ಸಕ್ಕರೆ ಕಾಯಿಲೆ ನಿಯಂತ್ರಣ ತಪ್ಪಿದಿಯ ಹಾಗಾದ್ರೆ ಮಿಸ್ ಮಾಡದೇ ಈ ಜ್ಯೂಸ್ ಕುಡಿಯಿರಿ!

0 135

ಬೇಸಿಗೆಯಲ್ಲಿ ಬಿಸಿಲ ಬೇಗೆಯನ್ನು ತಣಿಸಲು ನಮ್ಮ ದೇಹ ಬೆವರನ್ನು ಅತಿಯಾಗಿ ಉತ್ಪಾದಿಸಬೇಕಾಗುತ್ತದೆ ಹಾಗೂ ದೇಹದ ತಾಪ ಮಾನವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ನೆರವಾಗುವಂತಹ ಆಹಾರಗಳನ್ನು ಮತ್ತು ಮುಖ್ಯವಾಗಿ ನೀರನ್ನು ನಾವು ಇತರ ಸಮಯಕ್ಕಿಂತ ಹೆಚ್ಚಾಗಿ ಸೇವಿಸಬೇಕಾಗುತ್ತದೆ.

ಈ ಪಟ್ಟಿಯಲ್ಲಿ ಲಿಂಬೆಗೆ ಅಗ್ರಸ್ಥಾನವಿದೆ. ಏಕೆಂದರೆ ಇದರಲ್ಲಿರುವ ವಿಟಮಿನ್ ಸಿ, ಎಲೆಕ್ಟ್ರೋಲೈಟುಗಳು ಹಾಗೂ ಇತರ ಪೋಷ ಕಾಂಶಗಳು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಣೆಯನ್ನು ನೀಡುತ್ತವೆ ಹಾಗೂ ಹೃದಯ ರಕ್ತನಾಳಗಳ ಆರೋಗ್ಯಕ್ಕೆ ಪೂರಕ ವಾಗುವುದು, ಕಬ್ಬಿಣದ ಅಂಶವನ್ನು ನೀಡಿ ರಕ್ತಹೀನತೆ ಎದುರಾಗದಂತೆ ಕಾಪಾಡುವುದು ಮೊದಲಾದ ಪ್ರಯೋಜನಗಳನ್ನು ನೀಡುತ್ತವೆ. ಆದ್ದರಿಂದಲೇ ಹಿರಿಯರು ಲಿಂಬೆಯಲ್ಲಿ ಬೀಜವಿಲ್ಲದಿದ್ದರೆ ಇದರಂತಹ ಸಂಜೀವಿನಿ ಇನ್ನೊಂದಿಲ್ಲ ಎಂದು ಕೊಂಡಾ ಡಿರುವುದು.

ಬೇಸಿಗೆಯಲ್ಲಿ ನಿಂಬೆ ಪಾನೀಯ

ಬೇಸಿಗೆಯಲ್ಲಿ ತಾಪಮಾನ ಏರುತ್ತಿದ್ದಂತೆ ಬೆವರುವುದೂ ಹೆಚ್ಚುತ್ತದೆ. ಪರಿಣಾಮವಾಗಿ ತ್ವಚೆಯಲ್ಲಿ ತುರಿಕೆ, ಸುಸ್ತು, ಬಾಯಾರಿಕೆ, ತಲೆಸುತ್ತುವಿಕೆ ಮೊದಲಾದ ತೊಂದರೆಗಳು ಎದುರಾಗುತ್ತವೆ. ಬಿಸಿಲಿನಲ್ಲಿ ಹೆಚ್ಚು ಹೊತ್ತು ಇದ್ದರಂತೂ ಕಣ್ಣು ಕತ್ತಲೆ ಬಂದು ಕುಸಿಯಲೂಬಹುದು.

ಈ ತೊಂದರೆಗೆ ಒಳಗಾಗದಂತೆ ನಾವು ಸಾಮಾನ್ಯವಾಗಿ ಕೈಗೊಳ್ಳುವ ಕ್ರಮಗಳೆಂದರೆ ಐಸ್ ಕ್ರೀಮ್ ತಿನ್ನುವುದು, ಅತಿಯಾಗಿ ಶೀತಲೀಕರಿಸಿದ ಬುರುಗು ಪಾನೀಯಗಳನ್ನು ಕುಡಿಯುವುದು ಇತ್ಯಾದಿ. ಆದರೆ ವಾಸ್ತವದಲ್ಲಿ, ಇವು ಆ ಕ್ಷಣಕ್ಕೆ ತಂಪಾಗಿಸುವ ಭಾವನೆಯನ್ನು ನೀಡುತ್ತವೆಯೇ ಹೊರತು ಇವುಗಳ ಸೇವನೆಯಿಂದ ದೇಹಕ್ಕೆ ಹಲವು ಬಗೆಯ ಅಪಾಯಗಳಿವೆ. ಐಸ್ ಕ್ರೀಮ್ ಅತಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯನ್ನು ಏಕಕಾಲಕ್ಕೆ ನೀಡುತ್ತದೆ.

