ನವಣೆ ಅನ್ನ ತಿಂದರೆ ಬಿಪಿ ಶುಗರ್ ಕೊಲೆಸ್ಟ್ರೇಲ್ ಕಡಿಮೆ ಮಾಡುವ ಅಮೃತ!

0 50

ಒಂದು ಕಾಲದಲ್ಲಿ ಭಾರತೀಯರ ಪ್ರಮುಖ ಆಹಾರವಾಗಿದ್ದ ನವಣೆ, ಈಗ ಕೆಲವೇ ಕೆಲವು ಜನರಷ್ಟೇ ಬಳಸುತ್ತಿದ್ದಾರೆ. ನಮ್ಮ ಆಹಾರ ಶೈಲಿ ತುಂಬಾನೇ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗೋಧಿ, ಅಕ್ಕಿ ಬಳಕೆ ಹೆಚ್ಚಾಗಿ, ಇವಷ್ಟೇ ಅಲ್ಲ ಕೆಲವರಂತೂ ಸಮಯವಿಲ್ಲ ಅಂತ ರೆಡಿ ಟು ಕುಕ್‌ ಅಥವಾ ರೆಡಿ ಮೇಡ್‌ ಫುಡ್ ಬಳಕೆ ಮಾಡುತ್ತಾರೆ, ಇವೆಲ್ಲದರ ಪ್ರಭಾವ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

ಮಧುಮೇಹದಲ್ಲಿ ಭಾರತ ವಿಶ್ವದಲ್ಲಿಯೇ ನಂ. 1ಸ್ಥಾನದಲ್ಲಿದೆ, ಅಲ್ಲದೆ ಹೃದಯಾಘಾತದ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಮಧುಮೇಹ, ಹೃದಯಾಘಾತ ಈ ಬಗೆಯ ಸಮಸ್ಯೆ ತಡೆಗಟ್ಟುವ ಸಾಮರ್ಥ್ಯ ನವಣೆಯಲ್ಲಿದೆ ಗೊತ್ತಾ? ನಾವು ಬಳಸುವ ಅಕ್ಕಿ, ಗೋಧಿ, ಜೋಳಕ್ಕಿಂತ ನವಣೆ ಒಳ್ಳೆಯದು.

ಅಕ್ಕಿ, ಗೋಧಿ, ಜೋಳಕ್ಕಿಂತ ನವಣೆ ಹೆಚ್ಚು ಆರೋಗ್ಯಕರ

ನವಣೆ ಬಾಯಿಗೆ ಅಷ್ಟಾಗಿ ರುಚಿಸುವುದಿಲ್ಲ ಆದ್ದರಿಂದ ಇದನ್ನು ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ, ಆದರೆ ನವಣೆಯಲ್ಲಿ ನೀವು ದಿನ ನಿತ್ಯ ಬಳಸುವ ಅಕ್ಕಿ, ಗೋಧಿ, ಜೋಳದಲ್ಲಿರುವುದಕ್ಕಿಂತ ಈ ಪೋಷಕಾಂಶಗಳು ಅತ್ಯಧಿಕವಾಗಿದೆ.

  • ನಾರಿನಂಶ
  • ಪ್ರೊಟೀನ್
  • ವಿಟಮಿನ್
  • ಖನಿಜಾಂಶ
  • ಆ್ಯಂಟಿಆಕ್ಸಿಡೆಂಟ್

ಅಲ್ಲದೆ ಈ ಆಹಾರ ಗ್ಲುಟೇನ್ ಫ್ರೀಯಾಗಿದೆ.

ಮಿಲೆಟ್ ಅಥವಾ ನವಣೆ ಮಧುಮೇಹ ತಡೆಗಟ್ಟಲು ಹೇಗೆ ಸಹಕಾರಿ?

