ಸಂವತ್ಸರ ಅಂದರೆ ಏನು? ಮಹತ್ವವೇನು? ಸಂವತ್ಸರಗಳ ವಿವರ
ಸಂವತ್ಸರ ಅಂದರೆ ಏನು? ಮಹತ್ವವೇನು? ಸಂವತ್ಸರಗಳ ವಿವರ
ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಸಂವತ್ಸರದ ವಿಚಾರವಾಗಿ ತಿಳಿಸುತಿದ್ದೇವೆ ಸಂವತ್ಸರ ಎಂದರೆ ಏನು ಸಂವತ್ಸರಗಳ ವಿಶೇಷವೇನು ಹಾಗೂ ಸಂವತ್ಸರಗಳು ಯಾವುವು ಅವುಗಳ ಹೆಸರೇನು ಇವುಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಈ ಸಂವತ್ಸರ ಎನ್ನುವುದು ಒಂದು ಸಂಸ್ಕೃತ ಪದ ಈ ಸಂವತ್ಸರದ ಅರ್ಥ ಒಂದೇ ಒಂದು ವರ್ಷದ ಅವಧಿ ಈ ಒಂದು ವರ್ಷದ ಅವಧಿಯನ್ನು ಸಂವತ್ಸರ ಎಂದು ಕರೆಯುತ್ತೇವೆ ಸಾಧಾರಣವಾಗಿ ಒಂದು ವರ್ಷದ ಅವಧಿಯೆಂದು ತೆಗೆದುಕೊಳ್ಳುವುದಾದರೆ ಒಂದು ಚಂದ್ರನ ಚಲನೆಯನ್ನು ಆಧಾರವಾಗಿಟ್ಟುಕೊಂಡು ಒಂದು ವರ್ಷದ ಅವಧಿ ಮಾಡುತ್ತೇವೆ ಅದರಲ್ಲಿ 12 ತಿಂಗಳು ಚೈತ್ರದಿಂದ ಪಾಲ್ಗುಣದವರೆಗೂ ಬರುತ್ತದೆ
ಇನ್ನೊಂದು ಪದ್ಧತಿಯಲ್ಲಿ ಸೂರ್ಯನನ್ನು ಆಧಾರವಾಗಿಟ್ಟುಕೊಂಡು ಮಾಡುತ್ತೇವೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವ ಅವಧಿಯನ್ನು ತೆಗೆದುಕೊಂಡು ಇದರಲ್ಲೂ ಸಹ 12 ತಿಂಗಳು ಮೇಷ ಮಾಸ ವೃಷಭ ಮಾಸ ಈ ರೀತಿ ಮೀನಾ ಮಾಸದವರೆಗೂ 12 ತಿಂಗಳುಗಳನ್ನು ಒಟ್ಟುಗೂಡಿಸಿ ಒಂದು ವರ್ಷದ ಅವಧಿ ಹಾಗೆಯೇ ಇನ್ನೊಂದು ಪದ್ಧತಿಯು ಇದೆ ಸಾಧಾರಣವಾಗಿ ಪುರಣಗಳಲ್ಲಿ ಉಲ್ಲೇಖವಾಗಿರುವುದರ ಪ್ರಕಾರ ಈ ಸಂವತ್ಸರಗಳು ಹೇಗೆ ಬಂತು ಅದರ ಹೆಸರು ಹೇಗೆ ಬಂದಿತು ಸಂವತ್ಸರಗಳು ಯಾವುವು ಅನ್ನುವುದರ ಬಗ್ಗೆ ತಿಳಿಯುವುದಾದರೆ