ಬುರುಗು ಪಾನೀಯವಂತೂ ನಾವು ಬೇಡವೆಂದು ನಿಃಶ್ವಾಸದ ಮೂಲಕ ಹೊರ ಬಿಡುವ ಇಂಗಾಲದ ಡೈ ಆಕ್ಸೈಡ್‌ಅನ್ನು ಬಲವಂತವಾಗಿ ಕರಗಿಸಿರುವ ದ್ರವವಾಗಿದೆ ಹಾಗೂ ಇದರಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಧಿಡೀರನೇ ಏರಿಸುತ್ತದೆ.

ಇದು ದಾರಿಯಲ್ಲಿ ಹೋಗುತ್ತಿದ್ದ ಅನಾರೋಗ್ಯದ ಮಾರಿಯನ್ನು ದೇಹ ಎಂಬ ಮನೆಯೊಳಗೆ ಕರೆದಂತೆ. ಹಾಗಾಗಿ, ಬೇಸಿಗೆಯ ಧಗೆಯಿಂದ ದೇಹವನ್ನು ತಣಿಸಲು ನೈಸರ್ಗಿಕ ಪಾನೀಯಗಳೇ ಅತ್ಯುತ್ತಮವಾಗಿವೆ. ಲಿಂಬೆರಸ, ಎಳನೀರು, ಕಬ್ಬಿನಹಾಲು, ಮಜ್ಜಿಗೆ ಮೊದಲಾದವು ಈ ನಿಟ್ಟಿನಲ್ಲಿ ಅತಿ ಸೂಕ್ತವಾಗಿವೆ. ಇಂದಿನ ಲೇಖನದಲ್ಲಿ ಲಿಂಬೆರಸದ ಸೇವನೆಯ ಪ್ರಯೋಜನಗಳನ್ನು ನೋಡೋಣ.

ಪೋಷಕಾಂಶಗಳು

ಲಿಂಬೆಯಲ್ಲಿ ಪ್ರಮುಖವಾಗಿ ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಹಾಗೂ ಕರಗುವ ನಾರಿನಂಶವಿದೆ. ಇವು ಹಲವಾರು ಬಗೆಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಒಂದು ಲಿಂಬೆಯಲ್ಲಿ31ಮಿಲಿ ಗ್ರಾಂ ವಿಟಮಿನ್ ಸಿ ಇರುತ್ತದೆ.

ಇದು ದಿನದ ಅವಶ್ಯಕತೆಯ 51ಶೇಖಡಾದಷ್ಟಿದೆ. ಅಂದರೆ ದಿನಕ್ಕೆ ಎರಡು ಲಿಂಬೆಗಳನ್ನು ಸೇವಿಸಿದರೆ ಸಾಕು. ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿದರೆ ಎಲೆಕ್ಟ್ರೋಲೈಟುಗಳು ಬಿಸಿಲಿನಿಂದ ಕಳೆದುಕೊಂಡಿದ್ದ ತ್ರಾಣವನ್ನು ಮರುದುಂಬಿಸುತ್ತವೆ. ಅಲ್ಲದೇ ಲಿಂಬೆಯ ನಿಯಮಿತ ಸೇವನೆಯಿಂದ ಹೃದ್ರೋಗಗಳು ಎದುರಾಗುವ ಸಾಧ್ಯತೆಗಳೂ ತಗ್ಗುತ್ತವೆ.

ಜೀರ್ಣಕ್ರಿಯೆ ಸುಲಭಗೊಳ್ಳುವುದು

ಲಿಂಬೆಯ ಇನ್ನೊಂದು ಪ್ರಯೋಜನವೆಂದರೆ ಜೀರ್ಣಕ್ರಿಯೆ ಉತ್ತಮಗೊಳ್ಳುವುದು. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಕರಗುವ ನಾರು ಮತ್ತು ಸರಳ ಸಕ್ಕರೆಗಳು ಜೀರ್ಣಾಂಗಗಳ ಆರೋಗ್ಯವನ್ನು ವೃದ್ದಿಸುತ್ತವೆ ಹಾಗೂ ಸಕ್ಕರೆ ಮತ್ತು ಪಿಷ್ಟಗಳ ಜೀರ್ಣಗೊಳ್ಳು ವಿಕೆಯನ್ನು ನಿಧಾನಗೊಳಿಸುತ್ತವೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರನೆ ಏರದೇ ಅತಿ ನಿಧಾನವಾಗಿ ಆಗಮಿಸುವ ಮೂಲಕ ಹೃದಯಸ್ನೇಹಿಯೂ ಆಗಿದೆ.

