ಮುಚ್ಚಿ ಹೋದ ಕಂಪನಿ ಉತ್ತುಂಗಕ್ಕೆ ಹೋಗಿರುವ ಯಶೋಗಾಥೆಯ ಕಥೆ!

0 52

ಹೊಸದಾಗಿ ಕಂಪನಿ ಶುರು ಮಾಡಿದವರು ಮತ್ತು ಕಂಪನಿ ಮುಚ್ಚಿದವರು ಹಾಗು ಕಂಪನಿ ನಷ್ಟದಲ್ಲಿ ಇರುವವರು ಈ ಒಂದು ಮಾಹಿತಿಯನ್ನು ನೋಡಬೇಕು.ಕಂಪನಿ ನಷ್ಟದಲ್ಲಿ ಇದ್ದು ಕಂಪನಿ ಮಾಲೀಕರು ಮತ್ತು ಅಲ್ಲಿನ ಕೆಲಸ ಮಾಡುವವರು ಇವರು ಇಬ್ಬರು ತುಂಬಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಕಂಪನಿಯ ಬೆಳವಣಿಗೆ ಜೊತೆಗೆ ಅಲ್ಲಿನ ಕೆಲಸಗಾರರ ಬೆಳವಣಿಗೆಗೆಯೂ ಕುಗ್ಗಿ ಹೋಗಿತ್ತು. ಆ ಕಂಪನಿಯ ಮಾಲೀಕ ಕಂಪನಿ ಗೇಟ್ ಮೇಲೆ ಪ್ರಕಟಣೆಯನ್ನು ಹಾಕುತ್ತಾರೆ.

ಅದರಲಿ ಹೀಗೆ ಬರೆಯುತ್ತಾರೆ. ನಿನ್ನೆ ರಾತ್ರಿ ನಮ್ಮಲ್ಲಿ ಇರುವ ಕೆಲಸಗಾರನಾ ಸಾವಾಗಿದೆ. ಅದಕ್ಕೆ ಕಾರಣ ಕಂಪನಿ ಮತ್ತು ಅವನ ಬೆಳವಣಿಗೆ ಆಗದೆ ಇರುವುದು. ಆ ವ್ಯಕ್ತಿಯ ಶರೀರದ ಅಂತಿಮ ದರ್ಶನ ಪಡೆಯಲು ಎಲ್ಲಾರು ಸಭಾಂಗಣಕ್ಕೆ ಬರಬೇಕು. ಈ ಮಾತು ಕೇಳಿಸಿಕೊಂಡು ಅಲ್ಲಿ ಇರುವ ಕೆಲಸಗಾರರು ದುಃಖದಲ್ಲಿ ಇದ್ದರು.

ಒಂದು ಗಂಟೆ ನಂತರ ಕಂಪನಿ ಸಭಾಂಗಣದಲ್ಲಿ ಕೆಲಸಗಾರರು ಬಂದು ನಿಲ್ಲುತ್ತರೆ. ಯಾರಿಗೂ ಗೊತ್ತಿಲ್ಲ ಯಾರು ಸತ್ತಿದ್ದಾರೆ ಎಂದು. ಅಲ್ಲಿ ಇಟ್ಟಿರುವ ಶವ ಪೆಟ್ಟಿಗೆ ಹತ್ತಿರ ಹೋಗೀ ಮೌನದಿಂದ ತಲೆ ತಗ್ಗಿಸಿ ಅಲ್ಲಿಂದ ಹೊರಟು ಹೋಗುತ್ತಾರೆ. ಆ ಪೆಟ್ಟಿಗೆಯಲ್ಲಿ ಯಾವುದೇ ಶವ ಇರುವುದಿಲ್ಲ. ಅಲ್ಲಿ ಒಂದು ಕನ್ನಡಿ ಇಡಲಾಗಿತ್ತು. ಪ್ರತಿಯೊಬ್ಬರೂ ಆ ಶವ ಪೆಟ್ಟಿಗೆ ಹತ್ತಿರ ಹೋಗೀ ಇಣುಕಿ ನೋಡಿದಾಗ ಅವನ ಮುಖವೇ ಅವನಿಗೆ ಕಾಣಿಸುತ್ತದೆ.

ಆ ಶವ ಪೆಟ್ಟಿಗೆಯಲ್ಲಿ ಅವರಿಗೆ ನೋಡಿಕೊಂಡು ಅರ್ಥವಾಗಿದ್ದು ಏನು ಎಂದರೆ ಈ ಕಂಪನಿಯ ಬೆಳವಣಿಗೆ ಯಾರು ಕೈಯಲ್ಲೂ ಇಲ್ಲಾ. ಇದು ನಮ್ಮ ಕೈಯಲ್ಲಿ ಇದೆ ಎಂದು. ಅವರಿಂದಲೇ ಕೆಲಸ ಸರಿಯಾಗಿ ಇಲ್ಲದೆ ಇರುವ ಕಾರಣಕ್ಕೆ ಕಂಪನಿ ನಷ್ಟದಲ್ಲಿ ಇತ್ತು ಮತ್ತು ಅವರ ಏಳಿಗೆ ನಿಂತು ಹೋಗಿತ್ತು.ಈ ಕಥೆಯಲ್ಲಿ ಏನು ಅರ್ಥ ಆಗಿತ್ತು ಅಂದರೆ ನಮ್ಮ ಸೋಲಿಗೆ ನಮ್ಮ ಗೆಲುವಿಗೆ ಯಾರು ಕಾರಣರಲ್ಲ. ಪ್ರತಿ ಸೋಲಿಗೂ ಪ್ರತಿ ಗೆಲುವಿಗೂ ನಾವೇ ಕಾರಣ. ನಮ್ಮ ಕೆಲಸದಲ್ಲಿ 100% ಎಫರ್ಟ್ ಹಾಕಿದರೆ ಸೋಲಲು ಸಾಧ್ಯವಿಲ್ಲ. ಕೆಲಸಕ್ಕೆ ವಂಚನೆ ಮಾಡಿದರೆ ಅವರ ಬದುಕಲ್ಲಿ ಬೆಳಕು ಬರುವುದಿಲ್ಲ. ಯಾವತ್ತು ಕೆಲಸ ಮಾಡುವ ಸಂದರ್ಭದಲ್ಲಿ ಇಷ್ಟಪೂರ್ವಕವಾಗಿ ಕೆಲಸ ಮಾಡಬೇಕು.

Leave A Reply

Your email address will not be published.