ಮಹಾಶಿವರಾತ್ರಿಯ ದಿನ ಶಿವನಿಗೆ ಈ ಒಂದು ದೀಪರಾಧನೆ ಮಾಡುವುದರಿಂದ ನಿಮ್ಮ ಬದುಕು ಬೆಳಕಾಗುತ್ತದೆ!

0 5,662

ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪರಾಧನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅಂದರೆ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನ ಕಡೆಗೆ ಸಾಗುವ ಈ ಒಂದು ಸಂಕೇತವನ್ನು ಈ ಒಂದು ದೀಪರಾಧನೆ ಸಾರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಕೂಡ ದೇವರ ಪೂಜೆಗಳಲ್ಲಿ ದೀಪರಾಧನೇ ಪ್ರಧಾನವಾಗಿರುತ್ತದೆ. ಇದು ಕೂಡ ನಮ್ಮ ಜೀವನದ ಕತ್ತಲನ್ನು ದೂರ ಮಾಡಿ ಬೆಳಗಿನ ಸಾಗುವ ಅಂತಹ ಒಂದು ಮಾರ್ಗ ಎಂದು ನಂಬಲಾಗಿದೆ.

ಮಹಾಶಿವರಾತ್ರಿ ದಿನ ಮಹಾಶಿವನಿಗೆ ಬಹಳ ಪ್ರಿಯವಾದ ಬಹಳ ವಿಶೇಷವಾದ ದೀಪರಾಧನೆಗಳನ್ನು ಅರ್ಪಿಸುವುದರಿಂದ ಶಿವನ ಒಂದು ಸಂಪೂರ್ಣ ಫಲ ಲಭಿಸುವುದರ ಜೊತೆಗೆ ನಮ್ಮ ಜೀವನದಲ್ಲಿ ಇರುವ ಕತ್ತಲೆ ದೂರವಾಗುತ್ತದೆ ಮತ್ತು ಅಂಧಕಾರ ದೂರವಾಗುತ್ತದೆ. ನಮ್ಮ ಬದುಕು ಬೆಳಕಾಗುತ್ತದೆ ಎಂದು ನಂಬಲಾಗಿದೆ.

ಬೆಲ್ಲದ ದೀಪರಾಧನೆ

ಶಿವನಿಗೆ ಬೆಲ್ಲದ ದೀಪರಾಧನೆ ಮಾಡಿದರೆ ಶಿವನಿಗೆ ತುಂಬಾ ಇಷ್ಟವಾಗುತ್ತದೆ. ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಾಕಿ ಓಂ ಎಂದು ಬರೆದು. ಅದಕ್ಕೆ ಅರಿಶಿನ ಕುಂಕುಮ ಹಾಕಿ ಎರಡು ಹಚ್ಚು ಬೆಲ್ಲವನ್ನು ಹಾಕಿ ಬತ್ತಿ ತುಪ್ಪವನ್ನು ಹಾಕಿ ಬೆಲ್ಲದ ದೀಪರಾಧನೆ ಮಾಡಿ ಶಿವನಿಗೆ ಆರತಿ ಮಾಡುವುದರಿಂದ ಜೀವನದಲ್ಲಿ ಅಂಧಕಾರ ದೂರವಾಗಿ ಕಷ್ಟಗಳು ದೂರವಾಗುತ್ತದೆ. ಶಿವನ ಅನುಗ್ರಹದಿಂದ ಜೀವನದಲ್ಲಿ ಸುಖ ನೆಮ್ಮದಿ ನೆಲೆಸುತ್ತದೆ.ಮಾರನೇ ದಿನ ಈ ಒಂದು ಬೆಲ್ಲವನ್ನು ಹಸುವಿಗೆ ನೀಡುವುದು ಬಹಳ ಒಳ್ಳೆಯದು.

ಅಕ್ಕಿ ಹಿಟ್ಟಿನ ದೀಪರಾಧನೆ

ಇದಕ್ಕೆ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಹಾಲನ್ನು ಬೆರೆಸಿ ಮಿಕ್ಸ್ ಮಾಡಿ ಎರಡು ಅಥವಾ ಐದು ದೀಪವನ್ನು ಮಾಡಿ ಇಟ್ಟುಕೊಂಡು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕೀ ಅರಿಶಿನ ಕುಂಕುಮವನ್ನು ಹಚ್ಚಿ ಎರಡು ವೀಳ್ಯದೆಲೆ ಇಟ್ಟು. ಇದರ ಮೇಲೆ ಅಕ್ಕಿ ಹಿಟ್ಟಿನ ದೀಪ ಇಟ್ಟು ತುಪ್ಪ ಹಾಗು ಬತ್ತಿಯನ್ನು ಹಾಕಿ ದೀಪರಾಧನೆ ಮಾಡುವುದರಿಂದಲೂ ವಿಶೇಷವಾದ ಫಲಗಳು ಲಭಿಸುತ್ತವೆ. ಮಾರನೇ ದಿನ ಅಕ್ಕಿ ಹಿಟ್ಟಿನ ದೀಪವನ್ನು ಹಸುವಿ ತಿನ್ನಲು ಕೊಡಬೇಕು.

ತೆಂಗಿನಕಾಯಿ ದೀಪರಾಧನೆ

ಇನ್ನು ಒಂದು ತೆಂಗಿನಕಾಯಿಯನ್ನು ಸರಿಯಾದ ಮಧ್ಯ ಭಾಗ ಮಾಡಿ. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ತೆಂಗಿನಕಾಯಿ ಇಟ್ಟು ಅರಿಶಿನ ಕುಂಕುಮ ಹಚ್ಚಿ ತೆಂಗಿನಕಾಯಿ ಒಳಗೆ ಎಣ್ಣೆಯನ್ನು ಹಾಕು ದೀಪರಾಧನೆ ಮಾಡುವುದರಿಂದಲೂ ಕೂಡ ಶಿವನು ಅತ್ಯಂತ ಪ್ರಸನ್ನನಾಗುತ್ತಾನೆ.ಇದನ್ನು ಮಾರನೇ ದಿನ ಪ್ರಸಾದ ಮಾಡಿ ಮನೆಯವರು ಸೇವಿಸಬಹುದು.

ಮಣ್ಣಿನ ದೀಪ

ಶಿವನ ದೇವಾಲಯದಲ್ಲಿ ಈ ದಿನ ಆದಷ್ಟು ಮಣ್ಣಿನ ದೀಪವನ್ನು ಬೆಳಗುವುದು ಕೂಡ ಅತ್ಯಂತ ಶುಭ.

Leave A Reply

Your email address will not be published.