ಬಿಳಿ ಕೂದಲು ಕಪ್ಪಾಗಲು ಈ ಆಹಾರ ಸೇವಿಸಿ!

0 126

ನಮ್ಮ ಸೌಂದರ್ಯ ಬೇರೆಯವರಿಗೆ ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ನಮ್ಮ ತ್ವಚೆ ಮತ್ತು ನಮ್ಮ ತಲೆ ಕೂದಲು ಪ್ರಮುಖ ಕಾರಣವಾಗುತ್ತದೆ. ನಮ್ಮ ಸೌಂದರ್ಯಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಮಾನ್ಯತೆ ಕೊಡಬೇಕು. ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡರೆ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ ನಿಜ.

ನಾವು ಆರೋಗ್ಯಕರ ಎಂದು ತಿಳಿದುಕೊಂಡು ತಿನ್ನುವ ಬಹುತೇಕ ಆಹಾರ ಪದಾರ್ಥಗಳು ನಮ್ಮ ತಲೆ ಕೂದಲಿಗೆ ಸಕಾರಾತ್ಮಕವಾಗಿ ಕೆಲಸ ಮಾಡುತ್ತವೆ. ಇವುಗಳಿಂದ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತೇಜಿಸುತ್ತದೆ. ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುವುದು, ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಇಂತಹ ಎಲ್ಲವೂ ಪರಿಹಾರವಾಗುತ್ತದೆ. ಯಾವ ಆಹಾರ ಪದಾರ್ಥಗಳಿಂದ ನಮ್ಮ ಸಹಿತ ನಮ್ಮ ಮಕ್ಕಳ ತಲೆ ಕೂದಲಿನ ಆರೋಗ್ಯವನ್ನು ಸಹ ಕಾಪಾಡಬಹುದು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ….

ಹಸಿರು ಎಲೆ ತರಕಾರಿಗಳು

ಹಸಿರು ಎಲೆ ತರಕಾರಿಗಳು ತಮ್ಮಲ್ಲಿ ಕಬ್ಬಿಣದ ಅಂಶ, ಫೋಲೇಟ್, ಕ್ಯಾಲ್ಸಿಯಂ, ವಿಟಮಿನ್ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುತ್ತವೆ.

ಇವುಗಳ ಗುಂಪಿಗೆ ಪಾಲಕ್ ಸೊಪ್ಪು, ಹೂಕೋಸು, ಎಲೆಕೋಸು, ಬ್ರೊಕೋಲಿ ಇತ್ಯಾದಿಗಳು ಸೇರುತ್ತವೆ. ಇವುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಚಿಕ್ಕ ವಯಸ್ಸಿನಿಂದ ತಲೆಕೂದಲ ಸಮಸ್ಯೆ ಯಿಂದ ಪಾರಾಗಬಹುದು.​

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕ್ಲೆಟ್ ತನ್ನಲ್ಲಿ ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕು ವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ. ವಿಷಕಾರಿ ಅಂಶಗಳು ಹೊರಗೆ ಹೋದಷ್ಟು ನಮ್ಮ ತಲೆ ಕೂದಲ ಆರೋಗ್ಯ ಹೆಚ್ಚಾಗುತ್ತದೆ.

ವಯಸ್ಸಾಗುವಿಕೆ ಪ್ರಕ್ರಿಯೆ ದೂರ ಆಗುವುದರಿಂದ ತಲೆ ಕೂದಲಿನ ಬಣ್ಣ ಕಪ್ಪು ಬಣ್ಣದಲ್ಲಿ ಉಳಿಯುತ್ತದೆ. ಡಾರ್ಕ್ ಚಾಕಲೇಟ್ ತಾಮ್ರವನ್ನು ಹೆಚ್ಚಾಗಿ ಒಳಗೊಂ ಡಿದ್ದು, ಮೆಲಾನಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚಿಕ್ಕ ವಯಸ್ಸಿಗೆ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಸಾಧ್ಯತೆಯನ್ನು ತಪ್ಪಿಸುತ್ತದೆ.​

ಡೈರಿ ಉತ್ಪನ್ನಗಳು

ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳೆಲ್ಲವೂ ಡೈರಿ ಉತ್ಪನ್ನಗಳು. ಇವುಗಳಲ್ಲಿ ವಿಟಮಿನ್ ಬಿ12, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಇನ್ನಿತರ ಪೌಷ್ಟಿಕಾಂಶ ಗಳು ಅಪಾರವಾಗಿದ್ದು, ತಲೆ ಕೂದಲಿನ ಸೊಂಪಾದ ಬೆಳವಣಿಗೆಗೆ ಅಗತ್ಯವಾದ ಮೆಲಾನಿನ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತವೆ.

