ಕೇವಲ 10 ನಿಮಿಷದಲ್ಲಿ ಅದ್ಬುತ ಕೀಟ ನಾಶಕ ತಯಾರಿ ಎಲ್ಲಾ ಹೂ ಗಿಡಗಳಿವೆ ಎಲ್ಲಾ ಕೀಟಗಳು ಮಾಯ!
ನಿಮ್ಮ ಗಿಡಗಳನ್ನು ಹಾಳು ಮಾಡುವ ಬಾಕ್ಟೆರಿಯ ಗಳನ್ನು ಸಾವಯವ ರೀತಿಯಲ್ಲಿ ಇದು ಓಡಿಸುತ್ತದೆ. ಇದನ್ನು ತಯಾರಿಸುವುದಕ್ಕೆ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ತಯಾರಿಸಬಹುದು. ಇದಕ್ಕೆ ಮೊದಲು 4 ರಿಂದ 5 ಸಾವಯವ ಹಸಿ ಮೆಣಸಿನಕಾಯಿಯನ್ನು ಕಟ್ ಮಾಡಿಕೊಳ್ಳಬೇಕು ಮತ್ತು ಒಂದು ಈರುಳ್ಳಿ ಅನ್ನು ಸಹ ಕಟ್ ಮಾಡಿಕೊಳ್ಳಿ, ಒಂದು ಬೆಳ್ಳುಳ್ಳಿ ಅನ್ನು ಕಟ್ ಮಾಡಿಕೊಳ್ಳಿ ಮತ್ತು ಕರಿಬೇವನ್ನು ಕಟ್ ಮಾಡಿ ಹಾಕಿ. ಇವುಗಳನ್ನು ಸಿಪ್ಪೆ ಸಮೇತ ಕಟ್ ಮಾಡಿಕೊಳ್ಳಿ. ನಂತರ ಕಾಡು ಕಣಗಲೇ ಎಲೆಯನ್ನು ಕಟ್ ಮಾಡಿ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ಮತ್ತು ಸ್ವಲ್ಪ ನೀರು ಹಾಕಿ ಜ್ಯೂಸ್ ಮಾಡಿಕೊಳ್ಳಿ.
ಇನ್ನು ಕಾಡು ಕಣಗಿಲೆ ಅಥವಾ ಕನೆರ್ ಎಂದು ಕರೆಯುವರು ಮಹಾ ಶಿವನಿಗೆ ಪ್ರಿಯವಾದ ಅವುಗಳಲ್ಲಿ ಒಂದು.. ಮಹಾಶಿವರಾತ್ರಿಯಂದು ಶಿವನಿಗೆ ಈ ಹೂವುಗಳನ್ನು ನೀಡಿ ಪ್ರಾರ್ಥನೆ ಸಲ್ಲಿಕೆ ಮಾಡುವುದರಿಂದ ಆಭರಣಗಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಶಿವಲಿಂಗದ ಮೇಲೆ ಕನೇರ್ ಹೂವುಗಳನ್ನು ಅರ್ಪಿಸುವ ಮೂಲಕ, ಉತ್ತಮ ಬಟ್ಟೆಯನ್ನು ಪಡೆಯುವ ಬಯಕೆ ನೆರವೇರುತ್ತದೆ.
ಇನ್ನು ತಯಾರಿಸಿದ ಜ್ಯೂಸ್ ಜೊತೆ ನೀರು ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ ಗಿಡಗಳಿಗೆ ಸ್ಪ್ರೇ ಮಾಡಬೇಕು. ಇದರಿಂದ ಗಿಡಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾಗಿ ಸಾವಯವ ಕೀಟನಾಶಕವನ್ನು ಮನೆಯಲ್ಲಿ ತಯಾರಿಸಿ ಬಳಸಿ ನೋಡಿ.