ದೀಪಾವಳಿಯಲ್ಲಿ ಈ 3 ವಸ್ತುಗಳ ಮೇಲೆ ದೀಪ ಹಚ್ಚುವುದು ಏಕೆ…? ಯಾವ ದಿನ ಹಚ್ಚಬೇಕು
ಈ ಒಂದು ದೀಪರಾಧನೆ ಮಾಡುವುದಕ್ಕೆ ಒಂದು ಪೀಠ ಬೇಕಾಗುತ್ತದೆ. ಪೀಠದ ಮೇಲೆ ಮೊದಲು ನೀವು ಅರಿಶಿನವನ್ನು ಹಚ್ಚಬೇಕು. ನಂತರ ರಂಗೋಲಿಯನ್ನು ಹಾಕಬೇಕು. 3 ದೀಪ ಹಚ್ಚುವುದರಿಂದ 3 ಚಿಕ್ಕ ಚಿಕ್ಕರಂಗೋಲಿಗಳನ್ನು ಹಾಕಬೇಕು.ರಂಗೋಲಿ ಮೇಲೆ ಅರಿಶಿಣ ಕುಂಕುಮ ಅಕ್ಷತೆಯನ್ನು ಹಾಕಬೇಕು ಹಾಗು 3 ರಂಗೋಲಿ ಮೇಲೆ 3 ವೀಳ್ಯದೆಲೆಯನ್ನು ಇಡಬೇಕು. ನಂತರ ಮೊದಲನೇ ವೀಳ್ಯದೆಲೆ ಮೇಲೆ ಅಕ್ಕಿಯನ್ನು ಹಾಕಬೇಕು, ಎರಡನೇ ವೀಳ್ಯದೆಲೆ ಮೇಲೆ ಕಪ್ಪು ಎಳ್ಳನ್ನು ಹಾಕಬೇಕು ಮತ್ತು ಮೂರನೇ ವೀಳ್ಯದೆಲೆ ಮೇಲೆ ಕಲ್ಲು ಉಪ್ಪನ್ನು ಹಾಕಿಕೊಳ್ಳಬೇಕು. ಈ ಮೂರು ವಸ್ತುವಿಗೂ ಅದರದ್ದೆ ಆದ ಮಹತ್ವವು ಇದೆ.
ವೀಳ್ಯದೆಲೆಗಳಿಗೆ ಗಂಧ ಅರಿಶಿನ ಕುಂಕುಮವನ್ನು ಇಡಬೇಕು. ನಂತರ ಒಂದೊಂದು ವೀಳ್ಯದೆಲೆ ಮೇಲೆ ಒಂದೊಂದು ದೀಪವನ್ನು ಇಡಬೇಕು. ಇದಕ್ಕೆ ಎಳ್ಳು ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಬೇಕು ಮತ್ತು 3 ದೀಪಗಳಿಗೂ ಎರಡೆರಡು ಬತ್ತಿಯನ್ನು ಹಾಕಬೇಕು.
ಅಕ್ಕಿ ಮೇಲೆ ದೀಪ ಹಚ್ಚುವುದರಿಂದ ಕುಲ ದೇವರ ಆಶೀರ್ವಾದ ಸಿಗುತ್ತದೆ. ಇನ್ನು ಕಪ್ಪು ಎಳ್ಳಿನ ಮೇಲೆ ದೀಪ ಹಚ್ಚುವುದರಿಂದ ಪಿತೃಗಳ ಆಶೀರ್ವಾದ ನಿಮಗೆ ಸಿಗುತ್ತದೆ ಹಾಗು ಉಪ್ಪಿನ ಮೇಲೆ ದೀಪರಾಧನೆ ಮಾಡುವುದರಿಂದ ಯಾವುದೇ ಒಂದು ದೋಷ ಇದ್ದರು ಕೂಡ ಅದು ಪರಿಹಾರ ಆಗುತ್ತದೆ.ಜೊತೆಗೆ ಹಣಕಾಸಿನ ಸಮಸ್ಸೆ ಇದ್ದರು ಕೂಡ ಅದು ನಿವಾರಣೆ ಆಗುತ್ತದೆ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರು ಕೂಡ ಉಪ್ಪಿನ ಮೇಲೆ ದೀಪರಾಧನೆ ಮಾಡುವುದು ತುಂಬಾ ಶ್ರೇಷ್ಠ. ಈ ದೀಪಗಳಿಗೆ ಅಕ್ಷತೆ ಹಾಕಿ ಹಾಗು ಹೂವಿನಿಂದ ಅಲಂಕಾರ ಮಾಡಬೇಕು. ನಂತರ ಅಗರಬತ್ತಿ ಮೂಲಕ ಒಂದೊಂದು ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.
ಈ ದೀಪವನ್ನು ದೀಪಾವಳಿ ಅಮಾವಾಸ್ಯೆ ದಿನ ಹಚ್ಚಬೇಕು. ಆದಷ್ಟು ಸಂಜೆ ಸಮಯದಲ್ಲಿ ದೀಪ ಹಚ್ಚುವುದು ತುಂಬಾ ಶ್ರೇಷ್ಠ. ಇನ್ನು ದೀಪರಾಧನೆ ಅದಬಳಿಕ ಅಕ್ಕಿ ಜೊತೆ ಇನ್ನು ಸ್ವಲ್ಪ ಅಕ್ಕಿ ಸೇರಿಸಿ ಹಸುವಿಗೆ ತಿನ್ನಿಸಿ. ಇನ್ನು ಎಳ್ಳನ್ನು ಕಾಗೆ ಗಳಿಗೆ ಕೊಡಿ. ಇನ್ನು ಕಲ್ಲು ಉಪ್ಪನ್ನು ನೀರಿನಲ್ಲಿ ಹಾಕಿ ಕರಗಿಸಿ ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು. ಇನ್ನು ದೀಪವನ್ನು ತೊಳೆದುಕೊಂಡು ಬೇರೆ ಪೂಜೆಗೆ ಬಳಸುವುದರಿಂದ ಯಾವುದೇ ತೊಂದರೆಇಲ್ಲಾ.