ಮೊಸರು ಪ್ರೊಬಯೋಟಿಕ್ ಗುಣಲಕ್ಷಣಗಳನ್ನು ಒಳ ಗೊಂಡಿರುವುದರಿಂದ ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ.

ಕೋಳಿ ಮೊಟ್ಟೆ

ಪ್ರೋಟೀನ್ ಪ್ರಮಾಣವನ್ನು ಅಪಾರವಾಗಿ ಹೊಂದಿರುವ ಕೋಳಿ ಮೊಟ್ಟೆ ನಮ್ಮ ತಲೆ ಕೂದಲಿನ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ.

ಇದರಲ್ಲಿ ವಿಟಮಿನ್ ಬಿ12 ಹೇರಳವಾಗಿದ್ದು, ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗ ಎರಡನ್ನು ಸೇವಿಸುವ ಅಭ್ಯಾಸ ಇದ್ದರೆ ಒಳ್ಳೆಯದು.​

ಸೋಯಾಬೀನ್

ಸೋಯಾ ಅವರೆ ತನ್ನಲ್ಲಿ ಸಸ್ಯಾಧಾರಿತ ಪ್ರೋಟಿನ್ ಅಂಶವನ್ನು ಹೆಚ್ಚಾಗಿ ಒಳಗೊಂಡಿದೆ. ಇದರಲ್ಲಿ ಪೌಷ್ಟಿಕಾಂಶ ಪ್ರಮಾಣ ಕೂಡ ಇರಲಿದ್ದು, ತಲೆ ಕೂದಲ ಆರೋಗ್ಯಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್ ಅಂಶಗಳು ಇದರಲ್ಲಿ ತಲೆಕೂದಲು ಬೆಳ್ಳಗಾಗುವ ವಿಚಾರದಲ್ಲಿ ಕೆಲಸ ಮಾಡುತ್ತವೆ. ಮುಖ್ಯವಾಗಿ ನೆತ್ತಿಯ ಭಾಗದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ತಲೆ ಕೂದಲಿಗೆ ರಕ್ಷಣೆ ಕೊಡುತ್ತವೆ.

ಬೇಳೆಗಳು

ನಾವು ಪ್ರತಿ ದಿನ ನಮ್ಮ ಆಹಾರ ಪದ್ಧತಿಯಲ್ಲಿ ಬಳಸುವ ಅನೇಕ ಬಗೆಯ ಬೇಳೆಗಳು ತಮ್ಮಲ್ಲಿ ವಿಟಮಿನ್ ಬಿ9 ಪ್ರಮಾಣವನ್ನು ಒಳಗೊಂಡಿರುತ್ತವೆ. ಇವುಗಳು ನಮ್ಮ ತಲೆಕೂದಲಿನ ಆರೋಗ್ಯ ವನ್ನು ಕಾಪಾಡುವುದು ಮಾತ್ರವಲ್ಲದೆ, ಚಿಕ್ಕವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ.

ಅಣಬೆ

ಅಣಬೆ ತನ್ನಲ್ಲಿ ತಾಮ್ರದ ಅಂಶವನ್ನು ಹೆಚ್ಚಾಗಿ ಒಳಗೊಂ ಡಿದ್ದು, ಮೆಲಾನಿನ್ ಉತ್ಪತ್ತಿಯಲ್ಲಿ ನೆರವಾಗುತ್ತದೆ. ಇದು ತಲೆ ಕೂದಲು ಕಪ್ಪು ಬಣ್ಣದಲ್ಲಿ ಇರುವಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ ತಲೆ ಕೂದಲಿಗೆ ಅಗತ್ಯವಾದ ಪೌಷ್ಟಿಕ ಸತ್ವಗಳನ್ನು ಕೊಡುವಲ್ಲಿ ನೆರವಾಗುತ್ತದೆ. ತಲೆ ಕೂದಲಿನ ಉತ್ತಮ ಆರೋಗ್ಯ ವನ್ನು ಹಣಬೆಯಿಂದ ನೀವು ನಿರೀಕ್ಷೆ ಮಾಡಬಹುದು.

Leave A Reply

Your email address will not be published.