ಮನೆಯಲ್ಲಿ ಕನ್ನಡಿ​ ಒಡೆದರೆ?

0 123

ವಾಸ್ತು ಪ್ರಕಾರ, ಮನೆಯಲ್ಲಿ ವಸ್ತುಗಳನ್ನು ನಾವು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಒಳ್ಳೆಯದಾಗುತ್ತದೆ. ಮನೆಯ ವಸ್ತುಗಳ ವಿಚಾರಕ್ಕೆ ಬಂದರೆ ಕನ್ನಡಿ ಬಹಳ ಮುಖ್ಯವಾಗುತ್ತದೆ. ಕನ್ನಡಿ ಸರಿಯಾದ ಸ್ಥಳದಲ್ಲಿ ಇದ್ದರೆ ನಾವು ಬೇಗನೆ ಅಭಿವೃದ್ಧಿ ಆಗಬಹುದು.

ಮನೆಯಲ್ಲಿ ಕನ್ನಡಿ ಇದ್ದರೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿ ಒಂದಾದರೂ ಕನ್ನಡಿ ಇರಬೇಕು ಎನ್ನಲಾಗುತ್ತದೆ. ಅಲ್ಲದೇ, ಜ್ಯೋತಿಷ್ಯದ ಪ್ರಕಾರ ಕನ್ನಡಿಯಲ್ಲಿ ಕುಟುಂಬದ ಭವಿಷ್ಯ ಇರುತ್ತದೆ. ಹಾಗಾಗಿ ಕನ್ನಡಿ ವಿಚಾರದಲ್ಲಿ ಕೆಲ ನಿಯಮಗಳನ್ನ ಅನುಸರಿಸಬೇಕು.

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿ ಒಡೆಯಬಾರದು. ಕನ್ನಡಿ ಒಡೆದರೆ ಅಥವಾ ಒಡೆದ ಕನ್ನಡಿ ಮನೆಯಲ್ಲಿ ಇದ್ದರೆ ದೊಡ್ಡ ಸಮಸ್ಯೆಯ ಲಕ್ಷಣ ಇದು ಎನ್ನಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಅನೇಕ ತೊಂದರೆಗಳು ಬರುವ ಸೂಚನೆ ಎನ್ನಬಹುದು.

ಕನ್ನಡಿ ಅಥವಾ ಇತರ ಗಾಜಿನ ವಸ್ತುಗಳು ಒಡೆಯುವುದು ವಿಭಿನ್ನ ಪರಿಣಾಮಗಳನ್ನ ನೀಡುತ್ತದೆ. ಕೆಲವೊಮ್ಮೆ ಇದು ಶುಭವಾದರೆ, ಇನ್ನೂ ಕೆಲವೊಮ್ಮೆ ಇದು ಅಶುಭ ಪರಿಣಾಮಗಳನ್ನ ಬೀರುತ್ತದೆ. ಕೆಲವರು ಗಾಜು ಒಡೆದರೆ ಶುಭ ಎಂದು ಪರಿಗಣಿಸುತ್ತಾರೆ.

ಕೆಲ ನಂಬಿಕೆಗಳ ಪ್ರಕಾರ ಕನ್ನಡಿ ಒಡೆದರೆ ಬಹಳ ಒಳ್ಳೆಯದಾಗುತ್ತದೆ. ಹಾಗೆಯೇ, ಇದರ ಪ್ರಕಾರ ಮನೆಯ ಕಿಟಕಿ ಅಥವಾ ಬಾಗಿಲಿನ ಗಾಜು ಒಡೆದರೆ ಅಥವಾ ಒಡೆದರೆ ಅದು ಅಶುಭವಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಕೇಳಲಿದ್ದೀರಿ ಎಂದರ್ಥ.

ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಕನ್ನಡಿ ಇದ್ದಕ್ಕಿದ್ದಂತೆ ಮನೆಯಲ್ಲಿ ಒಡೆದರೆ ಬಹಳ ಒಳ್ಳೆಯದಮತೆ. ಇದರಿಂದ ಮನೆಯಲ್ಲಿರುವ ಎಲ್ಲಾ ಕಷ್ಟಗಳು ಮಾಯಾವಾಗುತ್ತದೆ. ಮುಂದಿನ ದಿನಗಳಲ್ಲಿ ಸಂತೋಷ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಆದರೆ ನೀವು ಮನೆಯಲ್ಲಿ ಕನ್ನಡಿ ಒಡೆದ ತಕ್ಷಣ ಅದನ್ನ ಸ್ವಚ್ಛ ಮಾಡಿ, ಮನೆಯಿಂದ ಹೊರ ಹಾಕಬೇಕು. ಒಡೆದ ಗಾಜುಗಳು ನೆಗೆಟಿವ್ ಎನರ್ಜಿಯನ್ನ ಹೆಚ್ಚು ಮಾಡುತ್ತದೆ. ಹಾಗಾಗಿ ಅದನ್ನ ಬಿಸಾಡಿದರೆ ಒಳ್ಳೆಯದಾಗುತ್ತದೆ.

ಇನ್ನು ಒಡೆದ ಕನ್ನಡಿಯಲ್ಲಿ ಎಂದಿಗೂ ಮುಖವನ್ನ ನೋಡಿಕೊಳ್ಳಬಾರದು. ಇದರಿಂದ ಕೆಟ್ಟದ್ದಾಗುತ್ತದೆ. ಅಲ್ಲದೇ, ಇದರಿಂದ ಒಳ್ಳೆಯದಾಗುವುದರ ಬದಲಾಗಿ ಕೆಟ್ಟದ್ದಾಗುತ್ತದೆ. 

Leave A Reply

Your email address will not be published.