ನಿಮ್ಮ ಕಾಲಿನ ಹೆಬ್ಬೆರಿಳಿನ ಮೇಲೆ ಈ ರೀತಿ ಕೂದಲುಗಳಿದ್ದರೆ ತಪ್ಪದೆ ಈ ಮಾಹಿತಿ ನೋಡಿ!

0 822

ಸಾಮಾನ್ಯವಾಗಿ ನಾವು ತಲೆಯ ಕೂದಲಿನ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ಆದರೆ ನಮ್ಮ ದೇಹದ ಎಲ್ಲಾ ಭಾಗಗಳಲ್ಲೂ ಕೂದಲು ಬೆಳೆಯುತ್ತವೆ. ಈ ಬಗ್ಗೆ ನಾವು ಅಷ್ಟಾಗಿ ಗಮನಹರಿಸಿರುವುದಿಲ್ಲ. ಸೌಂದರ್ಯದ ಕಾರಣಕ್ಕೆ ನಾವು ದೇಹದ ಕೆಲವು ಭಾಗಗಳಲ್ಲಿನ ಕೂದಲುಗಳನ್ನು ಷೇವ್ ಮಾಡಿಸುತ್ತೇವೆ. ಆದರೆ ಕೂದಲುಗಳು ನಮ್ಮ ಆರೋಗ್ಯದ ಬಗ್ಗೆ ಸೂಚನೆಗಳನ್ನು ನೀಡುತ್ತವೆ ಗೊತ್ತೇ?

ಇದನ್ನು ತಿಳಿದುಕೊಳ್ಳುವ ಮೊದಲು ನಮ್ಮ ದೇಹದಲ್ಲಿ ಕೂದಲು ಹೇಗೆ ಬೆಳೆಯುತ್ತದೆ ಎಂದು ತಿಳಿದುಕೊಳ್ಳೋಣ. ನಾವು ತಿನ್ನುವ ಆಹಾರಗಳಲ್ಲಿರುವ ಕೆಲವು ಅಗತ್ಯ ಪೋಷಕಾಂಶಗಳನ್ನು ರಕ್ತದ ಮೂಲಕ ಶರೀರದ ಒಳಭಾಗದಲ್ಲಿರುವ ಕೂದಲಿನ ಬೇರುಗಳು ಹೀರಿಕೊಳ್ಳುತ್ತವೆ. ಅಲ್ಲಿ ಕಣಗಳು ನಿರ್ಮಾಣವಾಗಿ ಕೂದಲು ಬೆಳೆಯುತ್ತಾ ಚರ್ಮದ ಮೇಲೆ ಬರುತ್ತವೆ. ಹೀಗೆ ಕೂದಲಿನ ಬೆಳವಣಿಗೆ ನಿರಂತರವಾಗಿ ನಡೆಯುತ್ತವೆ.

ಹೀಗೆ ದೇಹದ ಎಲ್ಲಾ ಭಾಗಗಳಲ್ಲಿನ ಕೂದಲಿನ ಬೆಳವಣಿಗೆ ನಮ್ಮ ರಕ್ತದ ಸುಗಮ ಸಂಚಾರದ ಮೇಲೆ ಅವಲಂಬಿತವಾಗಿರುತ್ತವೆ. ದೇಹದ ಎಲ್ಲಾ ಭಾಗಗಳಿಗೆ ಸುಗಮವಾಗಿ ರಕ್ತ ಸಂಚಾರವಾಗುತ್ತಿದ್ದರೆ, ಅಲ್ಲಿ ಕೂದಲು ಬೆಳೆಯುತ್ತದೆ. ಆದರೆ ಕೆಲವೊಮ್ಮೆ ಇದು ಹಾರ್ಮೋನ್ ಗಳ ಮೇಲೂ ಅವಲಂಬಿತವಾಗಿರುತ್ತದೆ. ಮಹಿಳೆಯರಿಗೆ ಎದೆ, ಮುಖದ ಮೇಲೆ ಕೂದಲು ಇಲ್ಲದೆ ಇರುವುದಕ್ಕೆ ಕಾರಣ ಹಾರ್ಮೋನ್.

