ಎಳ್ಳೆಣ್ಣೆ ಹೀಗೆ ಬಳಸಿದ್ರೆ ದೇಹದಲ್ಲಿ ಎಂತಾ ಅದ್ಬುತ ಪರಿಣಾಮ ಬೀರತ್ತೆ ಗೊತ್ತಾ!

0 43

ಚಳಿಗಾಲದಲ್ಲಿ ಪ್ರತಿದಿನ ಎಳ್ಳಿನ ಎಣ್ಣೆಯನ್ನು ಬಳಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೀರ್ಣಕ್ರಿಯೆಯನ್ನು ಗುಣಪಡಿಸುವುದರಿಂದ ಹಿಡಿದು ಚರ್ಮದ ಸಮಸ್ಯೆಗಳಿಗೆ ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆಯುರ್ವೇದದ ಪ್ರಕಾರ, ಎಳ್ಳೆಣ್ಣೆಯು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಬಳಸುವುದರಿಂದ ನೀವು ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. 

ಎಳ್ಳಿನ ಎಣ್ಣೆಯನ್ನು ಅದರ ಬೀಜಗಳಿಂದ ತೆಗೆಯಲಾಗುತ್ತದೆ. ಎಳ್ಳನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಎಳ್ಳನ್ನು ಪುಡಿ, ಎಣ್ಣೆ ಮತ್ತು ಪೇಸ್ಟ್ ರೂಪದಲ್ಲಿ ನೀವು ಸೇವಿಸಬಹುದು.

ಎಳ್ಳಿನ ಎಣ್ಣೆಯನ್ನು ಮೊದಲಿಗಿಂತ ಹೆಚ್ಚು ರೆಫೈನ್ ಮಾಡಲಾಗುತ್ತದೆ, ಆದ್ದರಿಂದ ನೀವು ಅದನ್ನು ಸುಲಭವಾಗಿ ಆಹಾರದಲ್ಲಿ ಬಳಸಬಹುದು. ಎಳ್ಳಿನ ಎಣ್ಣೆಯು ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದೇ ವೇಳೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ.

ತ್ವಚೆಗೆ ತುಂಬಾ ಲಾಭಕಾರಿ

Sesame oil ನಿಂದ ಮುಖವನ್ನು ಮಸಾಜ್ ಮಾಡುವುದು ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ. ನಂತರ ಇದು ಚರ್ಮದೊಳಗೆ ಸುಲಭವಾಗಿ  ಹೀರಲ್ಪಡುತ್ತದೆ ಮತ್ತು ಅದನ್ನು ಪೋಷಿಸುತ್ತದೆ. ಇದಲ್ಲದೆ, ಎಳ್ಳಿನ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಇದು ಯುವಿ ಕಿರಣಗಳು, ಮಾಲಿನ್ಯ ಮತ್ತು ವಿಷಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಚಳಿಗಾಲದಲ್ಲಿ (Winter Health Tips) ಬಳಕೆ ಮಾಡಿ

ಚಳಿಗಾಲದಲ್ಲಿ ಎಳ್ಳಿನ ಎಣ್ಣೆಯ ಬಳಕೆ ನಿಮ್ಮನ್ನು ಬೆಚ್ಚಗಿರಿಸುತ್ತದೆ. ಆಯುರ್ವೇದದ ಪ್ರಕಾರ, ಎಳ್ಳಿನ ಎಣ್ಣೆ ವಾತ ದೋಷವನ್ನು ಶಾಂತಗೊಳಿಸುತ್ತದೆ ಮತ್ತು ಸಮತೋಲನದಲ್ಲಿರಿಸುತ್ತದೆ. ಆದರೆ, ಬೇಸಿಗೆಯಲ್ಲಿ ಎಳ್ಳಿನ ಎಣ್ಣೆಯನ್ನು ಬಳಸುವುದನ್ನು ತಪ್ಪಿಸಿ, ಕಾರಣ ಕಾವು ಹೆಚ್ಚಿಸುವುದು ಇದರ ಗುಣಧರ್ಮ.

ಜೀರ್ಣಕ್ರಿಯೆ ಹೆಚ್ಚಿಸುತ್ತದೆ

ಎಳ್ಳೆಣ್ಣೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ ಮತ್ತು ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಎಳ್ಳಿನ ಎಣ್ಣೆ ಫೈಬರ್ ಸಮೃದ್ಧವಾಗಿದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿಮಗೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.

ಅರ್ಥ್ರೈಟಿಸ್ ಸಮಸ್ಯೆಗೆ ರಾಮಬಾಣ 

ಎಳ್ಳೆಣ್ಣೆ ಅಂದರೆ ಎಳ್ಳೆಣ್ಣೆಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಮತ್ತು ಇದು ಕೀಲುಗಳಲ್ಲಿನ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಸಂಧಿವಾತದ ಸಮಸ್ಯೆಯಲ್ಲಿ ಎಳ್ಳಿನ ಎಣ್ಣೆಯ ಮಸಾಜ್ ಪ್ರಯೋಜನಕಾರಿ. ಇದರ ಹೊರತಾಗಿ, ಇದನ್ನು ಹಲ್ಲುನೋವಿಗೆ ಹಚ್ಚುವುದು ಸಹ ಪ್ರಯೋಜನಕಾರಿಯಾಗಿದೆ.

ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ

ಅಧ್ಯಯನದ ಪ್ರಕಾರ, ಮಲಗುವ ಮುನ್ನ ಹಣೆಯ ಮೇಲೆ ಕೆಲವು ಹನಿ ಎಳ್ಳನ್ನು ಹಚ್ಚುವುದರಿಂದ ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ. ಎಳ್ಳಿನ ಎಣ್ಣೆಯನ್ನು ಹಚ್ಚುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಆದರೆ, ಯಾವುದೇ ಕಾರಣಕ್ಕೂ ಎಳ್ಳಿನ ಎಣ್ಣೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಬೇಡಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

Leave A Reply

Your email address will not be published.