ಹುಣ್ಣಿಮೆ ದಿನ ಮನೆಯಲ್ಲಿ ಈ ದೀಪರಾಧನೆ ಮಾಡಿ. ಮನೆ ಮತ್ತು ಸೈಟಿಗೆ ಸಂಬಂಧಿಸಿದ ಸಮಸ್ಸೆಗಳ ನಿವಾರಣೆಗಾಗಿ!

0 4,026

ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಕೂಡ ಈ ರೀತಿ ದೀಪ ವನ್ನು ಹಚ್ಚಬಹುದು. ಮನೆಗೆ ಸಂಬಂಧ ಪಟ್ಟ ಮತ್ತು ಸೈಟ್ ಗೆ ಸಂಬಂಧ ಪಟ್ಟ ಎಂತಹದೆ ತೊಂದರೆ ಇದ್ದರು ಸಹ ನಿವಾರಣೆ ಆಗುತ್ತದೆ. ಹಾಗಾಗಿ ಪ್ರತಿ ಹುಣ್ಣಿಮೆ ಗೂ ಸಹ ಈ ರೀತಿ ಸಂಕಲ್ಪ ಮಾಡಿಕೊಂಡು 3 ಅಥವಾ 5,9 ಹುಣ್ಣಿಮೆ ಈ ರೀತಿ ಸಂಕಲ್ಪ ಮಾಡಿಕೊಂಡು ದೀಪರಾಧನೆ ಮಾಡುವುದರಿಂದ ಖಂಡಿತವಾಗಿ ಮನೆಯ ಎಲ್ಲಾ ಸಮಸ್ಸೆಗಳು ದೂರವಾಗುತ್ತದೆ. ಮಾಘ ಹುಣ್ಣಿಮೆ ದಿನ ಯಾವಾಗ ಪ್ರಾರಂಭ ಎನ್ನುವುದು ಎಲ್ಲರಿಗೂ ತಿಳಿದಿದೆ.ಹಾಗಾಗಿ ಶನಿವಾರ ಸಂಜೆ ಈ ಒಂದು ದೀಪರಾಧನೆಯನ್ನು ಮನೆ ಅಥವಾ ದೇವಸ್ಥಾನದಲ್ಲಿ ಆದರೂ ಮಾಡಬಹುದು.

ಶನಿವಾರ ವಿಷೇಶವಾಗಿ ಆಂಜನೇಯ ಸ್ವಾಮಿಗೆ ಈ ಒಂದು ದೀಪರಾಧನೆಯನ್ನು ಮಾಡಬೇಕು. ಸಂಕಲ್ಪ ಮಾಡಿಕೊಂಡು ಬೆಲ್ಲದ ದೀಪರಾಧನೆ ಮಾಡುವುದು ತುಂಬಾ ಒಳ್ಳೆಯದು. ದುರ್ಗಾ ದೇವಿಗೆ ಶುಕ್ರವಾರ ಬೆಲ್ಲದ ದೀಪರಾಧನೆ ಮಾಡಬಹುದು.

ಶನಿವಾರ ಆಂಜನೇಯ ಸ್ವಾಮಿಗೆ ಮನೆಯಲ್ಲೇ ಬೆಲ್ಲದ ದೀಪರಾಧನೆಯನ್ನು ಮಾಡಬೇಕು. ಬೆಳಗ್ಗೆ ಬೇಗ ಎದ್ದು ತಲೆ ಸ್ನಾನ ಮಾಡಿ ಪೂಜಾ ತಯಾರು ಮಾಡಿಕೊಂಡು ಎರಡು ಬೆಲ್ಲದ ಹಚ್ಚನ್ನು ತೆಗೆದುಕೊಳ್ಳಬೇಕು. ನಾಲ್ಕು ಕಡೆ ಅರಿಶಿನ ಕುಂಕುಮ ಹಚ್ಚಿ ತುಪ್ಪದ ಬತ್ತಿಯನ್ನು ಇಟ್ಟು ಹೂವುಗಳಿಂದ ಅಲಂಕಾರ ಮಾಡಿ. ನಂತರ ದೀಪವನ್ನು ಹಚ್ಚಿ ಆಂಜನೇಯ ಸ್ವಾಮಿಗೆ ಸಂಕಲ್ಪ ಮಾಡಿಕೊಳ್ಳಿ. ಕೈಯಲ್ಲಿ ತುಳಸಿ ಮತ್ತು ಅಕ್ಷತೆ ಇಟ್ಟುಕೊಂಡು ನಿಮ್ಮ ಸಮಸ್ಸೆಗಳನ್ನು ಹೇಳಿಕೊಂಡು ಆ ಸಮಸ್ಸೆ ನಿವಾರಣೆ ಅದರೆ 3,5,9 ಹುಣ್ಣಿಮೆ ಈ ರೀತಿ ಬೆಲ್ಲದ ದೀಪರಾಧನೆ ಮಾಡುತ್ತೇನೆ ಎಂದು ಪ್ರಾರ್ಥನೆ ಮಾಡಿಕೊಳ್ಳಿ. ಕೈಯಲ್ಲಿ ಇರುವ ತುಳಸಿ ಮತ್ತು ಅಕ್ಷತೆಯನ್ನು ರಾಮ ವೆಂಕಟೇಶ್ವರ ವಿಗ್ರಹಕ್ಕೆ ಹಾಕಬಹುದು. ಮೊದಲು ರಾಮನ ಸೂತ್ರ ಹೇಳಬೇಕು. ನಂತರ ಹನುಮನ್ ಚಾಲೀಸಾವನ್ನು ಓದುವುದಕ್ಕೆ ಶುರು ಮಾಡಿ.ಈ ರೀತಿ ಮಾಡಿದರೆ ನಿಮ್ಮ ಸಮಸ್ಸೆಗಳು ನಿವಾರಣೆ ಆಗುತ್ತದೆ.

ಇನ್ನು ಸೈಟ್ ಕೆಲಸ ನಿಂತು ಹೋಗಿದ್ದರೆ ಗಣಪತಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಆಂಜನೇಯ ಸ್ವಾಮಿಗೆ ಬೆಲ್ಲದ ದೀಪರಾಧನೆಯನ್ನು ಮನೆಯಲ್ಲಿ ಅಥವಾ ದೇವಸ್ಥಾನಕ್ಕೆ ಹೋಗೀ ಹಚ್ಚಬಹುದು. ಬೆಲ್ಲದ ಹಚ್ಚನ್ನು ಅಲ್ಲೇ ಇಟ್ಟು ಬರಬೇಕು. ಇನ್ನು ಮನೆಯಲ್ಲಿ ದೀಪವನ್ನು ಹಚ್ಚಿದರೆ ಅದನ್ನು ಸಿಹಿ ಆಡುಗೆಗೆ ಬಳಸಬಹುದು. ಒಂದು ವೇಳೆ ಈ ಹುಣ್ಣಿಮೆ ಗೆ ಮಾಡುವುದಕ್ಕೆ ಸಾಧ್ಯವಾಗದೆ ಇದ್ದರೆ ಮುಂದೆ ಬರುವ ಹುಣ್ಣಿಮೆಯಲ್ಲಿ ಹೀಗೆ ಮಾಡಬಹುದು

Leave A Reply

Your email address will not be published.