ಭಂಗು/ಕಪ್ಪು ಕಲೆ ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆಯಿರಿ!
ಭಂಗು ಇದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಭಂಗು ಬರುವುದಕ್ಕೆ ಪ್ರಧಾನ ಕಾರಣ ಎಂದರೆ ಪಿತ್ತ ವಿಕಾರ. ಪಿತ್ತ ವಿಕಾರಕ್ಕೆ ಮೂಲ ಕಾರಣ ಮಲಬದ್ಧತೆ, ಆಜೀರ್ಣ, ಹೈಪರ್ ಆಸಿಡಿಟಿ ಮತ್ತು ಹೈಪೋ ಆಸಿಡಿಟಿ ಸಮಸ್ಸೆಯಿಂದ ಬರುತ್ತದೆ. ಇದಕ್ಕೆ ಮೊದಲು ಹೊಟ್ಟೆ ಶುದ್ಧಿ ಮಾಡಿ ಪಿತ್ತವನ್ನು ಸಮತೋಲನದಲ್ಲಿ ಇಡುವ ಈ ಹಸುವಿನ ತುಪ್ಪ ವನ್ನು ಪ್ರತಿದಿನ ಬೆಳಿಗ್ಗೆ ಒಂದು ಚಮಚ ಸೇವನೆ ಮಾಡಬೇಕು. ಇನ್ನು ಈ ಒಂದು ಲೇಪನವನ್ನು ಒಂದು ತಿಂಗಳು ಮಾಡಿದರೆ ಸಾಕು ಭಂಗು ಹೋಗುತ್ತದೆ.
ಕಕ್ಕೆ ಮರದ ಹೂವನ್ನು ನೆರಳಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಬೇಕು. ಈ ಪುಡಿಯನ್ನು ಕೊಬ್ಬರಿ ಎಣ್ಣೆಯ ಜೊತೆಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಾಸಜ್ ಮಾಡಬೇಕು. ಬೆಳಗ್ಗೆ ಎದ್ದು ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆದರೆ ಒಂದು ತಿಂಗಳಲ್ಲಿ ಎಷ್ಟೇ ಭಂಗು ಇದ್ದರು ಸಹ ಗುಣ ಆಗುತ್ತದೆ. ಈ ಪುಡಿ ಅನ್ನು ನೀವು ಹಚ್ಚುವಾಗ ಮಾತ್ರ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಹಚ್ಚಬೇಕು. ಯಾವುದೇ ಕಾರಣಕ್ಕೂ ಪುಡಿಯನ್ನು ಹಚ್ಚುವ ಮುಂಚೆನೇ ಮಿಕ್ಸ್ ಮಾಡಿ ಪ್ರತಿದಿನ ಅದನ್ನೇ ಬಳಸಬಾರದು.