ಒಂದು ಅಧ್ಯಯನ ಪ್ರಕಾರ ಟೈಪ್‌ 2 ಮಧುಮೇಹ ಇರುವವರು ನವಣೆ ಬಳಸಿದಾಗ ಅವರಲ್ಲಿ ಸಕ್ಕರೆಯಂಶ, ಇನ್ಸುಲಿನ್‌, ಕೊಲೆಸ್ಟ್ರಾಲ್‌, ಟ್ರಿಗ್ಲಿಸಿರೈಡ್ ಪ್ರಮಾಣ ಕಡಿಮೆಯಾಗಿರುವುದಾಗಿ ಹೇಳಿದೆ. ಅಕ್ಕಿಯ ಪದಾರ್ಥಗಳ ಬದಲಿಗೆ ಬೆಳಗ್ಗೆ ತಿಂಡಿಗೆ ನವಣೆ ಬಳಸಿದರೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ನವಣೆ ಹೃದಯದ ಆರೋಗ್ಯಕ್ಕೆ ಹೇಗೆ ಒಳ್ಳೆಯದು

  • ನವಣೆ ತಿಂದಾಗ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುವುದು.
  • ಮಧುಮೇಹಿಗಳಿಗೆ ಹೃದಯ ಸಂಬಂಧಿ ಸಮಸ್ಯೆ ಕೂಡ ಕಂಡು ಬರುವುದು. ನವಣೆ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದು, ಕೊಲೆಸ್ಟ್ರಾಲ್‌ ನಿಯಂತ್ರಿಸಬಹುದು, ಇದರಿಂದ ಹೃದಯದ ಆರೋಗ್ಯ ಹೆಚ್ಚುವುದು.
  • ನವಣೆ ತಿಂದರೆ ಇದರಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಬೇಗನೆ ಜೀರ್ಣವಾಗುವುದಿಲ್ಲ, ಇದರಿಂದ ರಕ್ತದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ, ಆದ್ದರಿಂದ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.
  • ಅಲ್ಲದೆ ನವಣೆಯಲ್ಲಿ ಗ್ಲೈಸೆಮಿಕ್ಸ್ ಇಂಡೆಕ್ಸ್ ತುಂಬಾನೇ ಕಡಿಮೆಯಿದೆ, ಆದ್ದರಿಂದ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.

ನವಣೆ ಹೇಗೆ ಬಳಸಬೇಕು?

ನವಣೆಯನ್ನು ಹೇಗೆ ಬೇಯಿಸಬೇಕು

ಮೊದಲು 1 ಚಮಚ ಎಣ್ಣೆ ಹಾಕಿ ನವಣೆಯನ್ನು 3 ನಿಮಿಷ ಹುರಿಯಬೇಕು, ನಂತರ 21/2 ಕಪ್ ನೀರು ಹಾಕಿ 25-30 ನಿಮಿಷ ಬೇಯಿಸಬೇಕು.

  • ಇದರಿಂದ ಉಪ್ಪಿಟ್ಟು ತಯಾರಿಸಬಹುದು
  • ಅಕ್ಕಿ ಬಳಸಿ ಮಾಡುವ ರೆಸಿಪಿ ಜೊತೆಗೂ ಬಳಸಬಹುದು

ನವಣೆಯನ್ನು ಮತ್ತಷ್ಟು ಆರೋಗ್ಯಕರವಾಗಿ ಹೇಗೆ ಬಳಸುವುದು ಎಂದು ಡಾ. ಖಾದರ್ ವಿವರಿಸಿದ್ದಾರೆ

  • ನವಣೆ ಬೇಯಿಸಲು ಮುಚ್ಚಳ ಇರುವ ಮಣ್ಣಿನ ಮಡಿಕೆ ಹಾಗೂ ಬಿದಿರಿನ ಬುಟ್ಟಿ ಬೇಕು. ಆ ಬುಟ್ಟಿಗೆ ನವಣೆ ಹಾಕಿ, ಮಡಕೆ ಮೇಲೆ ಇಡಬೇಕು, ಬುಟ್ಟಿ ಮಡಕೆಯೊಳಗೆ ಇಳಿಯುವಂತೆ ಇರಬೇಕು. ಈಗ ನವಣೆಗೆ ನೀರು ಹಾಕಬೇಕು, ಆ ನೀರು ಮಡಕೆಯಲ್ಲಿ ಶೇಖರವಾಗುತ್ತದೆ. ಈಗ ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಬೇಯಿಸಿ, ನಂತರ ಬೇಯಿಸಿದ ನವಣೆಯನ್ನು ಮತ್ತೆ ಮಡಿಕೆಗೆ ಹಾಕಿ, ಪಾತ್ರೆಯ ಬಾಯಿ ಮುಚ್ಚಿ ಮತ್ತೆ 25 ನಿಮಿಷ ಬೇಯಿಸಿದರೆ ನವಣೆ ರೆಡಿ.
Leave A Reply

Your email address will not be published.