ಈಗ ನಾವು ಕಾಲಿನ ಹೆಬ್ಬೆರಳಿನ ಮೇಲಿರುವ ಕೂದಲು ಮತ್ತು ಅದರಿಂದ ನಮ್ಮ ಆರೋಗ್ಯಕ್ಕಿರುವ ಸಂಬಂಧದ ಬಗ್ಗೆ ತಿಳಿದುಕೊಳ್ಳೋಣ;

ಕಾಲಿನ ಹೆಬ್ಬೆರಳಿನ ಮೇಲೆ ಸ್ತ್ರೀ, ಪುರುಷ ಭೇದವಿಲ್ಲದೆ, ಸ್ವಲ್ಪ ಕೂದಲುಗಳು ಬೆಳೆಯುತ್ತವೆ. ನೀವು ಒಮ್ಮೆ ನಿಮ್ಮ ಕಾಲುಗಳನ್ನು ಗಮನಿಸಿ, ಕೂದಲಿದೆಯೇ ಇಲ್ಲವೇ? ಇಲ್ಲವಾದರೆ ಎಚ್ಚರ! ಯಾಕೆಂದರೆ ನಿಮಗೆ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಬರುವ ಸಾಧ್ಯತೆಗಳು ಅಧಿಕವಾಗಿದೆ. ಯಾಕೆ ಕಾಲಿನ ಹೆಬ್ಬೆರಳಿನ ಕೂದಲನ್ನೇ ಪರಿಗಣಿಸಬೇಕು ತಲೆ, ಕೈ, ಕಾಲುಗಳ ಕೂದಲಿನಿಂದ ಯಾಕೆ ಹಾನಿಯಾಗುವುದಿಲ್ಲ ಎಂಬ ಪ್ರಶ್ನೆಯೇ?

ಹೌದು! ಕಾಲಿನ ಹೆಬ್ಬೆರಳನ್ನೇ ನಾವು ಪರಿಗಣಿಸಬೇಕು, ಯಾಕೆಂದರೆ ಕಾಲಿನ ಹೆಬ್ಬೆರಳು ಹೃದಯದಿಂದ ಬಹಳ ದೂರದಲ್ಲಿರುತ್ತದೆ. ಬೇರೆ ಕಡೆ ಸುಗಮವಾಗಿ ರಕ್ತಸಂಚಾರವಾದ ಹಾಗೆ ರಕ್ತವು ದೇಹದ ಕೊನೆಯ ಭಾಗ ಕಾಲಿನ ಹೆಬ್ಬೆರಳಿಗೂ ಸರಿಯಾಗಿ ಹರಿಯುತ್ತಿದ್ದರೆ, ಅಲ್ಲಿ ಕೂದಲುಗಳ ಬೆಳವಣಿಗೆಯಾಗಿರುತ್ತದೆ. ಅಲ್ಲಿ ಕೂದಲು ಇಲ್ಲವೆಂದಾದರೆ ರಕ್ತ ಅಲ್ಲಿ ತನಕ ತಲುಪುತ್ತಿಲ್ಲವೆಂದು ಅರ್ಥ. ರಕ್ತ ಸಂಚಾರ ಆಗದಿರಲು ಕಾರಣ ರಕ್ತನಾಳಗಳ ಬದಿಯಲ್ಲಿ ಬ್ಯಾಕ್ಟೀರೀಯಾ (plaque)ಶೇಖರಣೆಗೊಂಡಿರುವುದರಿಂದ ಇದು ನಾಳಗಳಲ್ಲಿ ರಕ್ತವನ್ನು ಸುಲಭವಾಗಿ ಹರಿಸಲು ತಡೆಯೊಡ್ಡುತ್ತದೆ.

ಹೀಗೆ ಶರೀರದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರವಾಗದೇ ಇರುವುದರಿಂದ ಹೃದಯದ ಖಾಯಲೆ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲ, ಕಾಲಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಪ್ರಸರಣವಾಗದಿದ್ದರೆ ಪಾರ್ಶ್ವವಾಯು ಬರಬಹುದು ಅಥವಾ ಅಂಗವೈಕಲ್ಯವೂ ಉಂಟಾಗಬಹುದು. ಹಾಗಾಗಿ ಇಂಥ ಲಕ್ಷಣಗಳೇನಾದರೂ ಕಂಡುಬಂದರೆ ನಿರ್ಲಕ್ಷಿಸದೆ, ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

Leave A Reply

Your email address will not be published.