ಮನೆಯಲ್ಲಿ ಹಲ್ಲಿ ಸತ್ತರೆ ಇದರ ಅರ್ಥವೇನು?

0 2,909

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಲ್ಲಿಗಳು ಇರುವುದು ಸರ್ವೇ ಸಾಮಾನ್ಯ. ಬೆಳಕಿನ ಸುತ್ತಾ ಇರುವ ಹುಳಗಳನ್ನು ಹಿಡಿದು ತಿನ್ನುತ್ತವೆ ಈ ಹಲ್ಲಿಗಳು ಇರುವುದು ಪ್ರತಿಯೊಬ್ಬರ ಮನೆಯಲ್ಲೂ ಹಲ್ಲಿಗಳನ್ನು ಕಾಣಬಹುದು. ಆದರೆ ಹಲ್ಲಿಗಳಿಂದ ಅಪಾಯವೇ ಹೆಚ್ಚು. ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿರುತ್ತಾರೆ. ಕೆಲವರು ಪ್ರತಿದಿನ ರಾಶಿ ಭವಿಷ್ಯ ನೋಡಿ ಅಥವಾ ಓದಿ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಭವಿಷ್ಯದಲ್ಲಿ ಏನಾಗಬಹುದು ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ಕೆಲವೊಮ್ಮೆ ತಮ್ಮ ಸುತ್ತಮುತ್ತ ನಡೆಯುವ ಘಟನೆಗಳು ಮುಂದೆ ನಡೆಯಬಹುದಾದ ಸಂಗತಿಗಳ ಬಗ್ಗೆ ಅರಿವು ನೀಡುತ್ತದೆ.

ಮನೆಯ ಕಿಟಕಿಯ ಮುಂದೆ ಕಾಗೆ ಕೂಗಿದರೆ ಅತಿಥಿಗಳು ಬರುತ್ತಾರೆ ಎಂಬ ಮಾತು ಇದೆ. ಒಳ್ಳೆಯ ಕೆಲಸಕ್ಕೆ ತೆರಳುವಾಗ ಖಾಲಿ ಬಿಂದಿಗೆ ಕಾಣಿಸಿದರೆ ಅಶುಭ ಎಂದು ಹೇಳಲಾಗುತ್ತದೆ. ಇನ್ನು ಮನೆಯಲ್ಲಿರುವ ಹಲ್ಲಿಗಳು ಕೂಡ ಶಕುನ ನುಡಿಯುತ್ತದೆ ಎಂಬ ನಂಬಿಕೆ. ಮನೆಯ ಪೂಜೆಯ ಸಂದರ್ಭದಲ್ಲಿ ಹಲ್ಲಿ ಕಾಣಿಸಿದರೆ ಲಕ್ಷ್ಮಿ ಆಗಮನ ಸೂಚಿಸುತ್ತದೆ ಎಂದು ಹೇಳಲಾಗಿದೆ. ಮನೆಯ ಪೂಜೆ ಕೋಣೆಯಲ್ಲಿ ಹಲ್ಲಿ ಕಾಣಿಸಿದರೆ ಲಕ್ಷ್ಮಿ ಆಗಮನದ ಜೊತೆ ಕುಟುಂಬದಲ್ಲಿ ಸಂತೋಷ ನೆಮ್ಮದಿ ತುಂಬಿರುತ್ತದೆ ಎಂದು ಹೇಳುತ್ತಾರೆ. ಹೊಸ ಮನೆ ಅಥವಾ ಅಂಗಡಿಯಲ್ಲಿ ಸತ್ತ ಹಲ್ಲಿ ಕಂಡರೆ ತುಂಬಾ ಜಾಗೃಕತವಾಗಿರಬೇಕು. ಇದರ ಅರ್ಥವೇ ಮನೆಯ ಹಿರಿಯರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಮತ್ತು ಕುಟುಂಬದ ಸದಸ್ಯರಮೇಲೆ ಪರಿಣಾಮ ಬೀರುತ್ತದೆ.

