ಶಂಪೂ ಇದ್ದರೆ ಸಾಕು ನಿಮ್ಮ ಮನೆಯ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

0 9,642

ಶಂಪೋ ನಿಮ್ಮ ಕೂದಲನ್ನು ಮಾತ್ರ ಸ್ವಚ್ಛ ಮಾಡುವುದಕ್ಕೆ ಅಷ್ಟೇ ಅಲ್ಲ ನಿಮ್ಮ ಮನೆಯ ದೊಡ್ಡ ಕೆಲಸಗಳಿಗೆ ಬರುತ್ತದೆ.ಶಂಪೋವಿನ ಸೂಪರ್ ಟಿಪ್ಸ್ ಅನ್ನು ಪ್ರತಿಯೊಬ್ಬರೂ ತಿಳಿದಿರಬೇಕು.ಶಂಪೋವನ್ನು ನಾನಾ ರೀತಿಯಲ್ಲಿ ಬಳಸಬಹುದು. ಶಂಪೋವನ್ನು ಈ ರೀತಿಯಾಗಿ ಬಳಸಬಹುದು.

ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ವಾಶ್ ಮಾಡುವಾಗ ಸೋಪ್ ಪೌಡರ್ ಮತ್ತು ಶಂಪೋ ಹಾಕಿದರೆ ಬಟ್ಟೆ ಬೆಳ್ಳಗೆ ಮತ್ತು ಡಲ್ ಆಗಿ ಕಾಣುವುದಿಲ್ಲ. ಶಾಂಪೂ ಹಾಕುವುದರಿಂದ ಬಟ್ಟೆಗೂ ಸಹ ಶೈನ್ ಕೊಡುತ್ತದೆ.ಹೊಸ ಬಟ್ಟೆಯನ್ನು ಸಹ ಇದೆ ರೀತಿ ವಾಶ್ ಮಾಡಿದರೆ ಬಟ್ಟೆಗಳು ಹೊಸದಾಗಿ ಇರುತ್ತವೆ.

ಇನ್ನು ನೆಲ ವರೆಸುವಾಗ ನೀರಿಗೆ ಶಂಪೋ ಹಾಕಿ ವರೆಸಿದರೆ ನೆಲದಲ್ಲಿ ಇರುವ ಕೊಳೆ ಚೆನ್ನಾಗಿ ಕ್ಲೀನ್ ಆಗುತ್ತದೆ ಮತ್ತು ಒಳ್ಳೆಯ ಸುಗಂಧ ಕೂಡ ಬರುತ್ತದೆ.

ಶಾಂಪೋ ವನ್ನು ಹ್ಯಾಂಡ್ ವಾಶ್ ಆಗಿ ಬಳಸಬಹುದು. ಒಂದು ಲೋಟ ನೀರಿಗೆ ಸೇರೀಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಹಳೆಯ ಹ್ಯಾಂಡ್ ವಾಶ್ ಬಾಟಲ್ ಗೆ ಫೀಲ್ ಮಾಡಿಕೊಳ್ಳಿ.

ಶಂಪೋ ಹಾಕಿದ ನೀರಿನಿಂದ ಸ್ಪ್ರೇ ಮಾಡಿ ಅಡುಗೆ ಮನೆಯನ್ನು ಸ್ವಚ್ಛ ಮಾಡಬಹುದು. ಇದರಿಂದ ಎಣ್ಣೆ ಜಿಡ್ಡು ಚೆನ್ನಾಗಿ ಹೋಗುತ್ತದೆ. ಅಷ್ಟೇ ಅಲ್ಲ ಕಿಚನ್ ನಲ್ಲಿ ಒಳ್ಳೆಯ ಸ್ಮೆಲ್ ಕೂಡ ಇರುತ್ತದೆ. ಇರುವೆ ಜಿರಳೆ ನೋಣಗಳ ಕಾಟ ಕೂಡ ಇರುವುದಿಲ್ಲ. ಇದರಿಂದ ಫ್ರಿಜ್ ಅನ್ನು ಕ್ಲೀನ್ ಮಾಡಿಕೊಳ್ಳಬಹುದು.

