ಬೇಗನೆ ಕಂಕಣ ಭಾಗ್ಯ ಕೂಡಿ ಬರಬೇಕಾದರೆ ಈ ಪೂಜೆ ಮಾಡಿ!

0 13,948

ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹ ಎನ್ನುವುದು ಒಂದು ಪ್ರಮುಖವಾದ ಘಟ್ಟವಾಗಿದೆ ವ್ಯಕ್ತಿಯ ಜೀವನ ಪ್ರಾರಂಭವಾಗುವುದು ಆತನ ಅಭಿವೃದ್ಧಿ ಆಗುವುದು ವಿವಾಹದ ನಂತರವೇ ಎಂದು ಹೇಳಿದರೆ ತಪ್ಪಾಗಲಾರದು ಎರಡು ಮನಸ್ಸುಗಳನ್ನು ಬೆಸೆಯುವ ಕೊಂಡಿ ವಿವಾಹವಾಗಿದೆ ಕಂಕಣ ಭಾಗ್ಯ ಎನ್ನುವುದು ಕೆಲವೊಬ್ಬರಿಗೆ ಶೀಘ್ರವಾಗಿ ಚಿಕ್ಕವಯಸ್ಸಿನಲ್ಲಿಯೇ ಕೂಡಿಬರುತ್ತದೆ ಇನ್ನು ಕೆಲವರಿಗೆ ತಡವಾಗಿ ಕೂಡಿ ಬರುತ್ತದೆ ಕೆಲವೊಬ್ಬರಿಗೆ ಎಷ್ಟೇ ಆಸ್ತಿ ಸಂಪತ್ತು ವಿದ್ಯೆ ಜ್ಞಾನ ಉತ್ತಮವಾದ ಉದ್ಯೋಗ ಇದ್ದರೂ ಬೇಗನೆ ಕಂಕಣಭಾಗ್ಯ ಕೂಡಿ ಬರುವುದಿಲ್ಲ ಅನೇಕ ಅಡೆತಡೆಗಳು ಬರುತ್ತವೆ ಕೆಲವೊಂದು ಸಂಬಂಧಗಳು ಹೊಂದಾಣಿಕೆ ಆಗುವುದಿಲ್ಲ ತಂದೆ-ತಾಯಿಗಳು ಎಷ್ಟೇ ಸಿರಿ ಸಂಪತ್ತು ಇದ್ದರೂ ಮಕ್ಕಳಿಗೆ ಸರಿಯಾದ ವಯಸ್ಸಿಗೆ ವಿವಾಹ ಮಾಡಲು ಆಗುತ್ತಿಲ್ಲ ಎಂದು ಚಿಂತೆಗೆ ಒಳಗಾಗುತ್ತಾರೆ ಗೆಳೆಯರೇ ಇದಕ್ಕೆಲ್ಲಾ ನಮ್ಮ

ಜಾತಕದಲ್ಲಿರುವ ದೋಷಗಳು ಕಾರಣವಾಗುತ್ತದೆ ಅವುಗಳ ನಿವಾರಣೆಗೆ ಇಷ್ಟೇ ಪರಿಹಾರ ಮಾಡಿಕೊಂಡರು ನಿವಾರಣೆ ಆಗದೇ ಕಂಕಣಭಾಗ್ಯ ಕೂಡಿ ಬರುವುದಿಲ್ಲ ಹಾಗಾಗಿ ಪರಿಹಾರ ಶಾಸ್ತ್ರದಲ್ಲಿ ಹೇಳಿರುವ ಸುಲಭವಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಶೀಘ್ರವಾಗಿ ಕಂಕಣಭಾಗ್ಯ ಕೂಡಿ ಬರುತ್ತದೆ ಅವರ ವಿವಾಹದಲ್ಲಿ ಯಾವುದೇ ರೀತಿಯ ಅಡೆತಡೆಗಳು ಉಂಟಾಗುವುದಿಲ್ಲ ಆ ಪರಿಹಾರ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಮದುವೆ ಆಗದೇ ಇರುವ ಗಂಡು ಆಗಲಿ ಅಥವಾ ಹೆಣ್ಣೆ ಆಗಲಿ ಮನೆಯಲ್ಲಿ ಸುಲಭವಾದ ಪರಿಹಾರ ಮಾಡಿಕೊಳ್ಳುವುದರಿಂದ ವಿವಾಹಕ್ಕೆ ಇರುವ ದೋಷಗಳು ನಿವಾರಣೆಯಾಗುತ್ತದೆ ಗೆಳೆಯರೇ ಎಲ್ಲ ವಿಘ್ನಗಳನ್ನು ನಾಶಮಾಡುವ ವಿನಾಯಕನ ಮೂರ್ತಿ ಅಥವಾ ಫೋಟೋವನ್ನು ತೆಗೆದುಕೊಳ್ಳಬೇಕು ಹಾಲಿನಿಂದ ಅಭಿಷೇಕವನ್ನು ಮಾಡಬೇಕು ನಂತರ ನೀರಿನಿಂದ ಶುದ್ಧಗೊಳಿಸಿ ಕುಂಕುಮ ಗರಿಕೆ ಬಿಳಿ ಹೂವನ್ನು

