ಶುಭಕಾರ್ಯದಲ್ಲಿ ಬಳಸಲೇಬೇಕಾದ 8 ಪೂಜಾನಿಯ ಎಲೆಗಳು! ಯಾವ ಎಲೆಯಲ್ಲಿ ಯಾವ ದೇವರ ಶಕ್ತಿ ನೋಡಿ!

0 717

ನಾವು ಪ್ರಕೃತಿಯನ್ನ ದೇವರ ರೂಪದಲ್ಲಿ ಪೂಜಿಸುತ್ತೇವೆ. ಹಾಗಾಗಿ ಮಣ್ಣು, ಕಲ್ಲು ಹಾಗೂ ಎಲೆಗಳನ್ನ ಸಹ ಗೌರವದಿಂದ ಕಾಣುತ್ತೇವೆ. ಜ್ಯೋತಿಷ್ಯದ ಪ್ರಕಾರ 7 ಎಲೆಗಳಿದ್ದು ಅದನ್ನ ನಾವು ಪೂಜೆಗೆ ಬಳಸಿದರೆ ಅದೃಷ್ಟ ಹೆಚ್ಚಾಗುತ್ತದೆ. ಆ ಎಲೆಗಳು ಯಾವುವು ಹಾಗೂ ಅದರಿಂದ ಯಾವ ರೀತಿ ಪ್ರಯೋಜನ ಸಿಗುತ್ತದೆ ಎಂಬುದು ಇಲ್ಲಿದೆ.

ನಾವು ವಿಶೇಷ ಪೂಜೆ ಇರಲಿ ಅಥವಾ ಮನೆಯಲ್ಲಿ ಪ್ರತಿನಿತ್ಯ ಮಾಡುವ ಪೂಜೆ ಇರಲಿ ಅದರಲ್ಲಿ ಪ್ರಕೃತಿಯ ಅಂಶವನ್ನ ಬಳಸುತ್ತೇವೆ. ಪ್ರತಿದಿನ ನಾವು ಹೂವನ್ನ ದೇವರಿಗೆ ಹಾಕಿ ಪೂಜಿಸುತ್ತೇವೆ. ಆದರೆ ನಿಮಗೆ ಗೊತ್ತಾ? ಈ 7 ಎಲೆಗಳನ್ನ ಪೂಜೆಯಲ್ಲಿ ಬಳಕೆ ಮಾಡಿದ್ರೆ ನಮ್ಮ ಅದೃಷ್ಟ ಹೆಚ್ಚಾಗುತ್ತದೆ. ಆ ಎಲೆಗಳು ಯಾವುವು ಎಂಬುದು ಇಲ್ಲಿದೆ.

ಮಾವಿನ ಎಲೆ: ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೂ ಮಾವಿನ ಎಲೆಗಳು ಇರಲೇಬೇಕು. ಅದರಿಂದ ತೋರಣ ಮಾಡಿ ಹಾಕದೇ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಈ ರೀತಿ ಮಾವಿನ ಎಲೆ ಬಳಸುವುದರಿಂದ ಒಳ್ಳೆಯ ಶಕ್ತಿಗಳು ಮನೆಯನ್ನ ಕಾಪಾಡುತ್ತವೆ ಎನ್ನುವ ನಂಬಿಕೆ ಇದೆ.

ತುಳಸಿ ಎಲೆ: ಈ ತುಳಸಿ ಎಲೆಗೆ ಬಹಳ ಪವಿತ್ರವಾದ ಸ್ಥಾನವಿದೆ. ಇದನ್ನ ಪೂಜೆ ಮಾಡಲು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ವಿಷ್ಣುವಿಗೆ ಇದು ಬಹಳ ಪ್ರಿಯವಾಗಿರುವುದರಿಂದ ತುಳಸಿ ಗಿಡದಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

ಬಾಳೆ ಗಿಡ: ನಮ್ಮ ಸಂಪ್ರದಾಯದಲ್ಲಿ ಬಾಳೆಗಿಡಕ್ಕೆ ಸಹ ಬಹಳ ಪ್ರಾಮುಖ್ಯತೆ ಇದೆ. ಹಾಗಾಗಿ ನಾವು ಪೂಜೆಯಲ್ಲಿ ಬಾಳೆಗಿಡವನ್ನ ಪೂಜೆ ಮಾಡಿದರೆ ಗುರು ಹಾಗೂ ವಿಷ್ಣುವಿನ ಕೃಪೆ ಸಿಗುತ್ತದೆ ಎನ್ನಲಾಗುತ್ತದೆ. ಆದರೆ ಗುರುವಾರ ಇದನ್ನ ಕಟ್ ಮಾಡಬಾರದು.

ಬಿಲ್ವದ ಎಲೆ: ಶಿವನ ನೆಚ್ಚಿನ ಎಲೆ ಈ ಬಿಲ್ವ ಎನ್ನಲಾಗುತ್ತದೆ. ಹಾಗಾಗಿ ಶಿವನಿಗೆ ಬಿಲ್ವವನ್ನ ಅರ್ಪಣೆ ಮಾಡಲಾಗುತ್ತದೆ. ಇದರಿಂದ ಶಿವನ ಕೃಪೆ ಸಿಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮೆಲ್ಲಾ ಸಂಕಷ್ಟಕ್ಕೆ ಸಹ ಪರಿಹಾರ ಸಿಗುತ್ತದೆ.

ಶಮಿ ಎಲೆ: ಶಮಿ ಎಲೆಯನ್ನ ಬಹಳ ಪವಿತ್ರ ಎನ್ನಲಾಗುತ್ತದೆ. ಅದರಲ್ಲೂ ಶಿವನಿಗೆ ಬಿಲ್ವದ ನಂತರ ಶಿವನ ನೆಚ್ಚಿನ ಎಲೆ ಇದು. ಹಾಗಾಗಿ ಶಿವನಿಗೆ ಇದನ್ನ ಅರ್ಪಿಸಬೇಕು. ಅದರಲ್ಲೂ ಶ್ರಾವಣ ಮಾಸದಲ್ಲಿ ಈ ಎಲೆಯಿಂದ ಶಿವನನ್ನ ಪೂಜೆ ಮಾಡಿದರೆ ಇಷ್ಟಾರ್ಥ ಈಡೇರುತ್ತದೆ.

ವೀಳ್ಯದೆಲೆ: ಈ ಎಲೆ ಇಲ್ಲದೇ ಸಹ ಅನೇಕ ಪೂಜೆಗಳು ಆಗುವುದಿಲ್ಲ. ಮಹಿಳೆಯರಿಗೆ ಕುಂಕುಮ ಕೊಡುವುದರಿಂದ ಹಿಡಿದು ಪೂಜೆಗೆ ಇದು ಅನಿವಾರ್ಯ. ಇದನ್ನ ಬುಧದ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಇದನ್ನ ಬಳಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ.

ಎಕ್ಕದ ಎಲೆ: ಈ ಎಕ್ಕದ ಎಲೆಯ ಬಗ್ಗೆ ಅನೇಕ ಜನರಿಗೆ ಮಾಹಿತಿ ಇಲ್ಲ. ಈ ಎಲೆ ಸಹ ಶಿವನಿಗೆ ಬಹಳ ಇಷ್ಟ. ಇದನ್ನ ಶಿವನಿಗೆ ಅರ್ಪಣೆ ಮಾಡಿದರೆ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನಲಾಗುತ್ತದೆ. ಅಲ್ಲದೆ, ಈ ಎಲೆ ಬಹಳ ಆರೋಗ್ಯಕರ ಕೂಡ.

Leave A Reply

Your email address will not be published.