ಮುಖಲಕ್ಷಣ ನೋಡಿ ವ್ಯಕ್ತಿ ತಿಳಿಯೋದು ಹೇಗೆ
ಮುಖಲಕ್ಷಣ ನೋಡಿ ವ್ಯಕ್ತಿ ತಿಳಿಯೋದು ಹೇಗೆ
ಮುಖ ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಕೈಗನ್ನಡಿ ಎನ್ನುತ್ತಾರೆ ಉಡುಗೆ ನೋಡಿ ಅಂತಸ್ತು ಅಳೆಯುವವರ ನಡುವೆ ಮುಖ ನೋಡಿ ಮಣೆ ಹಾಕುವವರದ್ದೇ ಕಾಲ ಒಬ್ಬರನ್ನು ನೋಡಿ ಅವರ ಬಗ್ಗೆ ತಿಳಿಯಲು ಮುಖ ನೋಡಿದರೆ ಸಾಕು ಯಾವ ರೀತಿಯ ಮುಖ ಲಕ್ಷಣವನ್ನು ಹೊಂದಿರುವವರು ತಮ್ಮನ್ನು ತಾವು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೆ ಹಾಗೆ ಪ್ರಾಮಾಣಿಕತೆ ಮಾತಿನಲ್ಲಿ ಅಳೆದು ತೂಗುವ ಜನರು ಹೆಚ್ಚಾಗಿರುತ್ತಾರೆ ಮುಖಲಕ್ಷಣ ಎಂದರೆ ಒಬ್ಬರ ಮುಖವನ್ನು ನೋಡಿ ಅವರ ಬಗ್ಗೆ ಹೇಳುವುದು
ಇದು ಮೊದಲನೆಯದಾಗಿ ಶುರುವಾಗಿದ್ದು ಚೀನಾ ದೇಶದಲ್ಲಿ ಈಗ ಭಾರತ, ಚೀನಾ, ಗ್ರೀಸ್ ಹೀಗೆ ಹಲವಾರು ಕಡೆ ಪ್ರಾಮುಖ್ಯತೆಯನ್ನು ಪಡೆದಿದೆ ಇದು ಜ್ಯೋತಿಷ್ಯದಲ್ಲಿ ಒಂದು ಮುಖ್ಯ ಭಾಗ ಮೊದಲನೆಯದಾಗಿ ದುಂಡಗೆ ಇರುವ ಮುಖ ಕೆನ್ನೆ,ಗಲ್ಲದ ಭಾಗ ತುಂಬಿಕೊಂಡಿರುತ್ತದೆ ಮುಖ ಹುಬ್ಬಿದ ಹಾಗೆ ಇರುವ ಇವರನ್ನು ನೋಡಿದರೆ ಕ್ಯೂಟ್ ಆಗಿ ಕಾಣುತ್ತಾರೆ ಬೇರೆಯವರ ಭಾವನೆಗಳಿಗೆ ಅವರ ಕಷ್ಟಗಳಿಗೆ ಹೆಚ್ಚಾಗಿ ಸ್ಪಂದಿಸುತ್ತಾರೆ ಇವರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ ಮನೆಯವರ ಬಗ್ಗೆ ಹೆಚ್ಚಾಗಿ ಕಾಳಜಿಯನ್ನು ವಹಿಸುತ್ತಾರೆ
ಪ್ರೀತಿ ಪ್ರೇಮವನ್ನು ಹೆಚ್ಚಾಗಿ ನಂಬುತ್ತಾರೆ ಒಂದು ಬಾರಿ ಪ್ರೀತಿಸಿದರೆ ಅದನ್ನು ಕೊನೆಯವರೆಗೂ ಕಾಪಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ಇವರಿಗೆ ಇದೆ ಎರಡನೆಯದಾಗಿ ಕೋಲು ಮುಖ ಇವರು ಹೆಚ್ಚಾಗಿ ನೋಡುವುದಕ್ಕೆ ಎತ್ತರವಾಗಿರುತ್ತಾರೆ ಅಥ್ಲೆಟಿಕ್ ಮೈಕಟ್ಟನ್ನು ಹೊಂದಿರಬಹುದು ಕೆನ್ನೆಗಳು ಒಳಗೆ ಹೋದ ರೀತಿ ಕಾಣುತ್ತದೆ ಕೆಲವರಿಗೆ ಹಣೆ ಮತ್ತು ಗಲ್ಲದ ಉದ್ದ ಸ್ವಲ್ಪ ಹೆಚ್ಚಾಗಿ ಇರುತ್ತದೆ ಬೇರೆಯವರ ಮಾತನ್ನು ಕೇಳಿ ಕೆಲಸ ಮಾಡುವುದಿಲ್ಲ ತಮ್ಮ ಮನಸ್ಸಿಗೆ ಬಂದ ಕೆಲಸಗಳನ್ನು ಮಾಡುತ್ತಾರೆ ಇವರಿಗೆ ತಾಳ್ಮೆ ಹೆಚ್ಚಾಗಿರುತ್ತದೆ ಬಹಳ ಕಷ್ಟಪಟ್ಟು ದುಡಿಯುವವರಾಗಿರುತ್ತಾರೆ
ಸ್ವಾಭಿಮಾನ, ಕೆಲಸವನ್ನು ಬೇಗ ಮಾಡಬೇಕು ಎಂಬ ಗುಣಗಳು ಇರುತ್ತದೆ ಇನ್ನು ಮೂರನೆಯದಾಗಿ ತ್ರಿಕೋನಾಕಾರದ ಮುಖ ಈ ರೀತಿಯ ಮುಖದವರು ತುಂಬಾ ದೊಡ್ಡವರ ರೀತಿ ಯೋಚಿಸುತ್ತಾರೆ ಲೋಕಜ್ಞಾನ ಇವರ ವಿವೇಕದಿಂದ ಜನರ ಮನಸ್ಸನ್ನು ಗೆಲ್ಲುತ್ತಾರೆ ಕ್ರಿಯಾತ್ಮಕ ಗುಣ ಮತ್ತು ಏನಾದರೂ ಸಾಧನೆ ಮಾಡಬೇಕೆಂಬ ಗುಣ ಇವರಲ್ಲಿ ಹೆಚ್ಚಾಗಿ ಇರುತ್ತದೆ
ಇವರ ಕೆನ್ನೆಗಳು ಸ್ವಲ್ಪ ಅಗಲವಾಗಿ ಇದ್ದು ಕೆನ್ನೆಯಿಂದ ಹಣೆಯ ಕಡೆ ಹೋಗುತ್ತಾ ಮುಖದ ಅಗಲ ಕಡಿಮೆಯಾಗುತ್ತಾ ಹೋಗುತ್ತದೆ ಸಾಮಾನ್ಯವಾಗಿ ಮುಖ ತೆಳ್ಳಗೆ, ಚಪ್ಪಟೆಯ ಆಕಾರದಲ್ಲಿ ಇರುವಂತೆ ಕಾಣಿಸುತ್ತಾರೆ ಇವರಿಗೆ ಕಲೆ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ ಅದೇ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