ನಿಮ್ಮ ಅಂಗೈಯಲ್ಲಿರುವ ಈ ಸೂರ್ಯ ರೇಖೆ ನಿಮ್ಮ ಭವಿಷ್ಯದ ಅದೃಷ್ಟವನ್ನು ಸೂಚಿಸುತ್ತದೆ..
ಅಂಗೈಯಲ್ಲಿರುವ ವಿವಿಧ ರೇಖೆಗಳು ಗುರುತುಗಳು ವ್ಯಕ್ತಿಯ ಶಿಕ್ಷಣ ಭವಿಷ್ಯ ಸಂಪತ್ತು ಮತ್ತು ಸಂತಾನದ ಗುರುತನ್ನು ಸೂಚಿಸುತ್ತವೆ ಈ ಅಂಗೈ ರೇಖೆಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಅಂಗೈ ರೇಖಾ ಶಾಸ್ತ್ರ ಎನ್ನುತ್ತಾರೆ ಇದು ಜ್ಯೋತಿಷ್ಯ ಶಾಸ್ತ್ರದ ಒಂದು ಪಾಠವು ಹೌದು ಅಂಗೈಯಲ್ಲಿರುವ ಅನೇಕ ರೇಖೆಗಳಲ್ಲಿ ಸೂರ್ಯ ರೇಖೆಯನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಗೈ ರೇಖೆಯಲ್ಲಿ ಸೂರ್ಯ ರೇಖೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ ಈ ರೇಖೆಗಳು ಬಲವಾಗಿದ್ದರೆ ಉದ್ಯೋಗ ಅಥವಾ ವ್ಯವಹಾರದಲ್ಲಿ ಉನ್ನತ ಅಭಿವೃದ್ಧಿಯನ್ನು ಕಾಣುತ್ತಾರೆ ಎಂದು ಅಂಗೈ ಶಾಸ್ತ್ರ ಹೇಳುತ್ತದೆ ಹಾಗಾದರೆ ವಿವಿಧ ರೀತಿಯ ಸೂರ್ಯ ರೇಖೆಗಳು ಏನನ್ನು ತಿಳಿಸುತ್ತದೆ ಸೂರ್ಯ ರೇಖೆಯ ಅರ್ಥ ಏನು ಎಂಬುದನ್ನು ತಿಳಿಯೋಣ:
ಸೂರ್ಯ ರೇಖೆಯು ಉಂಗುರದ ಬೆರಳಿನ ಕೆಳಗೆ ಇದ್ದರೆ ಅದನ್ನು ಸೂರ್ಯ ಪರ್ವತ ಎಂದು ಕರೆಯಲಾಗುತ್ತದೆ ಅಂಗೈ ಶಾಸ್ತ್ರದ ಪ್ರಕಾರ ಸೂರ್ಯ ರೇಖೆಯು ಬಹಳ ಸ್ಪಷ್ಟವಾಗಿದ್ದರೆ ಅದರ ಮೇಲೆ ಯಾವುದೇ ಅಡ್ಡ ಅಥವಾ ಉದ್ದ ರೇಖೆಗಳು ಇಲ್ಲದಿದ್ದರೆ ಇಂತಹ ಸೂರ್ಯ ರೇಖೆಯನ್ನು ಹೊಂದಿರುವ ವ್ಯಕ್ತಿಗಳು ಅಧಿಕ ಪ್ರಗತಿಯನ್ನು ಸಾಧಿಸುತ್ತಾರೆ.
