ಬರೀ 2 ಪುದಿನಾ ಎಲೆ ಹೀಗೆ ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

0 412

ನಾವು ದಿನನಿತ್ಯ ಬಳಸುವ ಸಸ್ಯಗಳು ನಮಗೆ ಗೊತ್ತಿರದ ಅರೋಗ್ಯ ಗುಣಗಳನ್ನು ಹೊಂದಿರುತ್ತವೆ.ಹೀಗಾಗಿ ನಮಗೆ ಗೊತ್ತಿಲ್ಲದೇ ಅನೇಕ ಅರೋಗ್ಯ ಸಮಸ್ಸೆಗಳು ನಿವಾರಣೆ ಆಗುತ್ತವೆ. ಅದರೆ ಈ ಸಸ್ಯಗಳ ಉಪಯೋಗ ಗೊತ್ತಿದ್ದರೆ ನಮಗೆ ಬೇಕಾದಾಗ ಮನೆಮದ್ದಿನಂತೆ ಬಳಸಿಕೊಳ್ಳಬಹುದು. ಅಂತಃ ಸಸ್ಯಗಳಲ್ಲಿ ಪುದಿನ ಕೂಡ ಒಂದು. ಘಮ ಘಮ ಎಂದು ಪರಿಮಳದಿಂದ ತಾಜಾತನದ ಅನುಭವ ನೀಡುವ ಪುದಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಪುದಿನವನ್ನು ಟೀ ತಯಾರಿಸಿ ಸೇವಿಸಿದರೆ ಅನೇಕ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದುಗಲಿದೆ.

ಇನ್ನು ಪುದಿನ ಬಳಕೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ. ಪುದಿನ ಟೀ ಅಥವಾ ಆಹಾರದಲ್ಲಿ ಪುದಿನ ಚೆಟ್ನಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್, ಮುಟ್ಟಿನ ಸೆಳೆತವನ್ನು ನೀವಾರಿಸುತ್ತದೆ.

ಪುದಿನ ಪಿತ್ತ ರಸ ಸ್ರಾವಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಪಿತ್ತ ರಸದ ಅರಿವನ್ನು ಉತ್ತೇಜಿಸುತ್ತದೆ.ಇದು ಜೀರ್ಣ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸರಾಗ ಗೊಳಿಸಲು ಸಹಾಯ ಮಾಡುತ್ತದೆ.ಇನ್ನು ಅಸ್ತಮಾ ಸಮಸ್ಸೆಯಿಂದ ಉಸಿರಾಟ ತಲೆನೋವು ಕಾಡುತ್ತದೆ.ಅಲ್ಲದೆ ಹಲವು ಕಾರಣಗಳಿಂದ ತಲೆನೋವು ಬರುತ್ತದೆ.ಎಲ್ಲವನ್ನು ನಿವಾರಣೆ ಮಾಡಲು ಪುದಿನ ಸಹಾಯ ಮಾಡುತ್ತದೆ.

ದೀರ್ಘಕಾಲದ ಕೆಮ್ಮನ್ನು ಸಹ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಜೀರ್ಣ ಕ್ರಿಯೆ ಉತ್ತಮವಾಗಿ ದೇಹದಲ್ಲಿ ಕೊಬ್ಬು ಕರಗುತ್ತದೆ.ಹೀಗಾಗಿ ಎರಡು ದಿನಕ್ಕೊಮ್ಮೆ ಪುದಿನವನ್ನು ಅಡುಗೆಯಲ್ಲಿ ಬಳಸಿ.

ಇನ್ನು ಪುದಿನ ಅತೀ ಹೆಚ್ಚು ಉತ್ಕರ್ಷನ ಹಾಗು ನಿರೋಧಕ ಗುಣವನ್ನು ಉರಿಯುತ ನಿವಾರಕ ಸಾಮರ್ಥ್ಯವನ್ನು ಹೊಂದಿದೆ.ಹೀಗಾಗಿ ಅಲರ್ಜಿ ಅನ್ನು ಗುಣಪಡಿಸುತ್ತದೆ. ತುರಿಕೆ ಅಥವಾ ಕೀಟಗಳು ಕಚ್ಚಿ ಸೋಂಕು ತಗುಲಿದ್ದಾರೆ ಅಲ್ಲಿ ಪುದಿನ ಎಲೆ ಹಾಕಿ ಆ ಜಾಗದಲ್ಲಿ ಉಜ್ಜಿ. ಇದರಿಂದ ಉರಿ ತುರಿಕೆ ಕಡಿಮೆ ಆಗುತ್ತದೆ.

ಇನ್ನು ಜ್ವರ ಇದ್ದಾಗ ಪುದಿನ ಟೀ ಸೇವಿಸಿ. ಇದರಿಂದ ದೇಹಕ್ಕೆ ಬೆಚ್ಚಗಿನ ಅನುಭೂತಿ ಸಿಕ್ಕಿ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಬಾಯಿಯ ದುರ್ವಸನೆಯನ್ನು ಕೂಡ ನಿವಾರಣೆ ಮಾಡುತ್ತದೆ.

ಪುದಿನ ಟೀ ತಯಾರಿಸುವ ವಿಧಾನ–7 ರಿಂದ 10 ಪುದಿನ ಎಲೆಯನ್ನು ಒಂದು ಲೋಟ ನೀರಿಗೆ ಹಾಕಿ 5 ನಿಮಿಷ ಕುದಿಸಿ. ನಂತರ ಅದನ್ನು ಸೋಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಆರೋಗ್ಯವಾಗಿರಿ.

Leave A Reply

Your email address will not be published.