ಧನಲಾಭ & ಸಂಪತ್ತು ವೃದ್ಧಿಗೆ ಕನ್ನಡಿಯನ್ನ ಯಾವ ದಿಕ್ಕಿನಲ್ಲಿ ಇರಿಸಬೇಕು ಗೊತ್ತಾ?
ಕನ್ನಡಿ ನಮ್ಮ ದೈನಂದಿನ ಬದುಕಿನ ಭಾಗವಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ವಾಸ್ತು ಪ್ರಕಾರ ಕನ್ನಡಿಯನ್ನು ಇಡಲು ಒಂದು ಸೂಕ್ತವಾದ ದಿಕ್ಕಿದೆ. ಆ ದಿಕ್ಕು ಯಾವುದು ಹಾಗೂ ಅದರಿಂದ ಏನೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.
ಪ್ರತಿಯೊಂದು ಮನೆಯಲ್ಲಿ ಕನ್ನಡಿ ಇರುತ್ತದೆ. ಅನೇಕ ರೀತಿಯಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಹಾಗೆಯೇ ಈ ಕನ್ನಡಿಗೆ ವಾಸ್ತು ಪ್ರಕಾರ ಸಹ ಮಹತ್ವವಿದೆ. ಈ ಕನ್ನಡಿಯಲ್ಲಿ ಸಿಕ್ಕ ಸಿಕ್ಕಲೆಲ್ಲಾ ಹಾಕಬಾರದು. ಅದಕ್ಕೂ ಒಂದು ಸರಿಯಾದ ದಿಕ್ಕಿದೆ.
ಕನ್ನಡಿಯನ್ನು ಯಾವಾಗಲೂ ಮನೆಯ ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಹಾಕಬೇಕು ಎನ್ನಲಾಗುತ್ತದೆ. ಹಾಗೆಯೇ ಕನ್ನಡಿಯನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಾಕಬಾರದಂತೆ. ಇದರಿಂದ ಸಮಸ್ಯೆಗಳಾಗುತ್ತದೆ.
ಮಲಗುವ ಕೋಣೆ ಅಥವಾ ಸ್ನಾನಗೃಹಕ್ಕಿಂತ ಹೆಚ್ಚಾಗಿ ಊಟದ ಕೋಣೆಯಲ್ಲಿ ಕನ್ನಡಿಯನ್ನು ಇಡುವುದು ಉತ್ತಮ. ಇದರಿಂದ ಕುಟುಂಬವು ಡೈನಿಂಗ್ ಟೇಬಲ್‌ನಲ್ಲಿ ತಿನ್ನಲು ಕುಳಿತಾಗ, ಕನ್ನಡಿಯಲ್ಲಿ ಪ್ರತಿಫಲಿಸುತ್ತದೆ ಅದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಕನ್ನಡಿಯನ್ನು ಬೀರು ಲಾಕರ್‌ನಲ್ಲಿ ಹಾಕಬಹುದು. ಆದರೆ ಲಾಕರ್‌ನ ವಿರೂಪಗೊಂಡ ಚಿತ್ರವು ಅದರಲ್ಲಿ ಪ್ರತಿಫಲಿಸದಂತೆ ನೋಡಿಕೊಳ್ಳಿ ಲಾಕರ್‌ನಲ್ಲಿ ಕನ್ನಡಿಯನ್ನು ಇಡುವುದರಿಂದ ಕುಟುಂಬದಲ್ಲಿ ಮತ್ತು ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.
ಮನೆಯಲ್ಲಿರುವ ಎಲ್ಲಾ ಕನ್ನಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಇಟ್ಟುಕೊಳ್ಳುವುದು ಬಹಳ ಮುಖ್ಯ. ಕನ್ನಡಿಯ ಮೇಲೆ ಯಾವುದೇ ಕಲೆಗಳು ಅಥವಾ ಕೊಳೆ ಇರಬಾರದು. ಇದು ವಾಸ್ತು ಪ್ರಕಾರ ಒಳ್ಳೆಯದಲ್ಲ.
ಕನ್ನಡಿಯನ್ನು ನೀರಿನ ಅಂಶ ಎಂದು ಕರೆಯಲಾಗುತ್ತದೆ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡಬಾರದು. ಏಕೆಂದರೆ ಕನ್ನಡಿಯಲ್ಲಿ ನೀವು ಮಲಗುವುದು ಕಾಣಿಸಿದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ.
ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಇದು ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳು ಸೇರಿಕೊಳ್ಳಲು ಕಾರಣವಾಗುತ್ತದೆ.