ಕಿವಿ ಒಳಗಡೆ ಇರುವೆ ಅಥವಾ ಕೀಟ ಹೋದಾಗ ಈ ರೀತಿ ಮಾಡಿದರೆ ಒಂದೇ ಕ್ಷಣದಲ್ಲಿ ನೋವಿಗೆ ಪರಿಹಾರ ಸಿಗುತ್ತದೆ!
ಅನೇಕರು ಬೆಂಕಿ ಕಡ್ಡಿ, ಹೇರ್ ಪಿನ್ ಬಳಸುತ್ತಾರೆ. ಆದರೆ ತುಂಬಾ ಅಪಾಯಕಾರಿ. ಕಿವಿಯ ತಮಾಟೆ ತುಂಬಾ ಮೃದುವಾಗಿದ್ದು, ಒಂದು ಬಾರಿ ಹಾನಿಯಾದರೆ ಡಾಕ್ಟರ್ ಬಳಿ ಹೋಗಬೇಕಾದ ಸಂದರ್ಭ ಬರಬಹುದು. ಹಾಗಾಗಿ ಯಾವುದೇ ವಸ್ತುವನ್ನು ಕಿವಿಗೆ ಹಾಕಬೇಡಿ.
ಕೆಲವೊಮ್ಮೆ ಗೊತ್ತಿಲ್ಲದೆ ಕಿವಿಯೊಳಕ್ಕೆ ಕೀಟಗಳು ಸೇರಿ ಬಿಡುತ್ತದೆ. ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ನಿದ್ದೆಯ ಮಂಪರಿನಲ್ಲಿದ್ದಾಗ ಕಿವಿಯ ಒಳಕ್ಕೆ ಕೀಟ ಹೊಕ್ಕಿರುತ್ತದೆ. ಆದರೆ ಬೆಳಗ್ಗಿನ ಜಾವ ನೋವಾದಾಗ ಕಿವಿಯೊಳಕ್ಕೆ ಏನೋ ಸೇರಿಕೊಂಡಿದೆ ಎಂದು ಗೊತ್ತಾಗುತ್ತದೆ.
ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಈ ಅನುಭವ ಆಗಿರುತ್ತದೆ. ಆದರೆ ಇಂತಹ ಸಮಯದಲ್ಲಿ ತುಂಬಾ ಜಾಗೃತೆ ವಹಿಸಬೇಕು. ಅನೇಕರು ಕಿವಿಯೊಳಕ್ಕೆ ಏನಾದರೂ ಹೋದಾಗ ಕಡ್ಡಿ ಹಾಕುತ್ತಾರೆ. ಆದರೆ ಇದು ತುಂಬಾ ಅಪಾಯ. ಕಿವಿ ಸೂಕ್ಷ್ಮ ಅಂಗವಾಗಿದೆ.
ಕಿವಿಯೊಳಕ್ಕೆ ಹೊಕ್ಕ ಕೀಟವನ್ನು ಹೊರತೆಗೆಯುವುದು ಸರಳ ಉಪಾಯವಿದೆ. ಮೊದಲೇ ಹೇಳಿದಂತೆ ಕಿವಿ ತುಂಬಾ ಸೂಕ್ಷ್ಮ ಅಂಗವಾಗಿದ್ದು, ಮೃದುವಾಗಿದೆ. ಕೀಟಗಳು ಕಿವಿಯೊಳಕ್ಕೆ ಸೇರಿ ಅವುಗಳ ಕಾಲಿನ ಮುಳ್ಳುಗಳು ತಾಗಿ ಕಿವಿ ನೋವು ಉಂಟಾಗುತ್ತದೆ.
ಅನೇಕರು ಈ ಸಂದರ್ಭದಲ್ಲಿ ತಲೆಕೆಟ್ಟವರಂತೆ ವರ್ತಿಸುತ್ತಾರೆ. ಆದರೆ ಉಪಾಯದಿಂದ ಕೀಟವನ್ನು ಹೊರ ತೆಗೆಯಬಹುದಾಗಿದೆ.
ಕೀಟ ಒಳಹೊಕ್ಕ ಬಳಿಕ ಎಷ್ಟು ಬೇಗ ಸಾದ್ಯವೋ ಅಷ್ಟು ಬೇಗ ಆಲಿವ್ ಎಣ್ಣೆ ಅಥವಾ ಮಗುವಿನ ಎಣ್ಣೆ ಕಿವಿಯೊಳಕ್ಕೆ ಒಂದೊಂದೆ ತೊಟ್ಟು ಬೀಳುವಂತೆ ಹಾಕಬೇಕು. ನಂತರ….
ಎಣ್ಣೆಯಿಂದ ಕಿವಿಯ ತೂತು ಮುಚ್ಚಿದರೆ ಒಳಗಿದ್ದ ಕೀಟಕ್ಕೆ ಏನು ಮಾಡಲಾಗದೆ ಎಣ್ಣೆಯೊಂದಿಗೆ ಹೊರಬರುತ್ತದೆ,
ಆದರೆ ಕಿವಿಯಲ್ಲಿ ಸೋಂಕು, ಕಿವಿ ಸೋರುವವರು ಕಿವಿಗೆ ಎಣ್ಣೆ ಬಿಡದಿರಿ. ಇಂತಹ ಸಮಸ್ಯೆ ಎದುರಾದಾಗ ಡಾಕ್ಟರ್ ಬಳಿ ಹೋಗಿ.
ಅನೇಕರು ಬೆಂಕಿ ಕಡ್ಡಿ, ಹೇರ್ ಪಿನ್ ಬಳಸುತ್ತಾರೆ. ಆದರೆ ತುಂಬಾ ಅಪಾಯಕಾರಿ. ಕಿವಿಯ ತಮಾಟೆ ತುಂಬಾ ಮೃದುವಾಗಿದ್ದು, ಒಂದು ಬಾರಿ ಹಾನಿಯಾದರೆ ಡಾಕ್ಟರ್ ಬಳಿ ಹೋಗಬೇಕಾದ ಸಂದರ್ಭ ಬರಬಹುದು. ಹಾಗಾಗಿ ಯಾವುದೇ ವಸ್ತುವನ್ನು ಕಿವಿಗೆ ಹಾಕಬೇಡಿ.
ಕೆಲವರು ಕಿವಿಗೆ ನೀರು ಬಿಡುತ್ತಾರೆ. ಇನ್ನು ಕೆವರು ಎಣ್ಣೆ ಬಿಟ್ಟು ಕಿವಿಯೊಳಗಿನ ಕೀಟವನ್ನು ಹೊರ ಹೋಗುವಂತೆ ಮಾಡುತ್ತಾರೆ. ಇಷ್ಟಾದರೂ ಕಿವಿಯ ನೋವು ಹೋಗಿಲ್ಲವೆಂದಾದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗುವುದು ಉತ್ತಮ.