ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿತೀರಾ!

0 275

ಬೆಳಗ್ಗೆ ತಿಂಡಿ ತಿನ್ನುವ ಮುಂಚೆ ಯಾವುದೇ ಕಾರಣಕ್ಕೂ ಕಾಫಿ ಟೀ ಕುಡಿಯಬೇಡಿ ಇದು ಆರೋಗ್ಯಕ್ಕೆ ತುಂಬಾ ಡೇಂಜರ್ ನಾವೆಲ್ಲರೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದುವುದು ಬಹಳ ಮುಖ್ಯ. ಏಕೆಂದರೆ ನಮ್ಮ ದೇಹದ ಎಲ್ಲಾ ಭಾಗಗಳು ಒಂದಕ್ಕೊಂದು ಕೊಂಡಿ ಯಂತೆ ಬೆಸೆದುಕೊಂಡಿರುತ್ತವೆ ಈಗಾಗಿ ನಾವು ಯಾವ ಭಾಗದ ಆರೋಗ್ಯದ ವಿಚಾರವನ್ನು ನಿರ್ಲಕ್ಷ್ಯ ಮಾಡಿದರೂ ಅದು ಇನ್ನೊಂದು ಭಾಗದ ಮೇಲೆ ಪ್ರಭಾವ ಬೀರುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ಕಾಫಿ ಅಥವಾ ಟೀ ಇಲ್ಲವೆಂದರೆ ಬ್ಲ್ಯಾಕ್ ಕಾಫಿ ಅಥವಾ ಬ್ಲ್ಯಾಕ್ ಟೀ ಕುಡಿಯುವ ಅಭ್ಯಾಸ ಮಾಡಿ ಕೊಂಡಿರು ತ್ತೇವೆ. ಅಂದರೆ ನಾವು ಇಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ನಿರ್ಲಕ್ಷ ಮಾಡುತ್ತಿದ್ದೇವೆ ಎಂದರ್ಥ ಇದರಿಂದ ಬೇರೆ ಬೇರೆ ತರಹದ ಅಡ್ಡ ಪರಿಣಾಮಗಳು ನಮ್ಮ ದೇಹದ ಬೇರೆ ಬೇರೆ ಭಾಗಕ್ಕೆ ಎದುರಾಗುತ್ತವೆ ನಿಜವಾಗಲೂ ಇಲ್ಲಿ ಏನಾಗುತ್ತದೆ ತಿಳಿದುಕೊಳ್ಳೋಣ ಬನ್ನಿ.

ಅಸಿಡಿಟಿ ಉಂಟು ಮಾಡುತ್ತೆ—ಬ್ಲ್ಯಾಕ್ ಟೀ ಅಥವಾ ಬ್ಲ್ಯಾಕ್ ಕಾಫಿ ತುಂಬಾ ಆಮ್ಲೀಯ ಪ್ರಭಾವ ವನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯು ವುದರಿಂದ ದೇಹದಲ್ಲಿ ಪಿಹೆಚ್ ಮಟ್ಟ ಸಮತೋಲನ ತಪ್ಪುತ್ತದೆ. ಇದರಿಂದ ದೇಹದಲ್ಲಿ ಆಮ್ಲಿಯತೆ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಇದರಿಂದ ಅಜೀರ್ಣತೆ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ.

ನಿರ್ಜಲೀಕರಣ ಸಮಸ್ಯೆ ಕಂಡು ಬರುತ್ತದೆ–ಬ್ಲ್ಯಾಕ್ ಟೀ ತನ್ನಲ್ಲಿ ಥಿಯಫಿಲ್ಲಿನೆ ಎಂಬ ಅಂಶವನ್ನು ಒಳ ಗೊಂಡಿದ್ದು, ಇದು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಮತ್ತು ಇದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ.

ಮಲಬದ್ಧತೆ ಸಮಸ್ಯೆ–ಮೇಲೆ ಹೇಳಿದಂತೆ ಬ್ಲ್ಯಾಕ್ ಟೀ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ನಮ್ಮ ದೇಹದಲ್ಲಿ ದೊಡ್ಡ ಕರುಳಿನ ಭಾಗದಲ್ಲಿ ಮೊದಲ ಶೇಖರಣೆ ಆಗಿ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ.

ಹಲ್ಲುಗಳ ಮೇಲ್ಪದರ ಇಲ್ಲವಾಗುತ್ತದೆ–ಬ್ಲ್ಯಾಕ್ ಟೀ ಸಾಮಾನ್ಯವಾಗಿ ತನ್ನಲ್ಲಿ ಆಮ್ಲೀಯ ಪ್ರಭಾವವನ್ನು ಹೊಂದಿದ್ದು,ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಇಡೀ ದೇಹದಲ್ಲಿ ಸೇರಿದಂತೆ ಬಾಯಲ್ಲಿ ಕೂಡ ಆಮ್ಲೀಯ ಪ್ರಭಾವ ಹೆಚ್ಚಾಗುತ್ತದೆ. ಇದು ಹಲ್ಲುಗಳ ಮೇಲ್ಪದರ ಹಾಳಾಗುವಂತೆ ಮಾಡುತ್ತದೆ ಮತ್ತು ವಸಡುಗಳ ಸಮಸ್ಯೆ ಕೂಡ ಇದರಿಂದ ಕಂಡುಬರುತ್ತದೆ.

ಹೊಟ್ಟೆ ಉಬ್ಬರ ಸಮಸ್ಯೆ—ಬೆಳಗಿನ ಸಮಯದಲ್ಲಿ ಬ್ಲ್ಯಾಕ್ ಕಾಫಿ ಅಥವಾ ಬ್ಲ್ಯಾಕ್ ಟೀ ಕುಡಿಯುವುದರಿಂದ ತುಂಬಾ ಜನರಿಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ಕಾಣಿಸುತ್ತದೆ. ಇದಕ್ಕೆ ಕಾರಣ ಬ್ಲ್ಯಾಕ್ ಟೀ ತನ್ನಲ್ಲಿ ಆಮ್ಲಿಯ ಪ್ರಭಾವವನ್ನು ಹೊಂದಿರುವುದು.

ಯಾವ ಸಮಯದಲ್ಲಿ ಬ್ಲಾಕ್ ಟೀ ಕುಡಿದರೆ ಒಳ್ಳೆಯದು—ಬ್ಲ್ಯಾಕ್ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನು ಒಂದು ನಿಗದಿತ ಸಮಯದಲ್ಲಿ ಕುಡಿಯಬೇಕು ಊಟದ ಆದ ನಂತರದಲ್ಲಿ ಎರಡು ಗಂಟೆ ಬಿಟ್ಟು ಕುಡಿಯಬೇಕು.

ನೀವು ಒಂದು ವೇಳೆ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ದ್ದರೆ ಹಾಲು ಮತ್ತು ಸಕ್ಕರೆ ಹಾಕದೆ ಇದನ್ನು ಕುಡಿಯ ಬಹುದು. ಖಾಲಿ ಹೊಟ್ಟೆಯಲ್ಲಿ ಮೊದಲ ಆಹಾರವಾಗಿ ಹಾಲು ಮತ್ತು ಸಕ್ಕರೆ ಬೆರೆಸಿದ ಕಾಫಿ ಅಥವಾ ಚಹಾ ಕುಡಿಯುವುದು ಆರೋಗ್ಯಕ್ಕೆ ತುಂಬಾ ಹಾನಿಕರ.​

Leave A Reply

Your email address will not be published.