ಬೆಳ್ಳುಳ್ಳಿ ಸಕ್ಕರೆ ಕಾಯಿಲೆಗೆ ಎಂತ ಔಷಧಿ ಗೊತ್ತಾ?
ಬೆಳ್ಳುಳ್ಳಿ ಒಂದು ಉಷ್ಣ ಪದಾರ್ಥ. ಇದು ನಮ್ಮ ದೇಹದ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಉಂಟು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಹೃದಯದ ತೊಂದರೆ ಇರುವ ಜನರಿಗೆ ಬೆಳ್ಳುಳ್ಳಿಯಿಂದ ಪ್ರಯೋಜನ ಜಾಸ್ತಿ. ಇದು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಜೊತೆಗೆ ಕೊಲೆ ಸ್ಟ್ರಾಲ್ ಪ್ರಮಾಣವನ್ನು ಸಹ ಕಂಟ್ರೋಲ್ ಮಾಡುತ್ತದೆ.
ಸಕ್ಕರೆ ಕಾಯಿಲೆ ಇರುವವರಿಗೆ ಬೆಳ್ಳುಳ್ಳಿ ಒಂದು ವರದಾನ ಎಂದು ಹೇಳಬಹುದು. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದ ರಿಂದ ಇದರ ಸಂಪೂರ್ಣ ಲಾಭಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಆರೋಗ್ಯದ ಅಭಿವೃದ್ಧಿಗೆ ಮತ್ತು ಉತ್ತಮ ಜೀವನ ಶೈಲಿಯಿಂದ ಕೂಡಿರುವ ಜೀವನಕ್ಕೆ ಬೆಳ್ಳುಳ್ಳಿಯಿಂದ ಪ್ರಯೋಜನಗಳನ್ನು ಈ ರೀತಿ ಕಂಡುಕೊಳ್ಳಿ.
ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ
ನಾವು ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆ ಮಾಡುವು ದರಿಂದ ನಮ್ಮ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿ ಉಳಿಯುತ್ತದೆ ಮತ್ತು ಹೃದಯದ ಆರೋಗ್ಯ ಅಭಿವೃದ್ಧಿಯಾಗುತ್ತದೆ.
ಏಕೆಂದರೆ ಹಸಿ ಬೆಳ್ಳುಳ್ಳಿ ತನ್ನಲ್ಲಿ ‘ಅಲ್ಲಿಸಿನ್’ ಎಂಬ ಅಂಶ ವನ್ನು ಒಳಗೊಂಡಿದ್ದು, ನಮ್ಮ ರಕ್ತದಲ್ಲಿ ಕೊಲೆ ಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ ಮತ್ತು ರಕ್ತವನ್ನು ತೆಳ್ಳಗೆ ಮಾಡುವ ಗುಣವನ್ನು ಹೊಂದಿದೆ.
ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು
ಬೆಳ್ಳುಳ್ಳಿಯ ಪ್ರಯೋಜನಗಳನ್ನು ಪಡೆಯಲು ವೈದ್ಯ ರಾದ ಡಾ. ಪ್ರಸಾದ್ ಹೇಳುವ ಹಾಗೆ ಹಸಿ ಬೆಳ್ಳುಳ್ಳಿ ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಬೇಯಿಸಿ ತಿನ್ನಲು ಹೋದರೆ ಬೆಳ್ಳುಳ್ಳಿಯಲ್ಲಿ ಇರುವ ಅಲ್ಲಿಸಿನ್ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾ ಗುತ್ತದೆ. ಹೀಗಾಗಿ ಒಂದು ಲೋಟ ನೀರಿನ ಜೊತೆ ಬೆಳ್ಳುಳ್ಳಿಯನ್ನು ಸೇವಿಸುವ ಅಭ್ಯಾಸ ಇಟ್ಟು ಕೊಳ್ಳಿ.
ಇದರಿಂದ ಮಧುಮೇಹವನ್ನು ಸಹ ನಿಯಂತ್ರಣ ಮಾಡ ಬಹುದು ಮತ್ತು ತಿನ್ನುವ ಆಹಾರದಲ್ಲಿ ಸಿಗುವ ಪೌಷ್ಟಿ ಕಾಂಶಗಳು ನಮಗೆ ಸರಿಯಾದ ಪ್ರಮಾಣದಲ್ಲಿ ಸಿಗುತ್ತವೆ. ಬೆಳ್ಳುಳ್ಳಿಯ ಕಡು ವಾಸನೆಯ ಬಗ್ಗೆ ನಿಮಗೆ ಅಡಚಣೆ ಉಂಟಾದರೆ ಇದನ್ನು ನಿಂಬೆಹಣ್ಣು, ಆಪಲ್ ಸೈಡರ್ ವಿನೆಗರ್ ಅಥವಾ ಬಿಸಿ ನೀರಿನ ಜೊತೆ ಸೇವಿಸು ವುದು ಉತ್ತಮ.