ಇಂತಹ ದೃಶ್ಯ ಕಂಡು ಬಂದರೆ ಹೊಸ ಮನೆ ಅಥವಾ ಅಂಗಡಿ ಪ್ರವೇಶ ಮಾಡುವ ಮುನ್ನ ನಿಯಮ ಅನುಸಾರವಾಗಿ ಪೂಜೆ ಮಾಡಿದ್ದರೆ ಋಣಾತ್ಮಕ ಶಕ್ತಿ ಕಡಿಮೆ ಆಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಬಹುದು. ಎರಡು ಹಲ್ಲಿಗಳು ಜಗಳ ಮಾಡುವ ದೃಶ್ಯ ಕಾಣಿಸಿದರೆ ಅಶುಭ ಸಂಕೇತ. ಇದರ ಅರ್ಥ ಶೀಘ್ರವಾಗಿ ನಿಮ್ಮ ಸಂಗತಿಯೊಂದಿಗೆ ಜಗಳ ಮಾಡುವ ಸಾಧ್ಯತೆ ಇರುತ್ತದೆ, ಈ ಸಮಯದಲ್ಲಿ ತಾಳ್ಮೆಯಿಂದ ಇರಲು ಪ್ರಯತ್ನಿಸಿ. ರಾತ್ರಿ ಸಮಯದಲ್ಲಿ ಹಲ್ಲಿಗಳು ಹೆಚ್ಚು ಚಟುವಟಿಕೆಯಿಂದ ಇರುತ್ತದೆ. ಈ ಸಮಯದಲ್ಲಿ ಹಲ್ಲಿಗಳು ಕೆಳಗೆ ಬೀಳುವ ಸಾಧ್ಯತೆ ಇರುತ್ತದೆ. ನಿಮ್ಮ ಬಲಹಿಮ್ಮಡಿ ಅಥವಾ ಬಲ ಪಾದದ ಮೇಲೆ ಹಲ್ಲಿ ಬಿದ್ದರೆ ನೀವು ಬೇಗ ಪ್ರಯಾಣ ಮಾಡುವ ಅಥವಾ ಪ್ರವಾಸಕ್ಕೆ ಹೋಗುವ ಮುನ್ಸೂಚನೆ.

ಇದರೊಂದಿಗೆ ಆರ್ಥಿಕವಾಗಿ ಲಾಭದ ಮುನ್ಸೂಚನೆಯಾಗಿದೆ. ಹಲ್ಲಿಗಳು ಎಡಪಾದ ಅಥವಾ ಹಿಮ್ಮಡಿಯ ಮೇಲೆ ಹಲ್ಲಿ ಬಿದ್ದರೆ ಮನೆಯಲ್ಲಿ ತೊಂದರೆ, ಅನಾರೋಗ್ಯ ಉಂಟಾಗುತ್ತದೆ. ಕನಸಿನಲ್ಲಿ ತೆವಳುವ ಹಲ್ಲಿಯನ್ನ ನೀವು ನೋಡಿದರೆ ಆಶುಭ ಎಂದು ಹೇಳಲಾಗುತ್ತದೆ ಇದರ ಅರ್ಥ ಮುಂದಿನ ದಿನಗಳಲ್ಲಿ ಅನಾರೋಗ್ಯ ಅಥವಾ ಆರ್ಥಿಕ ಸಮಸ್ಯೆ ಎದುರಾಗಬಹುದು. ಹಲ್ಲಿಗಳಿಂದ ಅನೇಕ ರೀತಿಯ ತೊಂದರೆ ಆಗುತ್ತದೆ ಆದ್ದರಿಂದ ತುಂಬಾ ಎಚ್ಚರಿಕೆ ವಹಿಸಬೇಕು ಹೆಚ್ಚು ಜಾಗೃತಿಯಿಂದ ಇರಬೇಕು ಎಂದು ಹೇಳಲಾಗಿದೆ. ಹಲ್ಲಿಗಳಿಂದ ಅಪಾಯವೇ ಹೆಚ್ಚು.

Leave A Reply

Your email address will not be published.