ನಿನ್ನನ್ನು ನೋಯಿಸಿದವರು ತಾವೇ ನೋವಿನಿಂದ ನರಳುತ್ತಾರೆ

0 991

ನಿನ್ನನ್ನು ನೋಯಿಸಿದವರು ತಾವೇ ನೋವಿನಿಂದ ನರಳುತ್ತಾರೆ

ಸ್ನೇಹಿತರೆ ಪ್ರಪಂಚದಲ್ಲಿ ಯಾರು ಯಾರನ್ನು ನೋಯಿಸರಲಿ ಆದರೆ ಆ ನೋವನ್ನ ಕೊಟ್ಟವರು ಅನುಭವಿಸಲೇಬೇಕು ಇದು ಪೃಥ್ವಿಯ ನಿಯಮ ಆದರೆ ಆ ಸಮಯ ಬರುವವರೆಗೂ ನಾವು ಕಾಯಲೇಬೇಕು ನೆನಪಿರಲಿ ನಿನಗೆ ನೋವು ಕೊಟ್ಟವರು ತಾವೇ ನೋವಿನಿಂದ ನರಳಾಡುವುದು ಸತ್ಯ ನೀನು ಅದೃಷ್ಟಶಾಲಿಯಾಗಿದ್ದರೆ

ಅದನ್ನು ನಿನ್ನ ಕಣ್ಣಾರೆ ನೀನು ನೋಡೇ ನೋಡುತ್ತೀಯಾ ಹೀಗೆ ಶ್ರೀ ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೀಗೆ ಅರ್ಜುನನಿಗೆ ಉಲ್ಲೇಖಿಸಿದ್ದಾರೆ ಬಾಡಿಗೆ ಕಟ್ಟುವಾಗ ಗೊತ್ತಾಗುತ್ತದೆ ನಿನಗೆ ಸ್ವಂತ ಮನೆಯ ಬೆಲೆ ,ಹಸಿವಾದಾಗಲೇ ಗೊತ್ತಾಗೋದು ನಿನಗೆ ಅನ್ನದ ಬೆಲೆ ,ಕೈಯಲ್ಲಿ ಕೆಲಸ ಇಲ್ಲದೆ ಇರುವಾಗಲೇ ಗೊತ್ತಾಗೋದು ಹಣದ ಬೆಲೆ, ದೂರಾದಾಗಲೇ ಗೊತ್ತಾಗುವುದು ನಿನಗೆ ಮನುಷ್ಯನ ಬೆಲೆ ನಿನಗೆ ಯಾರೇ ನೋವು ಕೊಟ್ಟರು ಪರವಾಗಿಲ್ಲ ನೀನು ಮಾತ್ರ ಒಮ್ಮೆ ಕ್ಷಮಿಸಿ ಬಿಡು ಕ್ಷಮಿಸಿ ನೋಡು ಮತ್ತೆ ಮತ್ತೆ ಅದೇ ತಪ್ಪು ಮರುಕಳಿಸಿದರೆ ಅದು ನಿನಗಾಗುತ್ತಿರುವ ಮೋಸ ಎಂದು ದೂರ ಸರಿದು ಬಿಡು ನೀನು ಉತ್ತಮವಾಗಿದ್ದರೂ ಒಳ್ಳೆಯವನಾಗಿದ್ದರೂ ಎಷ್ಟೇ ಪ್ರಾಮಾಣಿಕ ವ್ಯಕ್ತಿ ನೀನಾಗಿದ್ದರು

ಕೆಲವರು ನಿನ್ನನ್ನು ಇಷ್ಟಪಡುವುದಿಲ್ಲ ನಿನ್ನ ಯೋಗ್ಯತೆ ಏನು ಅಂತ ನೀನು ಇನ್ನೊಬ್ಬರಿಗೆ ಹೇಳಿಕೊಳ್ಳುವ ಅವಶ್ಯಕತೆ ನಿನಗಿಲ್ಲ ನೀನು ಆಡುವ ಒಳ್ಳೆಯ ಮಾತು ಹಾಗೂ ಮಾಡುವಂತಹ ಒಳ್ಳೆಯ ಕಾರ್ಯ ಬೇರೆಯವರ ಅನುಭವಕ್ಕೆ ಬರುವಂತದ್ದು ಅದೇ ಮನುಷ್ಯನ ನಿಜವಾದ ಯೋಗ್ಯತೆ ಪ್ರಪಂಚದ ವಾಸ್ತವ ಹೇಗಿದೆ ಅಂದರೆ ಸತ್ಯ ಇನ್ನೇನು ಹೊಸ್ತಿಲು ದಾಟಬೇಕು ಅನ್ನುವಷ್ಟರಲ್ಲಿ ಸುಳ್ಳು ಇಡೀ ಪ್ರಪಂಚವನ್ನ ಸುತ್ತಾಡಿಕೊಂಡು ಬರುತ್ತದೆ

