ವಜ್ರ ಶುಕ್ರಗ್ರಹದ ರತ್ನ/ ಹರಳು

0 4

ವಜ್ರ ಶುಕ್ರಗ್ರಹದ ರತ್ನ/ ಹರಳು :

ವಜ್ರವನ್ನು ಹಿಂದಿ ಭಾಷೆಯಲ್ಲಿ ಹೀರಾ ಸಂಸ್ಕೃತ ಭಾಷೆಯಲ್ಲಿ ವಜ್ರ ಎಂತಲೂ ಕರೆಯುವರು. ಉರ್ದು ಮತ್ತು ಪಾರ್ಸಿ ಭಾಷೆಯಲ್ಲಿ ಅಲ್ಮಾಪ ಎಂತಲೂ , ಇಂಗ್ಲೀಷ್ ನಲ್ಲಿ ಡೈಮಂಡ್ ಎಂತಲೂ ಕರೆಯುವರು.
ವಜ್ರವು ಬಹಳ ಕಠಿಣವಾದದ್ದು, ಷಟ್ಕೋನ ಆಕಾರದ ವಜ್ರಕ್ಕೆ ಇಂದ್ರನು ಅಧಿಪತಿ. ಸರ್ಪ ಮುಖವನ್ನು ಹೊಂದಿರುವ ಕಪ್ಪು ಹಳದಿ ನೀಲಿ ಬಣ್ಣದ ವಜ್ರಗಳಿಗೆ ವಿಷ್ಣು ಅಧಿಪತಿ. ಯೋನಿಯಾಕರವನ್ನು ಹೊಂದಿರುವ ವಜ್ರಕ್ಕೆ ಮರಣ ದೇವತೆಯು, ಹುಲಿಯ ಬಣ್ಣದ ವಜ್ರಕ್ಕೆ ಅಗ್ನಿಯು ಹಾಗೂ ಪುಷ್ಪದ ಬಣ್ಣವನ್ನು ಹೊಂದಿರುವ ವಜ್ರಗಳಿಗೆ ವಾಯು ದೇವತೆಯು ಅಧಿಪತಿಗಳಾಗಿರುತ್ತಾರೆ. ಕೆಂಪು ಬಣ್ಣ ಹಾಗೂ ಹಳದಿ ಬಣ್ಣದ ವಜ್ರಗಳು ಕ್ಷತ್ರಿಯರಿಗೆ, ಬಿಳಿಯ ಬಣ್ಣದ ವಜ್ರಗಳು – ಬ್ರಾಹ್ಮಣರಿಗೆ.
ಹಸಿರು ಬಣ್ಣದ ವಜ್ರಗಳು ವೈಶ್ಯರಿಗೆ, ನೀಲಿ ಬಣ್ಣದ ವಜ್ರಗಳು ಶೂದ್ರರಿಗೆ ಶುಭಕರವು ಎಂಬುದಾಗಿ ಚಾತುರ್ವರ್ಣದವರಿಗೆ ವಜ್ರವನ್ನು ವಿಂಗಡಿಸಲಾಗಿದೆ ವಜ್ರಗಳು ನೀರಿನಲ್ಲಿ ತೇಲುತ್ತದೆ ಎಂಬುದನ್ನು ಋಷಿ-ಮುನಿಗಳು ತಮ್ಮ ಗ್ರಂಥಗಳಾದ ಶುಕ್ರನೀತಿ ಹಾಗೂ ಗರುಡ ಪುರಾಣಗಳಲ್ಲಿ ಉಲ್ಲೇಖಿಸಿರುವರು ಅಂತ ವಜ್ರಗಳು ಶ್ರೇಷ್ಠ ವಜ್ರಗಳೆಂದು ಪರಿಗಣಿಸಬಹುದು.
ವಜ್ರಗಳ ಉಪಯೋಗಗಳು: ಸೌಂದರ್ಯ ವರ್ತಿಸುವುದಕ್ಕೆ ಅಂದರೆ ಆಭರಣಗಳಿಗೆ ಬಂಡೆಗಳನ್ನು ತುಂಡು ಮಾಡಲಿಕ್ಕೆ ಸುರಂಗಮಾರ್ಗ ಕೊರೆಯುವುದಕ್ಕೆ ಎಣ್ಣೆ ತೆಗೆಯುವುದಕ್ಕೆ ಉಪಯೋಗಿಸುವವರು.

