ದೇವರು ಏಕೆ ಕಷ್ಟ ಕೊಡುತ್ತಾನೆ ಗೊತ್ತಾ!

0 123

ಈ ಪ್ರಪಂಚದಲ್ಲಿ ಜೀವಿಸುವ ಪ್ರತಿಯೊಂದು ಜೀವಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇರುತ್ತದೆ ಅದು ಸರ್ವೆ ಸಾಮಾನ್ಯ, ಆದರೆ ಈ ಪ್ರಪಂಚದಲ್ಲಿ ಕೆಲವು ಜನರು ಇರುತ್ತಾರೆ ಅವರು ಹೇಗೆ ಎಂದರೆ ತಮ್ಮ ಸುತ್ತ ಇರುವ ಪ್ರತಿಯೊಬ್ಬರು ಕೂಡ ಸಂತೋಷದಿಂದ ಇರಬೇಕು ಎಂದು ಬಯಸುವವರು, ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದಾಗಲಿ ಎಂದು ಬಳಸುವವರು, ತಮ್ಮ ಕಷ್ಟಗಳು ಎಷ್ಟೇ ಇದ್ದರೂ ಕೂಡ ಬೇರೆಯವರ ಕಷ್ಟಕ್ಕೆ ಸ್ಪಂದಿಸುವವರು, ತುಂಬಾ ವಿಶಾಲ ಮನಸ್ಸಿನವರು ಇಂತಹವರನ್ನು ಕೂಡ ನಾವು ಕಾಣುತ್ತೇವೆ ಅಲ್ಲವೇ? ಆದರೆ ಈ ಪ್ರಪಂಚದಲ್ಲಿ ಒಳ್ಳೆಯವರು ಆಗಿ ಇರಬೇಕೋ ಕೊಟ್ಟವರಾಗಿ ಇರಬೇಕೋ ಗೊತ್ತೇ ಆಗುವುದಿಲ್ಲ ಹೇಗೆ ಇದ್ದರೂ ಕಷ್ಟ. ಅದರಲ್ಲೂ ನಾವು ಗಮನಿಸಿರಬಹುದು ಎಲ್ಲರಿಗೂ ಒಳ್ಳೆಯದನ್ನು ಬಯಸುವವರಿಗೆ ಕಷ್ಟಗಳು ಹೆಚ್ಚು ಇರುತ್ತದೆ ಒಂದರ ಮೇಲೊಂದು ಕಷ್ಟಗಳು ಹೆಚ್ಚುತ್ತ ಹೋಗುತ್ತಲೇ ಇರುತ್ತದೆ ಜೀವನದಲ್ಲಿ ನೆಮ್ಮದಿ ಎಂಬುದೇ ಇರುವುದಿಲ್ಲ, ಆದರೆ ಯಾಕೆ ಒಳ್ಳೆಯವರಿಗೆ ಆ ದೇವರು ಕಷ್ಟಗಳನ್ನು ಕೊಡುತ್ತಾನೆ, ಏನೋ ಏನೋ ಕೆಟ್ಟ ಕೆಟ್ಟ ಕೆಲಸಗಳನ್ನು ಮಾಡುವವರು ತುಂಬಾ ಸಂತೋಷದಿಂದ ಯಾರಿಗೂ ಹೆದರದೆ ಆರಾಮ ಜೀವನ ನಡೆಸುತ್ತಾರೆ.

ಆದರೆ ಯಾಕೆ ಈ ರೀತಿಯಲ್ಲಿ ಒಳ್ಳೆಯವರಿಗೆ ಹೆಚ್ಚು ಕಷ್ಟ ಎಂಬುದಕ್ಕೆ ಶ್ರೀ ಕೃಷ್ಣ ಹೇಳಿದ್ದೇನು ಎಂದರೆ ಈ ಜನ್ಮದಲ್ಲಿ ತುಂಬಾ ಒಳ್ಳೆಯ ವ್ಯಕ್ತಿ ಆಗಿರಬಹುದು ಆದರೆ ಇವನು ಎಷ್ಟೇ ಒಳ್ಳೆಯದು ಮಾಡಿದರು ಕಷ್ಟಗಳನ್ನು ಅನುಭವಿಸುತ್ತಾ ಇದ್ದಾನೆ ಎಂದರೆ ಅದು ಅವನ ಹಿಂದಿನ ಜನ್ಮದ ಪಾಪ ಕರ್ಮಗಳು, ಅವನು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳನ್ನು ಪೂರ್ತಿಯಾಗಿ ಅವನು ದೂರ ಮಾಡಿಕೊಳ್ಳಬೇಕು ಆಗ ಮಾತ್ರ ಅವನಿಗೆ ಒಳ್ಳೆಯ ಫಲ ಸಿಗುವುದು, ತಮ್ಮ ಜೀವನದಲ್ಲಿ ಮುಕ್ತಿ ಪಡೆಯಬೇಕು ಎಂದರೆ ಅವರು ಮಾಡಿದ ಎಲ್ಲ ಪಾಪ ಕರ್ಮವನ್ನು ತೊಡೆದು ಹಾಕಿ ನಿಷ್ಕಲ್ಮಶ, ವಿಶಾಲ ಮನಸ್ಸನ್ನು ಹೊಂದಿದಾಗ ಮಾತ್ರ ಜೀವನದಲ್ಲಿ ಯಾವುದೇ ಕಷ್ಟಗಳು ಇಲ್ಲದೇ ನೆಮ್ಮದಿಯಿಂದ ಇರಲು ಸಾಧ್ಯ.

ಅದಕ್ಕಾಗಿಯೇ ಜೀವನದಲ್ಲಿ ನೀವು ಇಂದು ಯಾವುದೇ ಕಷ್ಟಗಳನ್ನು ಅನುಭವಿಸುತ್ತಾ ಇದ್ದರೂ ಅವೆಲ್ಲ ಹಿಂದೆ ಮಾಡಿರುವ ಪಾಪ ಕರ್ಮಗಳು ಆಗಿರುತ್ತವೆ, ಹಾಗಾಗಿ ಯಾವ ಕಷ್ಟಗಳು ಬಂದರೂ ಅದನ್ನು ಸಂತೋಷದಿಂದ ಸ್ವೀಕಾರ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ, ಯಾವುದೇ ಎಂತಹ ಕಷ್ಟಗಳು ಎದುರಾದರು ನಿಮ್ಮ ಒಳ್ಳೆಯ ತನವನ್ನು ಬಿಟ್ಟು ಕೊಡಬೇಡಿ ಕೆಟ್ಟ ದಾರಿ ಹಿಡಿಯ ಬೇಡಿ ಆಗ ಜೀವನ ಸುಂದರವಾಗಿ ಇರುತ್ತದೆ ಕಷ್ಟಗಳು ದೂರ ಆಗುತ್ತವೆ.ನಿಮ್ಮ ಒಳ್ಳೆಯ ತನ ನಿಮ್ಮನ್ನು ಎಂದು ಕೈ ಬಿಡುವುದಿಲ್ಲ ಒಳ್ಳೆಯದಾಗಲಿ. 

Leave A Reply

Your email address will not be published.