ಈ 5 ಕನಸು ಅದೃಷ್ಟವಂತರಿಗೆ ಮಾತ್ರ ಬೀಳುತ್ತವೆ!

0 15,010

ನಿದ್ರಿಸುವಾಗ ನಾವು ಅನೇಕ ರೀತಿಯ ಕನಸುಗಳನ್ನು ನೋಡುತ್ತೇವೆ. ಕೆಲವು ಕನಸುಗಳು ನಿಮ್ಮನ್ನು ನಿದ್ರೆಯಿಂದ ಅರ್ಧಕ್ಕೆ ಎದ್ದೇಳುವಂತೆ ಮಾಡುತ್ತದೆ. ಅಥವಾ ಯಾವ ಕನಸುಗಳು ನಿಮ್ಮ ಮುಂಜಾನೆಯನ್ನು ಆಹ್ಲಾದಕರವಾಗಿಸುತ್ತದೆ ಎಂಬುದನ್ನು ತಿಳಿದಿರುವಿರಾ..? ಅಥವಾ ಮಲಗಿರುವಾಗ ಕಂಡ ಕನಸುಗಳ ಹಿಂದಿನ ಅರ್ಥವೇನು ಎಂಬುದನ್ನು ತಿಳಿಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ..? ಸ್ವಪ್ನ ಶಾಸ್ತ್ರದಲ್ಲಿ ಒಳ್ಳೆಯ ಮತ್ತು ಕೆಟ್ಟ ಕನಸುಗಳ ಅರ್ಥವನ್ನು ನೀಡಲಾಗಿದೆ. ಸಂಪತ್ತನ್ನು ಸೂಚಿಸುವ ಕೆಲವು ಕನಸುಗಳ ಬಗ್ಗೆ ಕೂಡ ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಯಾವ ರೀತಿಯ ಕನಸುಗಳು ಬಿದ್ದರೆ ನಮ್ಮ ಸಂಪತ್ತು ಮತ್ತು ಆಸ್ತಿ ಹೆಚ್ಚಾಗುತ್ತದೆ ಗೊತ್ತೇ..?

​ಕನಸಿನಲ್ಲಿ ಸಾಧು – ಮಹಾತ್ಮರು

ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಸಾಧು, ಸಂತರು ಮತ್ತು ಮಹಾತ್ಮರು ಕಾಣಿಸಿಕೊಂಡರೆ, ಅಂತಹ ಕನಸನ್ನು ಮಂಗಳಕರ ಕನಸೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಭವಿಷ್ಯದಲ್ಲಿ ಏಳಿಗೆ ಮತ್ತು ಪ್ರಯೋಜನವನ್ನು ಪಡೆಯುತ್ತೀರಿ ಎಂಬುದಾಗಿದೆ.

​ಕನಸಿನಲ್ಲಿ ಹಾಲು ಮತ್ತು ಮೊಸರು

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಾಲು ಮತ್ತು ಮೊಸರು ಕಾಣಿಸಿಕೊಳ್ಳುವುದು ಕೆಲವು ದೊಡ್ಡ ಕೆಲಸಗಳಲ್ಲಿ ಯಶಸ್ಸು ಸಾಧಿಸುವುದನ್ನು ಸೂಚಿಸುತ್ತದೆ. ನಿಮಗೂ ಈ ರೀತಿಯ ಕನಸು ಬಿದ್ದಿದ್ದರೆ ಅದು ನಿಮ್ಮ ಯಶಸ್ಸಿನ ಬಗ್ಗೆ ಹೇಳುತ್ತದೆ.

​ಕನಸಿನಲ್ಲಿ ಕೆಂಪು ಬಣ್ಣ

ನಿಮ್ಮ ಕನಸಿನಲ್ಲಿ ಯಾವುದೇ ಕೆಂಪು ವಸ್ತುವನ್ನು ಕಂಡರೆ ಅಥವಾ ಕೆಂಪು ಬಟ್ಟೆಯನ್ನು ಧರಿಸಿದ ಮಹಿಳೆಯನ್ನು ನೋಡಿದರೆ ಅದು ತುಂಬಾ ಶುಭ ಸಂಕೇತವಾಗಿದೆ. ಇದರರ್ಥ ನೀವು ಶೀಘೃದಲ್ಲೇ ಲಕ್ಷ್ಮಿ ದೇವಿಯಿಂದ ಆಶೀರ್ವದಿಸಲ್ಪಡುವಿರಿ ಎಂದರ್ಥ. ಈ ಕನಸು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ನೀವು ಎಲ್ಲಾ ರೀತಿಯ ಕೆಲಸಗಳಲ್ಲೂ ಪ್ರಗತಿಯನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಕನಸಿನಲ್ಲಿ ಹಣದ ವ್ಯವಹಾರ

ಸ್ವಪ್ನ ಶಾಸ್ತ್ರದ ಪ್ರಕಾರ, ಹಣದ ವ್ಯವಹಾರ ಮಾಡುತ್ತಿರುವಂತೆ ಕನಸು ಕಾಣುವುದು ಶುಭ ಸಂಕೇತವಾಗಿದೆ. ನಿಮಗೂ ಈ ಕನಸು ಬಿದ್ದಿದ್ದರೆ ಅದರರ್ಥ ನೀವು ಶೀಘ್ರದಲ್ಲೇ ಶ್ರೀಮಂತರಾಗಲಿದ್ದೀರಿ ಎಂಬುದರ ಸಂಕೇತವಾಗಿದೆ. ಇದರಿಂದ ನೀವು ಒಂದು ಅಥವಾ ಇನ್ನೊಂದು ಮೂಲದ ಮೂಲಕ ಅಪಾರ ಹಣವನ್ನು ಪಡೆದುಕೊಳ್ಳುವುದರ ಸೂಚನೆಯಾಗಿದೆ.
​ಕನಸಿನಲ್ಲಿ ಹಾವು

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಾವನ್ನು ನೋಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಬಿಳಿ ಅಥವಾ ಚಿನ್ನದ ಬಣ್ಣದ ಹಾವನ್ನು ಕಂಡರೆ, ಅವನ ಮೇಲೆ ಲಕ್ಷ್ಮಿ ದೇವಿಯು ವಿಶೇಷ ಅನುಗ್ರಹವನ್ನು ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ. ಆ ವ್ಯಕ್ತಿ ತನ್ನ ಜೀವನದಲ್ಲಿ ಎಲ್ಲಿಂದ ಬೇಕಾದರೂ ಹಣವನ್ನು ಸಂಪಾದಿಸಬಹುದು.

Leave A Reply

Your email address will not be published.