ಶಕ್ತಿಶಾಲಿ ಮೌನಿ ಅಮಾವಾಸ್ಯೆ ಯಾವತ್ತು.?ಯಾವ ಸಮಯದಲ್ಲಿ ಪೂಜೆ ಮಾಡಬೇಕು
ಹಿಂದೂಧರ್ಮದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳಾನೇ ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಈ ಭಾರಿ ಬಂದಿರುವ ಮಗಾ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ.ಹಾಗಾಗಿ ಈ ಮಗಾ ಮಾಸದ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೇ.ಮಾಘ ಮಾಸದ ಸ್ನಾನ ದಾನ ಪೂಜೆ ಮತ್ತು ಪಿತೃಗಳಿಗೆ ತರ್ಪಣ ಬಿಡುವುದು ತುಂಬಾನೇ ವಿಶೇಷವಾಗಿದೇ ಈ ಅಮಾವಾಸ್ಯೆ ದಿನ.
ಈ ಮೌನಿ ಅಮಾವಾಸ್ಯೆಯಲ್ಲಿ ಗಂಗ ಸ್ನಾನಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಮೌನಿ ಅಮಾವಾಸ್ಯೆಯಲ್ಲಿ ಮೌನವಾಗಿ ಇದು ಉಪವಾಸವನ್ನು ಆಚರಣೆ ಮಾಡುತ್ತಾರೆ.ಈ ಮೌನಿ ಅಮಾವಾಸ್ಯೆಯಲ್ಲಿ ಉಪವಾಸದ ಜೊತೆ ಭಗವಂತನ ಧ್ಯಾನ ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷ್ಣುವಿನ ಆರಾಧನೆ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ.ಅಮಾವಾಸ್ಯೆ ದಿನ ಎರಡು ತುಪ್ಪದ ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮ ಹೇಳಿಕೊಳ್ಳುವುದು. ಹಣದ ಸಮಸ್ಸೆ ಇರುವವರು ಅಮಾವಾಸ್ಯೆ ದಿನ ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ವಿಶೇಷವಾಗಿ ಲಕ್ಷ್ಮಿ ಅಷ್ಟೊತ್ತರ ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಸೆಯನ್ನು ಬಗೆಹರಿಸಿಕೊಳ್ಳಬಹುದು.ಇದನ್ನು ಶುಕ್ರವಾರ ಸಂಜೆ ಸೂರ್ಯಸ್ತದ ನಂತರ ಲಕ್ಷ್ಮಿಯಾ ಪೂಜೆಯನ್ನು ಮಾಡಿಕೊಂಡರೆ ತುಂಬಾನೇ ಒಳ್ಳೆಯದು.
ಈ ಅಮಾವಾಸ್ಯೆ ಫೆಬ್ರವರಿ 9ನೆ ತಾರೀಕು ಶುಕ್ರವಾರ ಬೆಳಗ್ಗೆ 8:03 ನಿಮಿಷಕ್ಕೆ ಪ್ರಾರಂಭವಾದರೆ ಶನಿವಾರ 10ನೇ ತಾರೀಕು ಬೆಳಗ್ಗೆ 4:20 ನಿಮಿಷಕ್ಕೆ ಮುಗಿಯುತ್ತದೇ.ಹಾಗಾಗಿ ಶುಕ್ರವಾರ ಬೆಳಗ್ಗೆ ನೀವು ಕಳಶವನ್ನು ಬದಲಿಸಿ ಕಳಶಕ್ಕೆ ಪರಿಶುದ್ಧವಾದ ನೀರನ್ನು ಹಾಕಿ ಹೊಸದಾಗಿ ಕಾಯಿ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ.ವಿಶೇಷವಾಗಿ ಲಕ್ಷ್ಮಿ ಮತ್ತು ವಿಷ್ಣು ಪೂಜೆ ಮಾಡುವುದಾದರೆ ಶುಕ್ರವಾರ ಸಂಜೆ ಎರಡು ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಿಕೊಳ್ಳಬಹುದು.ಇನ್ನು ಶುಕ್ರವಾರ ಬೆಳಗ್ಗೆ ಅಮಾವಾಸ್ಯೆ ಪೂಜೆ ಮಾಡುವಾಗ ಈ ಪೂಜೆಯನ್ನು ಮಾಡಬಹುದು.
ತುಂಬಾ ಜನರಿಗೆ ಪಿತೃ ದೋಷ ಇರುತ್ತದೆ.ಪಿತೃ ದೋಷ ಇರುವ ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಕ್ಕೆ ಹೋದರು ಸಹ ಅಡೆತಡೆಗಳು ಆಗುತ್ತಿರುತ್ತದೆ.ಕುಟುಂಬದಲ್ಲಿ ಸಂತೋಷ ಅಷ್ಟಾಗಿ ಇರುವುದಿಲ್ಲ.ಶಾಂತಿಯ ಕೊರತೆ ಎದ್ದು ಕಾಣಿಸುತ್ತದೆ.ಈ ಎಲ್ಲಾ ಸಮಸ್ಸೆಗೆ ಮಂಗಳವಾರ ಬೆಳಗ್ಗೆ ಮೌನಿ ಅಮಾವಾಸ್ಯೆಯಂದು ಸೂರ್ಯೋದಾಯಕ್ಕೂ ಮುಂಚೆ ಸ್ನಾನವನ್ನು ಮಾಡಿಕೊಂಡು ಅಮಾವಾಸ್ಯೆ ದಿನ ಕಳಶ ತೆಗೆದುಕೊಂಡು ಅದಕ್ಕೆ ಕಪ್ಪು ಎಳ್ಳು ನೀರಿನೊಂದಿಗೆ ಹಾಕಬೇಕು. ನಂತರ ಪಿತೃಗಳಿಗೆ ತರ್ಪಣ ಬಿಡುವುದರಿಂದ ಸ್ವರ್ಗ ಪ್ರಾಪ್ತಿ ಆಗುತ್ತದೆ ಮತ್ತು ಪಿತೃ ದೋಷ ಕೂಡ ನಿವಾರಣೆ ಮಾಡಿಕೊಳ್ಳಬಹುದು.ಈ ದಿನ ಎಳ್ಳು ಎಣ್ಣೆ ಮತ್ತು ಎಳ್ಳು ಉಂಡೆ ದಾನ ಮಾಡಿದರೆ ಒಳ್ಳೆಯದು.ಈ ರೀತಿ ಮಾಡಿದರೆ ಪಿತೃ ದೋಷ ನಿವಾರಣೆ ಮಾಡಿಕೊಳ್ಳಬಹುದು.ಈ ಮೌನಿ ಅಮಾವಾಸ್ಯೆಯಂದು ಗಾಯತ್ರಿ ಮಂತ್ರ ಜಪ ಮಾಡುವುದರಿಂದ ಜಾತಕದಲ್ಲಿ ಸೂರ್ಯ ಬಲ ಹೆಚ್ಚಾಗಿ ಹೋಗುತ್ತದೆ.