ವೈದ್ಯಕೀಯ ಉಪಯೋಗಗಳು
ವಜ್ರದ ಭಸ್ಮವನ್ನು ಆಯುರ್ವೇದ ಪದ್ಧತಿಯಲ್ಲಿ ಅತಿಸಾರ ಕಣ್ಣುಕುರುಡು ಸ್ವರ ಭಂಗ ಧ್ವನಿ ಬೀಳುವುದು ಕುರುಡತನ ಅನಿಯಮಿತ ಋತುಸ್ರಾವ ಬುದ್ಧಿಭ್ರಮಣೆ ಭೃಗದಂಟಿ ಹುಣ್ಣು ಶ್ವೇತ ಪ್ರಹಾರ ಬಿಳಿಸೆರಗು ಮುಂತಾದ ಕಾಯಿಲೆಗಳಿಗೆ ಉಪಯೋಗಿಸುವರು. ದೆವ್ವ ಭೂತ ಕಾಟ ನಿವಾರಣೆಗಾಗಿ ಹಾಗೂ ವಿಷ ಮಾಟ ಮದ್ದುಗಳ ದೋಷಕ್ಕೆ ವಜ್ರಗಳನ್ನು ಉಪಯೋಗಿಸುವುದು ವಜ್ರಗಳನ್ನು ಉಪಯೋಗಿಸುವರು.
ವಜ್ರದ ಹರಳನ್ನು ಯಾರು ಧರಿಸಬೇಕು:
ಪ್ರಥಮ ವಿಧಾನ : ವಜ್ರವು ಶುಕ್ರಗ್ರಹದ ರತ್ನ ಅದರಿಂದ ಯಾರ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿರುವನೋ ಅವರು ವಜ್ರವನ್ನು ಧಾರಣೆ ಮಾಡುವುದರಿಂದ ಅನುಕೂಲ. ಮೇಷ, ವೃಶ್ಚಿಕ, ಧನಸ್ಸು, ಮೀನ, ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸಬಾರದು. ವೃಷಭ -ತುಲಾ-ಮಿಥುನ- ಕನ್ಯಾ ಲಗ್ನದಲ್ಲಿ ಜನಿಸಿದವರು ಧರಿಸಬಹುದು.
ಸಿಂಹ ಲಗ್ನದವರು ಶುಕ್ರನೂ ಕೇಂದ್ರ ಹಾಗೂ ತ್ರಿಕೋನಗಳಲ್ಲಿ ಸ್ಥಿತನಾಗಿದ್ದಾಗ ಶುಕ್ರದೆಸೆಯಲ್ಲಿ ಧಾರಣೆ ಮಾಡಬಹುದು.

ದೋಷಪೂರಿತ ವಜ್ರಗಳು :
ವಜ್ರಗಳ ಮೇಲೆ ನೀರಿನಂತಹ ಕಪ್ಪುಚುಕ್ಕೆ ಕಾಗೆಯ ಕಾಲುಗಳ ಹಾಗೆ ಚುಕ್ಕೆ, ಗೋದಿ ಆಕಾರದ ಬಿಂದುಗಳು ಹಾಗೂ ರೇಖೆಗಳು ಇದ್ದರೆ ದೋಷಪೂರಿತ.

ಸಂಖ್ಯಾ ಶಾಸ್ತ್ರಕ್ಕೆ ಅನುಗುಣವಾಗಿ ಯಾರು ವಜ್ರವನ್ನು ಧಾರಣೆ ಮಾಡಬಹುದು:

ಸಂಖ್ಯೆ 6, 15 , 24 , ದಿನಾಂಕಗಳಲ್ಲಿ ಜನಿಸಿದವರು ಶುಕ್ರನ ಆಳ್ವಿಕೆಗೆ ಒಳಪಡುವವರು ಮೇಲ್ಕಂಡ ದಿನಾಂಕದಲ್ಲಿ ಮತ್ತು ಶುಕ್ರವಾರಗಳಲ್ಲಿ ಜನಿಸಿದ್ದಾದರೆ ಶುಕ್ರಗ್ರಹದ ಪ್ರಭಾವವು ಹೆಚ್ಚಾಗಿರುವುದು.
ಸಂಖ್ಯೆ 6 ರಲ್ಲಿ ಜನಿಸಿದವರು ವಜ್ರವನ್ನು ಧಾರಣೆ ಮಾಡುವುದು ಉತ್ತಮ. 15 ರಲ್ಲಿ ಜನಿಸಿದವರು ಪಚ್ಚೆ ಹರಳು ಉತ್ತಮ. ವಜ್ರ ಮಧ್ಯಮ ಸಂಖ್ಯೆ 24 ರಲ್ಲಿ ಜನಿಸಿದವರು ವಜ್ರ ಸಾಧಾರಣ ಫಲ. ಶುಕ್ರದೆಸೆಯಲ್ಲಿ ಉತ್ತಮ ಫಲ. ಯಾವುದೇ ಹರಳನ್ನು ಧಾರಣೆ ಮಾಡದಿರುವುದೇ ಉತ್ತಮ.

Leave A Reply

Your email address will not be published.