ಕನಸಿನಲ್ಲಿ ಕತ್ತರಿ, ಅತಿಥಿ,ಹೊಸ ಕಚೇರಿ, ಆತ್ಮಹತ್ಯೆ ಕಂಡ್ರೆ ಅದೃಷ್ಟವಂತೆ!

0 145

ಕನಸಿನ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ನಾವು ಕಾಣುವ ಪ್ರತಿಯೊಂದು ಕನಸಿಗೂ ಖಂಡಿತವಾಗಿಯು ಏನಾದರು ಅರ್ಥ ಇರುತ್ತದೆ. ಕನಸುಗಳು ಭವಿಷ್ಯದ ಸಾಧ್ಯತೆಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತವೆ. ನಾವು ಅನುಭವಿಸಿದ ಕೆಲವು ವಿಷಯಗಳನ್ನು ನಾವು ಕನಸಿನಲ್ಲಿ ನೋಡುತ್ತೇವೆ. ಕನಸಿನಲ್ಲಿ ಕಾಣುವ ಕೆಲವು ಸಂಗತಿಗಳು ಹೆಚ್ಚಾಗಿ ಮರೆತುಹೋಗಲು ಇದೆ ಕಾರಣ. ಹಾಗಾಗಿ ಅದೃಷ್ಟ ತಿಳಿಸುವ ಕನಸುಗಳು ಯಾವುವು ಎಂದು ತಿಳಿಸುತ್ತೇವೆ.

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಲ್ಲಿಯನ್ನು ಕಂಡರೆ ಶುಭ, ಹಲ್ಲಿಯನ್ನು ನೋಡುವುದು ಎಂದರೆ ಆ ವ್ಯಕ್ತಿಯು ಹಣ ಗಳಿಸುತ್ತಾನೆ ಎಂದು ನಂಬಲಾಗಿದೆ.

ಹೊಸ ಕಚೇರಿಯ ಪ್ರಾರಂಭವನ್ನು ನೋಡುವುದು ವ್ಯವಹಾರದಲ್ಲಿ ಪ್ರಗತಿಯ ಸಂಕೇತವಾಗಿದೇ. ಕನಸಿನಲ್ಲಿ ಕಚೇರಿ ಅಧಿಕರಿಯಾಗಿರುವುದು ಬಹಳ ಮಂಗಳಕರ ಕನಸು ಆಗಿದೆ.

ರೋಗಿಯನ್ನು ಕನಸಿನಲ್ಲಿ ನೋಡುವುದರಿಂದ ಆ ವ್ಯಕ್ತಿಯು ಶೀಘ್ರದಲ್ಲೇ ಅರೋಗ್ಯವಂತನಾಗುತ್ತಾನೆ ಎಂದು ಅರ್ಥ.

ಕನಸಿನಲ್ಲಿ ನಿಮ್ಮನ್ನು ನೀವೇ ತಂಬಿಕೊಂಡಂತೆ ನೋಡಿದರೆ ಅದು ಕೆಟ್ಟ ಶಕುನ.

ಕನಸಿನಲ್ಲಿ ನೀವು ಆತ್ಮಹತ್ಯೆ ಮಾಡಿಕೊಳ್ಳುವುದು ನೋಡುವುದು ಭಯಾನಕ ಕನಸಾದರು ಸ್ವಪ್ನ ಶಾಸ್ತ್ರದ ಪ್ರಕಾರ ಈ ಕನಸು ಮಂಗಳಕರವೆಂದು ಪರಿಗಣಿಸಲಾಗುತ್ತೆ. ಈ ಕನಸು ನಿಮ್ಮ ಆಯಸ್ಸು ಹೆಚ್ಚಿಸುತ್ತದೆ ಎಂದರ್ಥ.

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ನಿರ್ಮಾಣ ಕೆಲಸವನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಪ್ರಗತಿ ಯನ್ನು ಪಡೆಯಲಿದ್ದೀರಿ ಎಂದರ್ಥ.

ಕನಸಿನಲ್ಲಿ ಅತಿಥಿಯು ಬಂದಂತೆ ಕಂಡರೆ ಮುಂಬರುವ ಸಮಯದಲ್ಲಿ ಕೆಲವು ವಿಪತ್ತುಗಳು ಸಂಭವಿಸಲಿದೆ ಎಂದರ್ಥ. ಆದ್ದರಿಂದ ನೀವು ಅಂತಹ ಕನಸನ್ನು ನೋಡಿದರೆ ಮುಂಬರುವ ಸಮಸ್ಸೆಯನ್ನು ಎದುರಿಸಲು ಸಿದ್ದರಾಗಿರಬೇಕು.

ಕನಸಿನಲ್ಲಿ ಕತ್ತರಿಗಳನ್ನು ನೋಡಿದರೆ ಅಥವಾ ಬೇರೊಬ್ಬರೂ ಕತ್ತರಿ ಬಳಸುವುದನ್ನು ನೋಡಿದರೆ ಅದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಈ ರೀತಿ ಕನಸು ಬಿದ್ದರೆ ಆದಷ್ಟು ಎಚ್ಚರಿಕೆಯಿಂದ ಇರಬೇಕು.

Leave A Reply

Your email address will not be published.