್ಜುವುದರಿಂದ ನಿಮ್ಮ ಬಾಯಿಯ ದುರ್ವಾಸನೆ ಮತ್ತು ಹಲ್ಲುಗಳಿಂದ ಇತರ ಅನೇಕ ವಸ್ತುಗಳನ್ನು ತೊಡೆದುಹಾಕುತ್ತದೆ. ಇದನ್ನು ತಯಾರಿಸಲು ದಾಲ್ಚಿನ್ನಿ, ಬೇವಿನ ಎಲೆಗಳ ಪುಡಿ, ತುಳಸಿ ಎಲೆಗಳ ಪುಡಿ ಮತ್ತು ಅಡಿಗೆ ಸೋಡಾ ಎಲ್ಲವನ್ನು ಮಿಶ್ರಣ ಮಾಡಿ ಪುಡಿ ತಯಾರಿಸಿ. ಪ್ರತಿದಿನ ಇದರಿಂದ ಹಲ್ಲು ಉಜ್ಜಬೇಕು.

ನೀರು ಕುಡಿಯುವುದು

ಹೆಚ್ಚು ಹೆಚ್ಚು ನೀರು ಕುಡಿಯುವುದು ಒಂದು ಮಾರ್ಗವಾಗಿದೆ, ಇದರಿಂದ ಹೆಚ್ಚು ಲಾಲಾರಸ ಉತ್ಪತ್ತಿಯಾಗುತ್ತದೆ ಮತ್ತು ಬಾಯಿಯಲ್ಲಿ ಕೊಳಕು ಸಂಗ್ರಹವಾಗುವುದಿಲ್ಲ.

ಏಲಕ್ಕಿ

ಊಟ, ತಿಂಡಿಯಾದ ಬಳಿಕ ಒಂದು ಏಲಕ್ಕಿಯನ್ನು ಅಗೆಯುವುದಿರಂದ  ಬಾಯಲ್ಲಿರುವ ದುರ್ವಾಸನೆ ಕಡಿಮೆಯಾಗುತ್ತದೆ. ಇದರಿಂದ ತರರ ಮುಂದೆ ಮುಜುಗರಕ್ಕೆ ನೀವು ಒಳಗಾಗುವುದಿಲ್ಲ.

Leave A Reply

Your email address will not be published.