ಬಹಳಷ್ಟು ಜ್ಯೋತಿಷ್ಯ ಪುಸ್ತಕಗಳಲ್ಲಿ ನಮೂದಿಸಿರುವ ಪ್ರಕಾರ ಈ ಸಂವತ್ಸರ ಎನ್ನುವುದು ಗುರು ಮತ್ತು ಶನಿಯ ಚಲನೆಯನ್ನು ಆಧರಿಸಿ ಮಾಡಿರುವಂತಹ ಪದ್ಧತಿ ಗುರುವಿಗೆ ಸಾಧಾರಣವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಅವಧಿ ಒಂದು ವರ್ಷ ಅಥವಾ ಒಂದು ಸಂವತ್ಸರ ಹಿಡಿಯುತ್ತದೆ ಅಂದರೆ ಸಾಧಾರಣವಾಗಿ 361 ದಿನಗಳು ಅದು ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು ಈ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಗುರು ಒಂದು ರಾಶಿಯಲ್ಲಿ ಪ್ರವೇಶಿಸಿದ ಸಮಯದಿಂದ ಹಿಡಿದು ಇನ್ನೊಂದು ರಾಶಿಗೆ ಪ್ರವೇಶಿಸುವ ಸಮಯದವರೆಗೂ ಬರುವ ದಿನಗಳನ್ನು ಒಟ್ಟುಗೂಡಿಸಿ ಒಂದು ಸಂವತ್ಸರ ಎಂದು ಹೇಳುತ್ತೇವೆ
ಈ ರೀತಿ ಗುರು 12 ರಾಶಿಗಳನ್ನು ಸಂಪೂರ್ಣವಾಗಿ ಬಳಸುವುದಕ್ಕೆ ಒಂದು ರಾಶಿಗೆ ಒಂದು ವರ್ಷ ಅದೇ ರೀತಿ 12 ರಾಶಿಗಳನ್ನು ಸಂಪೂರ್ಣಗೊಳಿಸುವುದಕ್ಕೆ 12 ವರ್ಷಗಳ ಅವಧಿ ಬೇಕಾಗುತ್ತದೆ ಈ 12 ವರ್ಷಗಳ ಅವಧಿಯನ್ನು ಐದು ಸಾರಿ ಗುರು ಸಂಪೂರ್ಣಗೊಳಿಸಿದರೆ ಅದು 60 ವರ್ಷಗಳಾಗುತ್ತದೆ ಅಂದರೆ 60 ಸಂವತ್ಸರಗಳು ಈ ಅರವತ್ತು ಸಂವತ್ಸರಗಳ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಯುವುದಾದರೆ ಶನಿಯು ಸಹ ಇಲ್ಲಿ ಪ್ರಮುಖನಾಗಿದ್ದಾನೆ
ಯಾಕೆಂದರೆ ಗುರು ಮತ್ತು ಶನಿ ಬಹಳ ನಿಧಾನವಾಗಿ ಚಲಿಸುವ ಗ್ರಹಗಳು ಬಹಳ ನಿಧಾನವಾಗಿ ಚಲಿಸುವ ಗ್ರಹಗಳ ಪ್ರಭಾವ ಏನಿರುತ್ತದೆಯೋ ಅದು ಬಹಳ ಕಾಲ ಇರುತ್ತದೆ ಮತ್ತು ಅವುಗಳ ಪ್ರಭಾವವು ಸಹ ಹೆಚ್ಚಿರುತ್ತದೆ ಮತ್ತು ಗುರು ಹಾಗೂ ಶನಿ ದೊಡ್ಡ ಗ್ರಹಗಳು ಅಥವಾ ಬೃಹತ್ ಗ್ರಹಗಳು ಹಾಗಾಗಿ ಅವುಗಳ ಆಧಾರದ ಮೇಲೆ ಗುರು ಹಾಗೂ ಶನಿಯ ಚಲನೆಯನ್ನು ಆಧಾರವಾಗಿಟ್ಟುಕೊಂಡು ಮಾಡಿರುವುದು ಗುರು ಎಲ್ಲ 12 ರಾಶಿಗಳನ್ನು ಒಂದು ಸಾರಿ ಕಂಪ್ಲೀಟ್ ಮಾಡಲು 12 ವರ್ಷ ಬೇಕು ಅದೇ ಶನಿಗೆ ಒಂದು ರಾಶಿಯಲ್ಲಿ ಸಾಧಾರಣವಾಗಿ ಎರಡುವರೆ ವರ್ಷಗಳು ಇರುವುದು
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