ಇದರಿಂದ ನಿನ್ನ ಒಳ್ಳೆಯತನ ಹಿಂದೆನೇ ಉಳಿದುಬಿಡುತ್ತದೆ ಆದರೆ ಜಯ ಸತ್ಯಕ್ಕೆ ವಿನಹ ಸುಳ್ಳಿಗಲ್ಲ ನೀನು ಒಳ್ಳೆಯವನಾಗಿಯೇ ಇರುತ್ತೀಯ ಒಳ್ಳೆಯವನಾಗಿಯೇ ಬದುಕು ಸಾಗಿಸುತ್ತೀಯಾ ಒಳ್ಳೆಯ ನಡತೆಯಿಂದ ನಿನಗೆ ಯಾವುದೇ ಆರ್ಥಿಕ ಲಾಭ ಸಿಗದೇ ಇರಬಹುದು ಆದರೆ ನೀನು ನಿನ್ನ ಒಳ್ಳೆಯತನದಿಂದ ಭಗವಂತನನ್ನು ಗೆಲ್ಲುತ್ತೀಯ ಅನ್ನೋದು ನಿಜ .ಆದರೆ ಮನುಷ್ಯ ಯಾವ ಲೆಕ್ಕ ಇದು ಅರ್ಥವಿಲ್ಲದ ಲೋಕ ಅರ್ಥವಾಗದೆ ನೀನು ಉಳಿದುಬಿಡಬೇಕು

ನೀನು ತುಂಬಾ ಒಳ್ಳೆಯವನು ನಿನ್ನ ನಡವಳಿಕೆ ಬಹಳ ಒಳ್ಳೆಯದು ನೀನು ಮಾಡುತ್ತಿರುವುದು ಪುಣ್ಯದ ಕೆಲಸ ಅಂತ ಇನ್ನೊಬ್ಬರಿಗೆ ಅರ್ಥ ಮಾಡಿಸುವ ಅಗತ್ಯ ನಿನಗಿಲ್ಲ ನಿನ್ನ ಕೆಲಸವನ್ನು ನೀನು ಪ್ರಾಮಾಣಿಕವಾಗಿ ಮಾಡುತ್ತಾ ಹೋಗು ಪರಿಶ್ರಮ ನಿನ್ನದಾಗಲಿ ಯಾವುದೇ ಫಲ ಅಪೇಕ್ಷೆ ಇಲ್ಲದೆ ಸಂತೋಷದಿಂದ ಪ್ರಾಮಾಣಿಕತೆಯಿಂದ ನೀನು ನಿನ್ನ ಕೆಲಸ ಮಾಡಿದರೆ ಫಲ ನಿನಗಲ್ಲದೆ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ

ಕೊನೆಗೆ ಒಂದು ಮಾತು ಹಣತೆ ಮಾತನಾಡುವುದಿಲ್ಲ ಆದರೆ ಬೆಳಕು ಅದರ ಪರಿಚಯವನ್ನು ನೀಡುತ್ತದೆ. ಅದೇ ರೀತಿ ನೀನು ನಿನ್ನ ಒಳ್ಳೆಯತನವನ್ನು ಯಾರ ಮುಂದೇನು ತೋರಿಸಿಕೊಳ್ಳುವ ಅವಶ್ಯಕತೆ ಇಲ್ಲ ನಿನ್ನ ಒಳ್ಳೆಯತನ ನಿನ್ನ ಒಳ್ಳೆಯ ಕೆಲಸಗಳೇ ಸದ್ದು ಮಾಡುತ್ತದೆ.

Leave A Reply

Your email address will not be published.