ವಾಸ್ತುದೋಷ ಪರಿಹಾರಕ್ಕಾಗಿ ಶಿವರಾತ್ರಿಯಂದು ಶಿವನನ್ನು ಈ ದಿಕ್ಕಿನಲ್ಲಿಟ್ಟು ಪೂಜಿಸಿ, ಯಾವ ರೀತಿ ಫೋಟೋ ಪೂಜಿಸಬೇಕು?

Featured

ಇಂದು ಶಿವರಾತ್ರಿ ಹಬ್ಬವನ್ನು ಪ್ರತಿಯೊಬ್ಬರೂ ಆಚರಣೆ ಮಾಡುತ್ತಿದ್ದಾರೆ.ಶಿವರಾತ್ರಿ ದಿನ ಶಿವನನ್ನು ಹೆಚ್ಚಾಗಿ ಪೂಜೆ ಮಾಡುವುದರಿಂದ ಹೆಚ್ಚಾಗಿ ಧ್ಯಾನ ಮಾಡುವುದರಿಂದ ವಾಸ್ತು ದೋಷ ನಿವಾರಣೆ ಮಾಡಿಕೊಳ್ಳಬಹುದು. ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಇದ್ದರು ಕೂಡ ತಡೆಗಟ್ಟಬಹುದು.ಜೊತೆಗೆ ಶಿವನ ಅನುಗ್ರಹ ಹೆಚ್ಚಾಗಿ ಪಡೆಯಬಹುದು.ಈ ಸಮಯದಲ್ಲಿ ನೀವು ಶಿವನ ಆರಾಧನೆ ಮಾಡಿದರೆ ಶಿವನ ಅನುಗ್ರಹ ಸಿಗುತ್ತದೇ.

ಶಿವರಾತ್ರಿ ದಿನ ಶಿವನ ಫೋಟೋವನ್ನು ಅಥವಾ ವಿಗ್ರಹವನ್ನ ಈಶನ್ಯ ದಿಕ್ಕಿನಲ್ಲಿ ಇಟ್ಟು ಅಭಿಷೇಕವನ್ನು ಮಾಡಬೇಕು. ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ ಮತ್ತು ವಾಸ್ತು ದೋಷ ಎನ್ನುವುದು ನಿವಾರಣೆ ಆಗುತ್ತದೆ.ಇದರಿಂದ ಮನೆಯಲ್ಲಿ ಇರುವವರ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.

ಶಿವ ಪಾರ್ವತಿ ಸುಬ್ರಮಣ್ಯ ಮತ್ತು ಗಣೇಶ ಇರುವ ಫೋಟೋವನ್ನು ತೆಗೆದುಕೊಂಡು ಬಂದು ಶಿವರಾತ್ರಿ ದಿನ ಪೂಜೆ ಮಾಡಿದರೆ ನಿಮ್ಮ ಕಷ್ಟಗಳು ಕೂಡ ಪರಿಹಾರ ಆಗುತ್ತದೇ.ಈ ರೀತಿ ಮಾಡಿದರೆ ಕುಟುಂಬದಲ್ಲಿ ಪರಸ್ಪರ ಪ್ರೀತಿ ಕೂಡ ಹೆಚ್ಚಾಗುತ್ತದೆ.

ಹಣದ ಅರಿವು ಹೆಚ್ಚಾಗಲು ಶಿವನಿಗೆ ಅಕ್ಕಿ ಕಾಳುಗಳ ಅರ್ಚನೆ ಮಾಡಿ ಹಣ ಮತ್ತು ಬಂಗಾರ ಇಡುವ ಜಾಗದಲ್ಲಿ ಇಡುವುದರಿಂದ ಹಣದ ಅರಿವು ಹೆಚ್ಚಾಗುತ್ತದೆ.ಇನ್ನು ಶಿವರಾತ್ರಿ ದಿನ 108 ಬಿಲ್ವ ಪತ್ರೆ ತೆಗೆದುಕೊಂಡು ಅರ್ಚನೆ ಮಾಡಿದರೆ ತುಂಬಾ ಒಳ್ಳೆಯದು.ನಂತರ ಬಿಲ್ವ ಪತ್ರೆ ಸಮೇತ ಹಣದ ಪೆಟ್ಟಿಗೆಯಲ್ಲಿ ಇಡುವುದರಿಂದ ಹಣದ ಅರಿವು ಹೆಚ್ಚಾಗುತ್ತಾ ಹೋಗುತ್ತದೆ.ಇದನ್ನು ವ್ಯಾಪಾರ ಸ್ಥಳದಲ್ಲಿ ಕೂಡ ಈ ರೀತಿ ಮಾಡಿಕೊಳ್ಳಬಹುದು.ಇನ್ನು ಪೂಜೆ ಸಮಯದಲ್ಲಿ ಡಮಾರುಗ ನುಡಿಸುವುದರಿಂದ ಮನೆಯ ವಾಸ್ತು ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *