ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬೇಕಾ? ಸುಲಭವಾದ ಪರಿಹಾರ!

0 7,406

ನಿಂಬೆಹಣ್ಣಿನ ಬಳಕೆ ಕೊರೊನ ಕಾಲದಿಂದ ಹೆಚ್ಚಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ‘ಸಿ’ ಇದೆ ಎನ್ನುವ ಕಾರಣಕ್ಕೆ. ಇದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಎನ್ನುವ ಮಾತಿದೆ. ಆದರೆ ನಿಂಬೆಹಣ್ಣಿನಲ್ಲಿ ಕೇವಲ ಇಷ್ಟು ಮಾತ್ರವಲ್ಲ ಬೇರೆ ಬೇರೆ ಬಗೆಯ ಆರೋಗ್ಯಕರ ಅಂಶಗಳು ಸಹ ಅಡಗಿರುತ್ತವೆ.

ಅದರಲ್ಲೂ ಸಕ್ಕರೆ ಕಾಯಿಲೆ ಇರುವವರಿಗೆ ನಿಂಬೆಹಣ್ಣಿನಿಂದ ಪ್ರಯೋಜನ ಜಾಸ್ತಿ ಎಂದು ತಿಳಿದುಬಂದಿದೆ. ಆದರೆ ಬಹುತೇಕ ಜನರಿಗೆ ಇದರ ಅರಿವೇ ಇಲ್ಲ. ಒಂದು ವೇಳೆ ನೀವು ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ನಿಂಬೆ ಹಣ್ಣನ್ನು ಸೇರಿಸಿಕೊಳ್ಳಿ. ಇದು ಬಹು ಆಯಾಮಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿದೆ.

ಸಿಟ್ರಿಕ್ ಆಮ್ಲದ ಮಹತ್ವ

ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಪೊಟಾಸಿಯಂ, ಮತ್ತು ಇನ್ನಿತರ ಆರೋಗ್ಯಕರ ಅಂಶಗಳು ಅಡಗಿವೆ. ಇದರಲ್ಲಿ ಪ್ರಮುಖ ವಾಗಿ ಸಿಟ್ರಿಕ್ ಆಮ್ಲ ಎನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಅನುಕೂಲಕರವಾಗಿ ಕೆಲಸ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಆಮ್ಲಿಯ ಪ್ರಭಾವ ಇರುವುದು ಕೂಡ ಇದರ ಕಾರಣದಿಂದಲೇ.

ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ
ನಿಂಬೆಹಣ್ಣಿನಲ್ಲಿ ಹುಳಿಯ ಅಂಶ ಅಡಗಿದೆ ಜೊತೆಗೆ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಭಾವ ಕೂಡ ಇದೆ.

ಜೊತೆಗೆ ಬೇರೆ ಬಗೆಯ ಪೌಷ್ಟಿಕಾಂಶಗಳು ಸಹ ನಿಂಬೆ ಹಣ್ಣಿನಲ್ಲಿ ಸಿಗುತ್ತವೆ ಎಂದು ಹೇಳುತ್ತಾರೆ. ಇವೆಲ್ಲವೂ ಸಹ ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಅನುಕೂಲಕ ರವಾಗಿರುತ್ತವೆ.​

ನಿಂಬೆಹಣ್ಣು ಒಂದು ರೀತಿಯ ಔಷಧಿ ಇದ್ದಂತೆ

ನಿಂಬೆಹಣ್ಣಿನಲ್ಲಿ ಔಷಧೀಯ ಗುಣಗಳು ಇರುವುದರಿಂದ ಧೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರುವ ಗುಣವನ್ನು ಹೊಂದಿದೆ.

ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇಂಫ್ಲಾಮೇಟರಿ ಗುಣಲಕ್ಷಣ ಗಳನ್ನು ಸಹ ನಾವು ನಿಂಬೆಹಣ್ಣಿ ನಿಂದ ನಿರೀಕ್ಷೆ ಮಾಡಬಹುದು. ನೈಸರ್ಗಿಕವಾದ ರಾಸಾಯನಿಕ ಅಂಶಗಳು ಇರುವುದರಿಂದ ಸಕ್ಕರೆ ಕಾಯಿಲೆಯನ್ನು ಇದು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರುತ್ತದೆ.​

ಬ್ಲಡ್ ಶುಗರ್ ಲೆವೆಲ್ ಏರಿಕೆ ಆಗುವುದಿಲ್ಲ

ಸಿಹಿ ಸೂಚ್ಯಂಕ ಹೆಚ್ಚಾಗಿ ಇರುವ ಯಾವುದೇ ಆಹಾರ ಮನುಷ್ಯನ ದೇಹದ ಬ್ಲಡ್ ಶುಗರ್ ಲೆವೆಲ್ ಮೇಲೆ ಪ್ರಭಾವ ಬೀರುತ್ತದೆ.

ಇಂತಹ ಹೆಚ್ಚಾದ ಸಿಹಿ ಸೂಚ್ಯಂಕ ಇರುವ ಆಹಾರಗಳ ಜೊತೆ ಒಂದು ವೇಳೆ ನಿಂಬೆಹಣ್ಣಿನ ಹುಳಿಯನ್ನು ಮಿಶ್ರಣ ಮಾಡಿದಾಗ ಸ್ಟಾರ್ಚ್ ಗ್ಲುಕೋಸ್ ಅಂಶವಾಗಿ ಬದಲಾ ಗುವ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ. ಹೀಗಾಗಿ ಆಹಾರದ ಸಿಹಿ ಸೂಚ್ಯಂಕ ಕೂಡ ಕಡಿಮೆಯಾಗುತ್ತದೆ.​

ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ

ನಿಂಬೆಹಣ್ಣಿನಲ್ಲಿ ಪೋಟಾಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಇದು ಸೋಡಿಯಂ ನಿಂದ ಉಂಟಾಗುವ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆಯ ಜೊತೆಗೆ ಬಿಪಿ ಇರುವ ಜನರಿಗೂ ಕೂಡ ಇದು ಹೆಚ್ಚು ಅನುಕೂಲವಾಗುತ್ತದೆ.

Leave A Reply

Your email address will not be published.