ದಾಳಿಂಬೆ ಹಣ್ಣು ನಿಮಗೆ ಇಷ್ಟನಾ..? ತಿನ್ನುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ
ದಾಳಿಂಬೆ ಎಲ್ಲರಿಗೂ ಇಷ್ಟವಾಗುವ ಹಣ್ಣು, ಹಣ್ಣು ಬಿಡಿಸುವುದು ಕೊಂಚ ತಡವಾದ್ರು. ಸ್ವಲ್ಪ ರಗಳೆಯಾದರೂ ಆರೋಗ್ಯವನ್ನ ಕಾಪಾಡಿಕೊಳ್ಳಲು ಇದು ಉತ್ತಮ ಹಣ್ಣು. ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ವೈದ್ಯರು ಈ ಹಣ್ಣನ್ನ ಹೆಚ್ಚು ತಿನ್ನಲು ಹೇಳುತ್ತಾರೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ. ದಾಳಿಂಬೆ ಹಣ್ಣಿನ ಜೊತೆಗೆ ಅದರ ಸಿಪ್ಪೆಯಿಂದಲೂ ಹೆಚ್ಚು ಪ್ರಯೋಜನಗಳಿವೆ ಎಂದು ಸಾಮಾನ್ಯವಾಗಿ ದಾಳಿಂಬೆ ಹಣ್ಣನ್ನು ತಿಂದು ಅದರ ಸಿಪ್ಪೆ ಕಸದ ತೊಟ್ಟಿ ಹಾಕ್ತಾರೆ. ಆದ್ರೆ ಎಸೆಯುವ ಮುನ್ನ ಅದರಲ್ಲಿರುವ ಪ್ರಯೋಜನಕಾರಿ ಅಂಶಗಳನ್ನ ತಿಳಿದುಕೊಳ್ಳಬೇಕು.ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ,ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಧ್ಯಯನದ ಪ್ರಕಾರ ದಾಳಿಂಬೆ ಸಿಪ್ಪೆಯಲ್ಲಿರುವ ಮೆಥನಾಲ್ ಸಾರವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.
ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಬಾಯಿಯಲ್ಲಿ ಹರಡುವ ರೋಗಾಣು ವಿರುದ್ಧ ಹೋರಾಟ ದಾಳಿಂಬೆ ಸಿಪ್ಪೆಗಳಲ್ಲಿ ಪಾಲಿಫಿನಾಲ್ ಫ್ಲೇವನಾಯ್ಡುಗಳಿವೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿ ಹರಡುವ ರೋಗಗಳನ್ನು ತೆಗೆದುಹಾಕುವುದು.
ಸಹಾಯ ಮಾಡುತ್ತದೆ. ಹಾಗೆ ಕೆಟ್ಟ ಉಸಿರಾಟದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ದಾಳಿಂಬೆ ಸಿಪ್ಪೆ ನನ್ನ ಬಾಯ್ ಫ್ರೆಂಡ್ ನಂತೆ ಬಳಸಬಹುದು. ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಒಂದು ಚಮಚ ದಾಳಿಂಬೆ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಕುಡಿಯಿರಿ. ಹಾಗೆ ಮುಟ್ಟಿನ ನೋವು ನಿವಾರಣೆಗೆ ಕೂಡ ಇದು ಸಹಾಯಕವಾಗಿದೆ. ಇತ್ತೀಚಿಗೆ ಬಹಳಷ್ಟು ಹೆಣ್ಣುಮಕ್ಕಳು ಅನಿಯಮಿತ ಮುಟ್ಟಿನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. 2-3 ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದರೆ ಮುಟ್ಟಾದಾಗ ವಿಪರೀತ ಹೊಟ್ಟೆ ನೋವಾಗುವುದು ದಾಳಿಂಬೆ ಸಿಪ್ಪೆ ಮುಂದಾಗಿದೆ. ಒಂದು ಲೋಟದ ನೀರಿಗೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಹಾಕಿ ಬೆರೆಸಿ ಕುಡಿಯಬೇಕು.
ಇದರಿಂದ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೆಚ್ಚು ರಕ್ತಸ್ರಾವ ಆಗುತ್ತಿದ್ದರು. ನಿಯಂತ್ರಣಕ್ಕೆ ತರಬಹುದು. ಇನ್ನು ಮುಖದ ಸುಕ್ಕು ಮುಖದಲ್ಲಿ ಸುಕ್ಕು ನೆರಿಗೆಯಿಂದ ವಯಸ್ಸಾದಂತೆ ಕಾಣುತ್ತಾರೆ. ಹಾಗಾಗಿ ಮುಖದ ಮೇಲಿರುವ ಸುಕ್ಕನ್ನು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ದಾಳಿಂಬೆ ಸಿಪ್ಪೆಯ ಪುಡಿಯನ್ನು ರೋಸ್‌ವಾಟರ್‌ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ರೆಡಿಯಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.