ಬೆಳ್ಳುಳ್ಳಿ ಚಹಾ
ಬೆಳ್ಳುಳ್ಳಿಯ ಅದ್ಭುತ ಪ್ರಯೋಜನಗಳನ್ನು ತಮ್ಮದಾಗಿಸಿ ಕೊಳ್ಳಬೇಕು ಎನ್ನುವವರಿಗೆ ಬೆಳ್ಳುಳ್ಳಿ ಚಹಾ ಇಷ್ಟವಾ ಗುತ್ತದೆ. ಬೆಳ್ಳುಳ್ಳಿ ಚಹಾ ತಯಾರು ಮಾಡಲು ಬೆಳ್ಳುಳ್ಳಿ ಯನ್ನು ಜಜ್ಜಿ ಒಂದು ಕಪ್ ನೀರಿನಲ್ಲಿ ಕೆಲವು ನಿಮಿಷ ಗಳ ಕಾಲ ಚೆನ್ನಾಗಿ ಕುದಿಸಬೇಕು.
ಇದಕ್ಕೆ ಒಂದೆರಡು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಬೇಕು. ಸ್ವಲ್ಪ ಹೊತ್ತು ಹಾಗೆ ಬಿಟ್ಟು ನಂತರ ಸ್ಟೌ ಆರಿಸಿ ಈ ಮಿಶ್ರಣ ಸಾಧಾರಣ ತಾಪಮಾನಕ್ಕೆ ಬಂದ ನಂತರದಲ್ಲಿ ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯಬೇಕು.
ಬೆಳಗಿನ ಸಮಯದಲ್ಲಿ ಇದನ್ನು ಸೇವನೆ ಮಾಡುವುದ ರಿಂದ ರೋಗ ನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ.
ಜೇನುತುಪ್ಪ ಮತ್ತು ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸುವುದು ಕೂಡ ಆರೋಗ್ಯಕ್ಕೆ ತುಂಬಾ ಅನುಕೂಲ ಕಾರಿ. ಬೆಳ್ಳುಳ್ಳಿಯನ್ನು ನಾಲ್ಕು ಹೋಳುಗಳನ್ನಾಗಿ ಕತ್ತರಿಸಿ, ಒಂದು ಸ್ಪೂನ್ ಮೇಲೆ ಇರಿಸಿ, ಅದಕ್ಕೆ ಕೆಲವು ಹಾನಿಗಳಷ್ಟು ಜೇನುತುಪ್ಪವನ್ನು ಸೇರಿಸಿ ನಾಲ್ಕೈದು ನಿಮಿಷಗಳ ಕಾಲ ಹಾಗೆ ಬಿಡಬೇಕು.
ಆನಂತರ ಬೆಳ್ಳುಳ್ಳಿಯನ್ನು ಬಾಯಲ್ಲಿ ಹಾಕಿಕೊಂಡು ಜಗಿದು ತಿನ್ನಬೇಕು. ಒಂದು ವೇಳೆ ಬೆಳ್ಳುಳ್ಳಿಯ ವಾಸನೆ ತುಂಬಾ ಗಾಢ ವಾಗಿದ್ದರೆ, ಪಕ್ಕದಲ್ಲಿ ಕುಡಿಯಲು ಬಿಸಿ ನೀರನ್ನು ಇಟ್ಟುಕೊಳ್ಳಿ. ದೊಡ್ಡ ಪ್ರಮಾಣದಲ್ಲಿ ಮಾಡು ವಿರಾದರೆ 10 ಬೆಳ್ಳುಳ್ಳಿಯನ್ನು ಐದು ಟೇಬಲ್ ಚಮಚ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ. ಬೆಳಗಿನ ಸಮಯ ದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸು ವುದರಿಂದ ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ.
ಹುರಿದ ಬೆಳ್ಳುಳ್ಳಿ
ವೈದ್ಯರು ಹೇಳುವ ಹಾಗೆ ಕೇವಲ ಹಸಿ ಬೆಳ್ಳುಳ್ಳಿ ಮಾತ್ರ ವಲ್ಲ, ಹುರಿದ ಬೆಳ್ಳುಳ್ಳಿ ಕೂಡ ಆರೋಗ್ಯಕ್ಕೆ ತನ್ನದೇ ಆದ ಪ್ರಯೋಜನಗಳನ್ನು ನೀಡುತ್ತದೆ.
