ನೆನಸಿಟ್ಟ ಬಾದಾಮಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು

0 19

ನೆನಸಿಟ್ಟ ಬಾದಾಮಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ಏನು ಅಂತ ಗೊತ್ತಾ ? ಗೊತ್ತಿಲ್ಲವ ಹಾಗಿದ್ದರೆ ತಿಳಿಯೋಣ ಬನ್ನಿ ಏನೇನು ಲಾಭಗಳಿವೆ ಎಂದು.
ಬಾದಾಮಿ ಇಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳು ಇದೇ ಎನ್ನುವುದು ಕೆಲವು ಜನರಿಗೆ ಗೊತ್ತಿದೆ ಇನ್ನು ಕೆಲವು ಜನರಿಗೆ ಗೊತ್ತಿಲ್ಲ, ಬಾದಾಮಿಯಲ್ಲಿ ಎರಡು ವಿಧಗಳು :
1 ಸಿಹಿ ಬಾದಾಮಿ
2 ಕಹಿ ಬಾದಾಮಿ

ಸಿಹಿ ಬಾದಾಮಿಯನ್ನು ತಿನ್ನಲಿಕ್ಕೆ ಉಪಯೋಗ ಮಾಡಿದರೆ ಮತ್ತೊಂದು ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ, ಬಾದಾಮಿಯಲ್ಲಿ ಪ್ರೋಟೀನ್, ಒಮೆಗಾ, ಕೊಬ್ಬಿನ ಆಮ್ಲ, ಒಮೆಗಾ ಆರ್ ಕೊಬ್ಬಿನ ಆಮ್ಲ, ವಿಟಮಿನ್ ಇ ಕ್ಯಾಲ್ಸಿಯಂ ಪ್ರಾಸ್ಪೆರಸ್ ಸತು ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನ ಅಂಶಗಳನ್ನು ಪ್ರಮುಖವಾಗಿ ನೋಡಬಹುದು ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳು ಚರ್ಮದಲ್ಲಿರುವ ನೆರಿಗೆಗಳ ನಿವಾರಣೆ ಮಾಡದೇ ಇರಬಹುದು ಆದರೆ ಬಾದಾಮಿಯಲ್ಲಿ ನೈಸರ್ಗಿಕ ಅಂಶಗಳು ನೆರಿಗೆ ನಿವಾರಣೆ ಮಾಡಿಕೊಳ್ಳಬಹುದು ಪ್ರತಿನಿತ್ಯ ಬೆಳಿಗ್ಗೆನೆ ನೆನೆಸಿಟ್ಟ ಬಾದಾಮಿಯನ್ನು ಸೇವನೆ ಮಾಡುವುದರಿಂದ ಚರ್ಮದಲ್ಲಿನ ನೆರಿಗೆ ಮತ್ತು ವಯಸ್ಸಾಗುವ ವೇಳೆ ಮೂಡುವ ಇತರ ಲಕ್ಷಣಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ ನೆನಪಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರಿ ಬಯೋಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಪ್ರೀ ಬಯೋಟಿಕ್ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪಾದಿಸುವುದರ ಮೂಲಕ ಇದರ ಫಲವಾಗಿ ಹೊಟ್ಟೆಗೆ ಹಬ್ಬಿರುವ ರೋಗಗಳನ್ನು ಇದು ತಡೆಗಟ್ಟುತ್ತದೆ.

ಇನ್ನು ಎರಡನೆಯದಾಗಿ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗಿ ಆಹಾರ ಸರಾಗ ಹಾಗು ವೇಗವಾಗಿ ಕರಗಲು ನೆರವಾಗುತ್ತದೆ ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದರೆ ಹೊರಗಿನ ಸಿಪ್ಪೆಯು ಕಿತ್ತು ಹೋಗುವುದು ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳು ಲಭಿಸುತ್ತದೆ.