ಗಂಟಲ ಬೇನೆಗೆ ಮದ್ದು

ಒಂದು ವೇಳೆ ನಿಮಗೆ ಗಂಟಲ ಬೇನೆ ಇದ್ದು ಪದೇ ಪದೇ ಗಂಟಲನ್ನು ಕೆರೆಯುವಂತೆ ಕೆಮ್ಮುತ್ತಿದ್ದರೆ ಇದಕ್ಕೆ ಲಿಂಬೆಯೇ ಅತಿ ಸುಲಭ ಮದ್ದು ಆಗಿದೆ.

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಗಂಟಲ ಕೆರೆತವನ್ನೂ ಕಡಿಮೆ ಮಾಡುತ್ತವೆ. ಇದಕ್ಕಾಗಿ ಬೆಳಗ್ಗೆದ್ದ ಬಳಿಕ ಒಂದು ಲೋಟ ಉಗುರು ಬೆಚ್ಚನೆಯ ನೀರಿನಲ್ಲಿ 2 – 3 ದೊಡ್ಡ ಚಮಚದಷ್ಟು ಲಿಂಬೆರಸವನ್ನು ಬೆರೆಸಿ ಕುಡಿಯಬೇಕು.​

ತೂಕ ಇಳಿಕೆಗೆ ನೆರವು

ಲಿಂಬೆ ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳ ಅಚ್ಚುಮೆಚ್ಚಿನ ಆಹಾರವಾಗಿದೆ. ಏಕೆಂದರೆ, ಲಿಂಬೆಯಲ್ಲಿರುವ ಪೆಕ್ಟಿನ್ ಎಂಬ ಕರಗುವ ನಾರು ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

ಅಲ್ಲದೇ ಲಿಂಬೆರಸ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಮೂಲಕ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಫಲ ದೊರಕುತ್ತದೆ.

ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು

ಬೇಸಿಗೆಯಲ್ಲಿ ತ್ವಚೆ ಬೆವರಿದಷ್ಟೂ ಆರ್ದ್ರತೆಯನ್ನು ಕಳೆದುಕೊಳ್ಳುತ್ತದೆ. ನಮ್ಮ ತ್ವಚೆಗೆ ಸದಾ ಆರ್ದ್ರತೆ ಲಭಿಸುತ್ತಲೇ ಇರಬೇಕು. ಇದೇ ಕಾರಣಕ್ಕೆ ಚಳಿಗಾಲದಲ್ಲಿ ನೆಲದಲ್ಲಿರುವ ನೀರು ಆವಿಯಾಗದೇ ಗಾಳಿ ಒಣಗಿದ್ದು ಚರ್ಮಕ್ಕೆ ಅಗತ್ಯವಿರುವ ಆರ್ದ್ರತೆ ಲಭಿಸದೇ ಒಣಗುತ್ತದೆ.

ಬೇಸಿಗೆಯಲ್ಲಿ ಗಾಳಿಯಲ್ಲಿ ಆರ್ದ್ರತೆ ಇದ್ದರೂ, ತ್ವಚೆಯ ಒಳಗಿರುವ ಆರ್ದ್ರತೆ ಬೆವರಿನಿಂದ ನಷ್ಟವಾಗಿರುವ ಕಾರಣ ದೇಹದ ಒಳಗಿನಿಂದ ನೀರಿನ ಸರಬರಾಜು ಆಗಬೇಕು. ಇದನ್ನು ನಿರ್ವಹಿಸಲು ಎಲೆಕ್ಟ್ರೋಲೈಟುಗಳ ಅಗತ್ಯವಿದೆ. ಲಿಂಬೆರಸವನ್ನು ನೀರಿನಲ್ಲಿ ಬೆರೆಸಿ ಅಥವಾ ನಿಮ್ಮ ಆಹಾರದಲ್ಲಿ ಬೆರೆಸಿ ಸೇವಿಸುವ ಮೂಲಕ ಇದನ್ನು ಸಾಧಿಸಬಹುದು. ಬೇಸಿಗೆಯಲ್ಲಿ ನಿತ್ಯವೂ ಲಿಂಬೆಯನ್ನು ಸೇವಿಸುವ ಮೂಲಕ ತ್ವಚೆಯಲ್ಲಿ ಕಲೆ, ಮೊಡವೆಗಳೂ ಇಲ್ಲದ ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು.

Leave A Reply

Your email address will not be published.