ಇದಕ್ಕಾಗಿ ಬೆಳ್ಳುಳ್ಳಿಯ ಮೇಲ್ಭಾಗವನ್ನು ಕತ್ತರಿಸಿ ಆಲಿವ್ ಆಯಿಲ್ ನಲ್ಲಿ ಅದ್ದಿ, ಅಲ್ಯುಮಿನಿಯಂ ಫಾಯಿಲ್ ನಲ್ಲಿ ಸುತ್ತಬೇಕು. ಇದನ್ನು ಅರ್ಧ ಗಂಟೆಗಳ ಕಾಲ 200 ಡಿಗ್ರಿ ತಾಪಮಾನದಲ್ಲಿ ರೋಸ್ಟ್ ಮಾಡಬೇಕು.
ಆಗ ಬೆಳ್ಳುಳ್ಳಿ ಮೃದುವಾಗುತ್ತದೆ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತದೆ. ತಣ್ಣಗಾದ ನಂತರದಲ್ಲಿ ಬೆಳ್ಳುಳ್ಳಿ ಎಸಳುಗ ಳನ್ನು ತೆಗೆದುಕೊಂಡು ಸಿಪ್ಪೆ ತೆಗೆದು ಅದನ್ನು ಹಾಗೆ ತಿನ್ನಬಹುದು ಅಥವಾ ನಿಮ್ಮ ಅಡುಗೆಗಳಲ್ಲಿ ಕೂಡ ಸೇರಿಸಬಹುದು.
ಪ್ರತಿದಿನ ಅಡುಗೆಗಳಲ್ಲಿ ಬಳಸಿ
ನಿಮ್ಮ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿಯನ್ನು ಸುಲಭವಾಗಿ ಸೇರಿಸಿಕೊಳ್ಳಬಹುದು. ನೀವು ತಯಾರು ಮಾಡುವ ವಿವಿಧ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ ತಿನ್ನಿ. ಇದರ ಗಾಢವಾದ ವಾಸನೆ ಮತ್ತು ಇದರಲ್ಲಿರುವ ಆರೋಗ್ಯಕರ ಅಂಶಗಳು ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತವೆ.
ಬೆಳ್ಳುಳ್ಳಿ ಎಣ್ಣೆ
ಬೆಳ್ಳುಳ್ಳಿ ಎಣ್ಣೆ ಕೂಡ ಬೆಳ್ಳುಳ್ಳಿಯ ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನೀವು ತಯಾರು ಮಾಡಿದ ಸಲಾಡ್ ಡ್ರೆಸ್ಸಿಂಗ್ ಮಾಡುವು ದರಿಂದ ಹಿಡಿದು ವಿವಿಧ ಬಗೆಯ ಅಡುಗೆಗಳಲ್ಲಿ ಕೂಡ ಬೆಳ್ಳುಳ್ಳಿ ಎಣ್ಣೆಯನ್ನು ಬಳಸಬಹುದು.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಎಣ್ಣೆ ಸಿಗುತ್ತದೆ. ನೀವು ಕೂಡ ಇದನ್ನು ತಯಾರು ಮಾಡಿಕೊಳ್ಳಬಹುದು. ಇದಕ್ಕಾಗಿ ಬೆಳ್ಳುಳ್ಳಿ ಸಿಪ್ಪೆ ಸುಲಿದು ಚೆನ್ನಾಗಿ ಜಜ್ಜಿ ಅದನ್ನು ಅಡುಗೆ ಎಣ್ಣೆಯ ಜೊತೆ ಅಂದರೆ ಆಲಿವ್ ಆಯಿಲ್ ಅಥವಾ ಅವಕ್ಯಾಡೊ ಆಯಿಲ್ ಜೊತೆಗೆ ಮಿಕ್ಸ್ ಮಾಡಿ ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಇದನ್ನು ಬೇಯಿಸಬೇಕು.
ಬೆಳ್ಳುಳ್ಳಿ ಸುಟ್ಟು ಹೋಗದಂತೆ ನೋಡಿಕೊಂಡು ಆನಂ ತರ ತಣ್ಣಗೆ ಮಾಡಿ. ನಂತರ ಇದನ್ನು ಒಂದು ಗಾಳಿ ಆಡದ ಶುದ್ಧವಾದ ಬಾಟಲ್ ಗೆ ಶೋಧಿಸಿ ರೆಫ್ರಿಜರೇಟರ್ ನಲ್ಲಿ ಇಟ್ಟುಕೊಳ್ಳಬಹುದು ಮತ್ತು ನಿಮಗೆ ಬೇಕಾದಾಗ ಬಳಸಬಹುದು.