ಸಮರ್ಪಣೆ ಮಾಡಿ ನಿಮ್ಮ ಮನಸ್ಸಿಗೆ ಅನುಗುಣವಾಗಿ ಪೂಜೆಯನ್ನು ಮಾಡಬೇಕು. ಗಣೇಶನಿಗೆ ಪೂಜೆ ಸಲ್ಲಿಸುವಾಗ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನು ಸಮರ್ಪಣೆ ಮಾಡಬೇಕು ನಿಮ್ಮ ಇಚ್ಛೆಯಂತೆ ನಿಮ್ಮ ವಿವಾಹ ನೆರವೇರಬೇಕು ಇಂತಹ ವ್ಯಕ್ತಿಗಳ ಜೊತೆಗೆ ನಮ್ಮ ವಿವಾಹ ಇಷ್ಟುದಿನದ ಒಳಗಾಗಿ ನೆರವೇರಬೇಕು ಎನ್ನುವ ಮನೋಭಿಲಾಷೆ ಇದ್ದರೆ ಅದನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಅರಿಶಿಣವನ್ನಾಗಿ ಮಾಡಬೇಕು ಅದಕ್ಕೆ ಒಂದು ಅಡಿಕೆ ಬೆಟ್ಟೆಯನ್ನು ಹಾಕಬೇಕು ನಂತರ ಒಂದು ಬಿಳಿ ಎಕ್ಕದ ಹೂ ಹಾಕಬೇಕು ನಂತರ ಮುಖ್ಯವಾಗಿ ಬುಜಪತ್ರೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಹೆಸರು ನಿಮ್ಮ ಕುಲದೇವರ ಹೆಸರು ಹಾಗು ತಂದೆ ತಾಯಿ ಹೆಸರನ್ನು ಸಣ್ಣದಾಗಿ ಬರೆದು ಹಾಕಬೇಕು ನಂತರ ಪೂಜಾ ಸಾಮಗ್ರಿ ಅಂಗಡಿಯಲ್ಲಿ ಸಿಗುವ ಮರಳು ಮಾತಂಗಿ ಎನ್ನುವ ವಿಶೇಷವಾದ ಬೇರನ್ನು

ತೆಗೆದುಕೊಂಡು ಬಂದು ಹಾಕಬೇಕು ಅಥವಾ ಇದು ಇಲ್ಲದಿದ್ದರೆ ಬಿಳಿಸಾಸಿವೆ ಹಾಕಬೇಕು ಮುಖ್ಯವಾಗಿ ಗರಿಕೆಯನ್ನು ಹಾಕಬೇಕು ಇವೆಲ್ಲವನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ದೇವರ ಮುಂದೆ ಇರಬೇಕು ನಿಮ್ಮ ಮನಸ್ಸಿನಲ್ಲಿರುವ ಇಷ್ಟಾರ್ಥಗಳು ಕೋರಿಕೆಗಳನ್ನು ಸಮರ್ಪಿಸಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಒಂಬತ್ತು ದಿನಗಳ ಕಾಲ ತಪ್ಪದೇ ಗಣೇಶನ ದೇವಾಲಯಕ್ಕೆ ಹೋಗಿ ದಾಸವಾಳದ ಹೂವು ಹಾರ ಅಥವಾ ಗರಿಕೆ ಆಹಾರವನ್ನು ಗಣೇಶನಿಗೆ ಸಮರ್ಪಣೆ ಮಾಡಬೇಕು ಸಂಕಲ್ಪಕ್ಕೆ ಅನುಗುಣವಾಗಿ ವಧು ಅಥವಾ ವರರನ್ನು ವಿವಾಹ ಆಗಬೇಕು ಬೇಗನೆ ಕಂಕಣ ಭಾಗ್ಯ ಕೂಡಿ ಬರಬೇಕು ಎಂದು ಸಂಕಲ್ಪ ಮಾಡಿ ಕೊಳ್ಳಬೇಕು ನಂತರ 10ನೇ ದಿನದಂದು ಬಾಲಗಣಪತಿ ಹೋಮವನ್ನು ಚಿಕ್ಕದಾಗಿ ಮಾಡಬೇಕು ವಿವಾಹ ಆಗದೇ ಇರುವ ಸ್ತ್ರೀ ಪುರುಷರನ್ನು ಮುಂದೆ ಕೂರಿಸಿಕೊಂಡು ಬಾಲ ಗಣಪತಿ ಹೋಮವನ್ನು ಮಾಡಬೇಕು ಇದನ್ನು ಸೂರ್ಯಾಸ್ತದ ಒಳಗೆ ಮಾಡಬೇಕು ಈ ರೀತಿಯಾಗಿ

ಗಣೇಶನನ್ನು ಆರಾಧನೆ ಮಾಡುವುದರಿಂದ ಖಂಡಿತವಾಗಿಯೂ ಗಣೇಶನ ಅನುಗ್ರಹದಿಂದಾಗಿ ನಿಮಗೆ ಕಂಕಣಭಾಗ್ಯ ಕೂಡಿ ಬರುತ್ತದೆ ನೀವು ಇಷ್ಟ ಪಟ್ಟವರು ಜೊತೆಗೆ ನೀವು ಅಂದುಕೊಂಡ ದಿನದ ಒಳಗೆಯೇ ಯಾವುದೇ ರೀತಿಯ ಅಡೆತಡೆಗಳು ಇಲ್ಲದೆ ನಿರ್ವಿಘ್ನವಾಗಿ ವಿವಾಹ ನೆರವೇರುತ್ತದೆ. 

Leave A Reply

Your email address will not be published.