ಕೇವಲ 1 ಲೋಟ ಇದನ್ನು ಕುಡಿದು ನೋಡಿ ಈ ಎಲ್ಲಾ ಸಮಸ್ಸೆಗಳಿಗೆ ರಾಮಬಾಣ!

0 87

ಪ್ರತಿದಿನ ನಾವು ಅಡುಗೆಯಲ್ಲಿ ಬೇರೆ ಬೇರೆ ರೀತಿಯ ಸಾಂಬಾರ್ ಪದಾರ್ಥಗಳು ಮಸಾಲೆ ಪದಾರ್ಥಗಳನ್ನು ಬಳಸುತ್ತೀವಿ. ಕೆಲವು ಮಸಾಲೆ ಪದಾರ್ಥಗಳು ಮತ್ತು ಸಾಂಬಾರ್ ಪದಾರ್ಥಗಳು ಇಲ್ಲಾ ಅಂದ್ರೆ ತುಂಬಾನೇ ಕಷ್ಟ ಅನಿಸಿಬಿಡುತ್ತದೆ. ನಾವು ತುಂಬಾ ರೀತಿಯ ಅಡುಗೆಯಲ್ಲಿ ಬೇರೆ ಬೇರೆ ತರದಲ್ಲಿ ಬಳಸುತ್ತೇವೆ. ಅದರಲ್ಲಿ ಈ ಒಂದು ಮನೆಮದ್ದು ನಿಮ್ಮ ಎಲ್ಲಾ ಸಮಸ್ಸೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಶುಂಠಿ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯನ್ನು ಸರಿಪಡಿಸಲು ಶುಂಠಿಯು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯು ಗರ್ಭಪಾತಕ್ಕೆ ಕಾರಣವಾಗಬಹುದು. ಹಾಗಾಗಿ ರಕ್ತಸ್ರಾವ ಸಮಸ್ಯೆ ಇರುವ ಮಹಿಳೆಯರು ಶುಂಠಿಯನ್ನು ತಪ್ಪಿಸುವುದು ಉತ್ತಮ.  

ಶುಂಠಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸದ ಅಥವಾ ಕಡಿಮೆ ತೂಕ ಹೊಂದಿರುವ ಜನರು ಈ ಶುಂಠಿಯನ್ನು ತಮ್ಮ ಆಹಾರದಿಂದ ತಪ್ಪಿಸಬೇಕು ಎಂದು ಹೇಳಲಾಗುತ್ತದೆ.  

ಶುಂಠಿಯು ನಿಮ್ಮ ಪಿತ್ತಕೋಶದಲ್ಲಿ ಪಿತ್ತಗಲ್ಲುಗಳನ್ನು ಉಂಟುಮಾಡಬಹುದು. ಶುಂಠಿಯ ಅತಿಯಾದ ಸೇವನೆಯು ಪಿತ್ತಜನಕಾಂಗದಲ್ಲಿ ಅಧಿಕ ಪಿತ್ತರಸ ಸ್ರವಿಸುವಿಕೆಯನ್ನು ಉಂಟುಮಾಡಬಹುದು ಮತ್ತು ಪಿತ್ತಗಲ್ಲುಗಳನ್ನು ಉಂಟುಮಾಡಬಹುದು.

ಶುಂಠಿಯಲ್ಲಿ ಸ್ಯಾಲಿಸಿಲೇಟ್‌ಗಳು ಸಮೃದ್ಧವಾಗಿವೆ. ರಕ್ತಹೀನತೆ ಮತ್ತು ಹಿಮೋಫಿಲಿಯಾದಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರು ಖಂಡಿತವಾಗಿಯೂ ಶುಂಠಿಯನ್ನು ತಮ್ಮ ಆಹಾರದಿಂದ ತಪ್ಪಿಸಬೇಕು. ಏಕೆಂದರೆ ಶುಂಠಿಯು ಅಧಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಆಸಿಡ್ ರಿಫ್ಲಕ್ಸ್ ನಂತಹ ಉರಿಯೂತದ ಸಮಸ್ಯೆ ಇರುವವರಿಗೆ, ಅತಿಯಾದ ಶುಂಠಿ ಸೇವನೆಯು ಆಸಿಡ್ ರಿಫ್ಲಕ್ಸ್, ಹೊಟ್ಟೆ ಉರಿ, ಎದೆ ನೋವು ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಆಸಿಡ್ ರಿಫ್ಲಕ್ಸ್ ನಂತಹ ಮೇಲೆ ತಿಳಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಕಡಿಮೆ ಶುಂಠಿಯನ್ನು ಸೇವಿಸುವುದು ಉತ್ತಮ.

ಶುಂಠಿ ಟೀ ಮಾಡುವ ವಿಧಾನ–ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರು ಅರ್ಧ ಇಂಚು ಜಜ್ಜಿದ ಶುಂಠಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಶೋದಿಸಿ ಕುಡಿಯಿರಿ.

Leave A Reply

Your email address will not be published.