ಇನ್ನು ಸೂರ್ಯ ರೇಖೆಯು ಸ್ಪಷ್ಟವಾಗಿ ತಿಳಿಯಾಗಿ ಕಂಡರೆ ಆ ವ್ಯಕ್ತಿಯು ಆಡಳಿತ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ ವ್ಯವಹಾರ ಕ್ಷೇತ್ರದಲ್ಲಿ ಇವರು ದೊಡ್ಡ ಹೆಸರು ಪಡೆಯಬಹುದು ಅಲ್ಲದೆ ಸೂರ್ಯ ಪರ್ವತದ ಮೇಲೆ ತ್ರಿಕೋನ ಒಂದು ಇದ್ದರೆ ವ್ಯಕ್ತಿಯು ಕೆಲಸದಲ್ಲಿ ಉನ್ನತ ಶ್ರೇಣಿ ಪ್ರತಿಷ್ಠೆ ಹಾಗೂ ಆಡಳಿತಾತ್ಮಕ ಪ್ರಯೋಜನವನ್ನು ಪಡೆಯುವುದು ಎಂದು ನಂಬಿಕೆ ಇದೆ.
ಸೂರ್ಯ ರೇಖೆಯು ದಪ್ಪವಾಗಿರುತ್ತದೆಯೋ ಅಥವಾ ಅರ್ಧ ತುಂಡಾಗಿದ್ದರೆ ಅಂತಹ ವ್ಯಕ್ತಿಯು ಆಲೋಚನೆಗಳಲ್ಲಿ ಶೂನ್ಯವಾಗಿರುತ್ತಾನೆ ಎನ್ನಲಾಗಿದೆ ಇದಲ್ಲದೆ ಸೂರ್ಯ ರೇಖೆಯು ಶನಿ ಪರ್ವತದ ಕಡೆಗೆ ವಾಲುವಂತೆ ಇದ್ದರೆ ಅಂತಹ ವ್ಯಕ್ತಿಗಳು ಆಡಳಿತಾತ್ಮಕ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ ವ್ಯಕ್ತಿಯ ಸೂರ್ಯ ರೇಖೆಯ ಮೇಲೆ ಶಿಲುಬೆಯಂತಹ ಚಿಹ್ನೆಗಳು ಇದ್ದರೆ ಇಂತಹ ಜನರು ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡುತ್ತಾರೆ.
ಸೂರ್ಯ ಪರ್ವತ ಮತ್ತು ಬುಧ ಪರ್ವತ ಒಟ್ಟಿಗೆ ಸಂಯೋಜಿಸಿದ್ದರೆ ಉತ್ತಮವಾದ ಯಶಸ್ವಿ ಉದ್ಯೋಗಿ ಅಥವಾ ಉತ್ತಮವಾದ ಆಡಳಿತಗಾರ ಹುದ್ದೆಯನ್ನು ಹೊಂದಿರುತ್ತಾರೆ ಇಂತಹ ವ್ಯಕ್ತಿಗಳು ಹಣವನ್ನು ಹೆಚ್ಚು ಸಂಪಾದಿಸಲು ಬಯಸುತ್ತಾರೆ ಎಂದು ಹೇಳಲಾಗಿದೆ ಇನ್ನು ಅಂಗೈಯಲ್ಲಿ ಎರಡು ನೇರವಾದ ಸೂರ್ಯ ರೇಖೆಗಳ ರಚನೆ ಇದ್ದರೆ ಇಂತಹ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ವೈಭವ ಮತ್ತು ಗೌರವದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ .
ಇಂತಹ ವ್ಯಕ್ತಿಗಳು ಬಹಳಷ್ಟು ಅದೃಷ್ಟವಂತರು ಇನ್ನು ಸೂರ್ಯ ರೇಖೆಯು ಅಂಗೈ ಮಧ್ಯಭಾಗದಿಂದ ಆರಂಭವಾಗಿ ಪರ್ವತವನ್ನು ಸ್ಪರ್ಶಿಸುವಂತೆ ಇದ್ದರೆ ಈ ವ್ಯಕ್ತಿಗಳು ಅನಿರೀಕ್ಷಿತ ಸಂಪತ್ತನ್ನು ಪಡೆಯುತ್ತಾರೆ ಹಾಗೂ ಅದೃಷ್ಟವಂತರೂ ಸಹ ಆಗುತ್ತಾರೆ ಇಂತಹವರು ಜೀವನದಲ್ಲಿ ದೈಹಿಕ ಹಾಗೂ ಭೌತಿಕ ಆನಂದವನ್ನು ಪಡೆಯುತ್ತಾರೆ.