ಒಂದು ಬೌಲ್ ನಲ್ಲಿ ನೀರು ತೆಗೆದುಕೊಂಡು 1 ಪ್ಯಾಕ್ ಶಂಪೋ ಹಾಕಬೇಕು.ನಿಮಗೆ ಯಾವ ಶಂಪೂ ಬೇಕೋ ಆ ಶಂಪೂ ಬಳಸಬಹುದು.ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಮೇಲೆ ಇಟ್ಟು ಮಧ್ಯ ಉರಿಯಲ್ಲಿ ಕುದಿಸಬೇಕು.ಅಡುಗೆ ಮನೆಯನ್ನು ಕ್ಲೀನ್ ಮಾಡಿದಾಗ ಬರುವ ಬ್ಯಾಡ್ ಸ್ಮೆಲ್ ಗೆ ಇದೆ ತರ ಕಂಫರ್ಟ್ ಹಾಕಿ ಕುದಿಸಬಹುದು.ಕಂಫರ್ಟ್ ಇಲ್ಲದೆ ಇರುವ ಟೈಮ್ ನಲ್ಲಿ ಈ ರೀತಿ ಶಂಪೋ ಬಳಸಬಹುದು.

ಕುದಿಸಿ ತಣ್ಣಗೆ ಆದ ನಂತರ ಒಂದು ಸ್ಪ್ರೇ ಬಾಟಲಿಗೆ ಹಾಕಿ ಇಟ್ಟುಕೊಳ್ಳಬಹುದು.ಹಾಕಿದ ನಂತರ ಚೆನ್ನಾಗಿ ಶೇಕ್ ಮಾಡಿ ಇದನ್ನು ಹ್ಯಾಂಡ್ ವಾಶ್ ಆಗಿ ಬಳಸಬಹುದು. ರೇಷ್ಮೆ ಸೀರೆಗಳನ್ನು ವಾಶ್ ಮಾಡುವಾಗ ಸೋಪು ಬಳಸಬೇಡಿ. ಅದರ ಬದಲು ಒಂದು ಪ್ಯಾಕೆಟ್ ಅಷ್ಟು ಶಂಪೋ ವಾಶ್ ಮಾಡಬಹುದು.ಈ ರೀತಿ ಮಾಡಿದರೆ ರೇಷ್ಮೆ ಬಟ್ಟೆಯ ಕಲರ್ ಹೋಗುವುದಿಲ್ಲ ಹಾಗೂ ಬಟ್ಟೆ ಕೂಡ ಸ್ಮೂತ್,ಸಾಫ್ಟ್ ಆಗಿ ಇರುತ್ತದೆ.

ಕನ್ನಡಿ ಸ್ವಲ್ಪ ಗಲೀಜು ಆದಾಗ ಸ್ವಲ್ಪ ಶಂಪೋ ಹಾಕಿ ಎಲ್ಲಾ ಕಡೆ ಹಚ್ಚಿ ಒಂದು ಬಟ್ಟೆ ತೆಗೆದುಕೊಂಡು ವರಿಸಬೇಕು.ಕೊನೆಗೆ ಪೇಪರ್ ಯಿಂದ ವರೆಸಿದರೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.

ಒಂದು ಬೌಲ್ ಗೆ ನೀರು, ಶಂಪೋ,ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಸ್ಪ್ರೇ ಬಾಟಲ್ ಗೆ ಹಾಕಿ ಜಿರಳೆ ಇರುವ ಜಾಗದಲ್ಲಿ ಹಾಕಿ ಕ್ಲೀನ್ ಮಾಡಿದರೆ ಕಿಚನ್ ಅಲ್ಲಿ ಜಿರಳೆಗಳು ಕಡಿಮೆ ಆಗುತ್ತದೆ.

Leave A Reply

Your email address will not be published.