ಇನ್ನು ಮೂರನೆಯದು ನೀವು ಏನಾದರೂ ತಾಯಿಯಾಗುವುದಿದ್ದರೆ ನೆನೆಸಿಟ್ಟ ಬಾದಾಮಿಯನ್ನು ಆಹಾರ ಕ್ರಮದಲ್ಲಿ ತಪ್ಪದೇ ಸೇರಿಸಿಕೊಳ್ಳಿ ಅದು ನಿಮಗೂ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು ನೆನೆಸಿಟ್ಟ ಬಾದಾಮಿಯು ತಾಯಿಯ ಹಾಗೂ ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ ಹಾಗೂ ಶಕ್ತಿಯನ್ನು ನೀಡುತ್ತದೆ ಬಾದಾಮಿಯಲ್ಲಿರುವ ಪೋಲಿಕ್ ಆಮ್ಲವು ಯಾವುದೇ ರೀತಿಯ ಜನ್ಮ ವೈಫಲ್ಯವನ್ನು ತಡೆಗಟ್ಟುತ್ತದೆ.

ಇನ್ನು ನಾಲ್ಕನೆಯದು ಪ್ರತಿನಿತ್ಯ ನಾಲ್ಕರಿಂದ ಆರು ನೆನೆಸಿಟ್ಟ ಬಾದಾಮಿಯನ್ನು ಸೇವನೆ ಮಾಡಿದರೆ ಅದರಿಂದ ಮೆದುಳಿಗೆ ಶಕ್ತಿ ಸಿಗುತ್ತದೆ ಮತ್ತು ಮೆದುಳಿನ ನರ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗುತ್ತದೆ ಬೆಳಿಗ್ಗೆ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಮೆದುಳಿನ ಕಾರ್ಯ ಕೂಡ ಸುಧಾರಿಸುತ್ತದೆ.

ಇನ್ನು 5ನೆಯದು ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದರಿಂದ ದೀರ್ಘಕಾಲದ ಮಲಬದ್ಧತೆ ಕೂಡ ನಿವಾರಣೆ ಆಗುತ್ತದೆ ನೆನೆಸಿಟ್ಟ ಬಾದಾಮಿಯಲ್ಲಿ ಹೀರಿಕೊಳ್ಳದ ನಾರಿನ ಅಂಶ ಹೆಚ್ಚಾಗಿರುವುದರಿಂದ ಒರಟು ಪ್ರಮಾಣ ಅಧಿಕಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

ಇನ್ನು 7ನೆಯದು ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು ಕರಗಿಸಬೇಕು ಎಂದು ನೀವೇನಾದರೂ ಯೋಚಿಸುತ್ತಿದ್ದರೆ ನೆನೆಸಿಟ್ಟ ಬಾದಾಮಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ ಬಾದಾಮಿಯ ಹೊರಗಿನ ಸಿಪ್ಪೆಯನ್ನು ತೆಗೆಯುವ ಕಾರಣ ನೆಲೆಸಿಟ್ಟ ಬಾದಾಮಿಯನ್ನು ತಿಂದರೆ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬಹುದು. ನೆನಿಸಿಟ್ಟಂತಹ ಬಾದಾಮಿಯಲ್ಲಿ ಏಕ ಪರ್ಯಾಪ್ತ ಕೊಬ್ಬಿನ ಅಂಶ ಇರುವುದು ಇದು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬುವಂತೆ ಮಾಡುತ್ತದೆ.

ಹೀಗೆ ನೆನೆಸಿಟ್ಟ ಬಾದಾಮಿಯಿಂದ ಕೆಲವು ಪ್ರಯೋಜನಗಳಿವೆ ಹಾಗಾದರೆ ತಪ್ಪದೆ ಬಾದಾಮಿಯನ್ನು ನೆನೆಸಿಡಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬನ್ನಿ ನೀವೇ ನೋಡಿ ನಿಮ್ಮ ಆರೋಗ್ಯದಲ್ಲಿ ಎಷ್ಟೊಂದು ಸುಧಾರಣೆ ಆಗುತ್ತದೆ ಎಂದು.

Leave A Reply

Your email address will not be published.